ಬೆಂಗಳೂರು: ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯಗಳಲ್ಲಿ ಇತ್ತೀಚಿಗೆ ಪಕೃತಿ ವಿಕೋಪದಿಂದ ಗೋವುಗಳು ಮತ್ತು ಭಕ್ತ ಜನರಿಗೆ ಸಂಕಷ್ಟ ಒದಗಿದ ಸಂದರ್ಭದಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಮಾರ್ಗದರ್ಶನ ಪಡೆದು ಶ್ರೀಕರಾರ್ಚಿತ ಶ್ರೀಸೀತಾರಾಮಚಂದ್ರ ಚಂದ್ರಮೌಳೀಶ್ವರ ರಾಜರಾಜೇಶ್ವರೀ ದೇವತಾ ಸನ್ನಿಧಿಯಲ್ಲಿ ಹವ್ಯಕ ಮಹಾಮಂಡಲ, ಶ್ರೀಮಠದ ಕಾಮದುಘಾ ವಿಭಾಗ ಹಾಗೂ ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ.) ಬೆಂಗಳೂರು ವತಿಯಿಂದ ಗೋವು ಹಾಗೂ ಜನರ ಸಂಕಷ್ಟ ಪರಿಹಾರಕ್ಕೆ ಹರಕೆ ಪ್ರಾರ್ಥನೆ ಮಾಡಿಕೊಂಡಿದ್ದು, ಸೆ. 18 ರಂದು ಹರಿಕೆ ಸಮರ್ಪಣೆ
ನಡೆಯಲಿದೆ.

RELATED ARTICLES  ಚುನಾವಣಾ ಆಯೋಗದ ಪತ್ರಕ್ಕೆ ಮಣಿದ ಸರ್ಕಾರ, ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಬ್ರೇಕ್!

ಇದೀಗ ಪ್ರಾರ್ಥನೆಯು ಫಲಿಸಿದ್ದು, ಅತಿವೃಷ್ಟಿ ನಿವಾರಣೆಯಾಗಿದೆ. ಈಗ ಹರಕೆಯನ್ನು ಸಲ್ಲಿಸಿ ನಾಡಿನ ಜನ-ಜಾನುವಾರುಗಳ ಉತ್ತರೋತ್ತರ ಒಳಿತಿಗೆ ಪ್ರಾರ್ಥಿಸಬೇಕಿದೆ.

ಹಾಗಾಗಿ, ಪರಮಪೂಜ್ಯ ಶ್ರೀಗಳ ಮಾರ್ಗದರ್ಶನ ಪಡೆದು ದಿನಾಂಕ 18 ಸೆಪ್ಟೆಂಬರ್ 2018ನೇ ಮಂಗಳವಾರದಂದು ಶ್ರೀರಾಮಚಂದ್ರಾಪುರ ಮಠದ ಬೆಂಗಳೂರಿನ ಶಾಖಾಮಠವಾದ ಗಿರಿನಗರದ ಶ್ರೀ ರಾಮಾಶ್ರಮದಲ್ಲಿ ಹರಕೆ ಸಮರ್ಪಣೆ ನಡೆಯಲಿದ್ದು, ಶ್ರೀಕರಾರ್ಚಿತ ದೇವರಿಗೆ ಸಮಗ್ರ ಪೂಜಾಸೇವೆ , ಶ್ರೀಮಹಾ ಗಣಪತಿ ಹವನ, ಶ್ರೀರಾಮ ತಾರಕ ಹವನ, ಶ್ರೀಲಲಿತಾ ಹವನ, ಲಕ್ಷ ಕುಂಕುಮಾರ್ಚನೆ ಸೇವೆಗಳನ್ನು ಸಲ್ಲಿಸಲು ಹವ್ಯಕ ಮಹಾಮಂಡಲ , ಕಾಮದುಘಾ ವಿಭಾಗ ಹಾಗೂ ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ.) ಬೆಂಗಳೂರು ವತಿಯಿಂದ ನಿಶ್ಚಯಿಸಿದೆ.

RELATED ARTICLES  ಮಠ,ದೇಗುಲ ಸುತ್ತೋಲೆ ವಾಪಸ್‌ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತೀರ್ಮಾನ ಹಿಂದಕ್ಕೆ!

ಈ ಕಾರ್ಯಕ್ರಮಕ್ಕೆ ಹವ್ಯಕ ಮಹಾಮಂಡಲ ವ್ಯಾಪ್ತಿಯ ಸಮಸ್ತ ಮಾತೆಯರು ಭಾಗಿಗಳಾಗಿ ಕುಂಕುಮಾರ್ಚನೆಯನ್ನು ನಡೆಸಿಕೊಡಲು ಈ ಮೂಲಕ ಕೋರಿದೆ. ಹಾಗೆಯೇ, ಮಹಾಮಂಡಲ ವ್ಯಾಪ್ತಿಯ ಸರ್ವ ಶಿಷ್ಯರ ತೊಡಗಿಸುವಿಕೆಯಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ನಡೆಸಲು ಉದ್ದೇಶಿಸಿದ್ದು, ಈ ಮೂಲಕ ಶ್ರೀ ಮಠದ ಸರ್ವ ಶಿಷ್ಯ – ಭಕ್ತರು ಭಾಗಿಗಳಾಗಿ ಶ್ರೀ ಗುರುದೇವರ ಕೃಪೆ ಪಡೆಯಲು ಶ್ರೀರಾಮಚಂದ್ರಾಪುರಮಠದ ಹವ್ಯಕ ಮಹಾಮಂಡಲದ ಅಧ್ಯಕ್ಷರು ಸರ್ವರನ್ನೂ ಆಮಂತ್ರಿಸಿದ್ದಾರೆ.