ಹೊನ್ನಾವರ:ಕರ್ಕಿಯಲ್ಲಿ ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿದ್ದ ಮತ್ತೋರ್ವ ಮಹಿಳೆ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ . ಶನಿವಾರ ಸಾಯಂಕಾಲ ಕರ್ಕಿಯ ದೈವಜ್ಞ ಮಠದ ಸಮೀಪ ಟೆಂಪೊ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿತ್ತು .ಈ ಸಂದರ್ಭದಲ್ಲಿ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದರೆ ಉಳಿದವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು .

ಹೊನ್ನಾವರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹಲವರನ್ನು ಮಣಿಪಾಲ ಮಂಗಳೂರು ಆಸ್ಪತ್ರೆಗಳಿಗೆ ರವಾನಿಸಲಾಗಿತ್ತು .ಅದೇ ರೀತಿ ಉಡುಪಿಗೆ ಸೇರಿಸಲಾಗಿದ್ದ ತಾರಾ ಹೆಗಡೆ ಇಂದು ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ .

RELATED ARTICLES  ಯಲ್ಲಾಪುರದಲ್ಲಿ ಅಕ್ರಮವಾಗಿ ಲಾರಿಯ ಮೂಲಕ ಕಸಾಯಿಖಾನೆಗೆ ಕೋಣಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಮೂವರ ಬಂಧನ.

ತಾರಾ ಹೆಗಡೆ ಕುಮಟಾದಲ್ಲಿ ಸರ್ಕಾರಿ ಉದ್ಯೋಗ ಮಾಡುತ್ತಿದ್ದು ತನ್ನ ಓರ್ವರು ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ . ಅಪಘಾತದಲ್ಲಿ ಇವರ ತಲೆಗೆ ತೀವ್ರತರ ಪೆಟ್ಟು ಬಿದ್ದ ಕಾರಣ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು .

RELATED ARTICLES  ಪತಿ-ಪತ್ನಿ ನಡುವೆ ಹೊಡೆದಾಟ ; ಪತಿ ಆಸ್ಪತ್ರೆಗೆ ದಾಖಲು

ಎರಡು ದಿನ ವೈದ್ಯರು ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ . ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅವರ ಕುಟುಂಬದವರು ಹಾಗೂ ಅವರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ .