ದಿನಾಂಕ 18/09/2018 ರ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ …

ಮೇಷ:–
ಕಾರ್ಯಕ್ಷೇತ್ರದಲ್ಲಿನ ಸನ್ನಿವೇಶಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವಿರಿ. ಬಾಳಸಂಗಾತಿಯನ್ನು ನಿರ್ಲಕ್ಷಿಸದಿರಿ. ಅವಿವಾಹಿತರ ವೈವಾಹಿಕ ಕನಸು ನನಸಾಗಲಿದೆ. ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಸ್ತ್ರೀಯರಿಗೆ ಮನೋಭಿಲಾಷೆ ಈಡೇರಿಲಿದೆ.
ಅದೃಷ್ಟ ಸಂಖ್ಯೆ-3

ವೃಷಭ:-
ಕೃಷಿಕರಿಗೆ ಆರ್ಥಿಕ ಸಮಸ್ಯೆ.ವ್ಯವಹಾರಗಳಲ್ಲಿ ಲಾಭ. ಶುಭ ಕಾರ್ಯ ನಡೆಸಲು ತಯಾರಿ. ನೌಕರ ವರ್ಗದವರಿಗೆ ತಮ್ಮ ಕೆಲಸದಲ್ಲಿ ಉದಾಸೀನತೆ. ವ್ಯವಹಾರಗಳ ಬಗ್ಗೆ ಜಾಗ್ರತೆ ಅವಶ್ಯಕ. ಸಂಗಾತಿಯ ಮಾತುಗಳಿಗೆ ಅಪಾರ್ಥ ಬೇಡ.
ಅದೃಷ್ಟ ಸಂಖ್ಯೆ-7

ಮಿಥುನ:–
ಖರ್ಚುಗಳಿದ್ದರೂ ಆರ್ಥಿಕ ಅನುಕೂಲ ಇರಲಿದೆ. ಉದ್ವೇಗ ಬೇಡ, ಯೋಗ್ಯ ವಯಸ್ಕರಿಗೆ ಕಂಕಣ ಭಾಗ್ಯ. ಅಳೆದು ತೂಗಿ ಮಾತನಾಡುವುದು ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ಅಧಿಕಾರಿಗಳಿಗೆ ಭಡ್ತಿ. ಧರ್ಮಕಾರ್ಯಗಳಿಗೆ ಹಣ ಖರ್ಚು. ಆರೋಗ್ಯದ ಕಡೆ ಗಮನ ಇರಲಿ.
ಅದೃಷ್ಟ ಸಂಖ್ಯೆ-9

ಕಟಕ :-
ದೂರದ ಪ್ರಯಾಣದಿಂದಾಗಿ ಅಧಿಕ ಆದಾಯ. ಸಾಂಸಾರಿಕವಾಗಿ ಮನಸ್ಸಿಗೆ ಸಮಾಧಾನ ಇರದು. ವಿದ್ಯಾರ್ಥಿಗಳಿಗೆ ಬಿಡುವಿನ ದಿನವಾಗಿ ನೆಮ್ಮದಿ ದೊರಕಲಿದೆ. ದುಡುಕಿನ ಕೆಲಸಕಾರ್ಯಗಳು ಹಿನ್ನಡೆ ತಂದು ಕೊಡಲಿವೆ.
ಅದೃಷ್ಟ ಸಂಖ್ಯೆ-0

RELATED ARTICLES  ಉಪಕಾರ ಮಾಡಿದವರಿಗೆ ಸರಕಾರವೇ ನೀಡುತ್ತೆ 5 ಸಾವಿರ ರೂ. ಬಹುಮಾನ..!

ಸಿಂಹ:–
ಆರ್ಥಿಕ ಸ್ಥಿತಿ ಉತ್ತಮವಾಗಿದ್ದು, ಕುಟುಂಬದಲ್ಲಿ ತುಸು ನೆಮ್ಮದಿ ತೋರಿ ಬರುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಬಡ್ತಿ. ಸಾಂಸಾರಿಕವಾಗಿ ಖರ್ಚುವೆಚ್ಚಗಳು ಅಧಿಕ. ತಾಳ್ಮೆಯನ್ನು ಕಳೆದುಕೊಳ್ಳದಿರಿ.
ಅದೃಷ್ಟ ಸಂಖ್ಯೆ-1

ಕನ್ಯಾ :-
ಮನೆಯ ಅಲಂಕಾರಕ್ಕಾಗಿ ವೆಚ್ಚ. ವೈಯಕ್ತಿಕ ಬದುಕಿನಲ್ಲಿ ಪತ್ನಿಯ ಸಹಕಾರ ವಾಹನಗಳ ವ್ಯವಹಾರದಲ್ಲಿ ಉತ್ತಮ ಲಾಭ. ವೃತ್ತಿರಂಗದಲ್ಲಿ ಮುನ್ನಡೆ ಹಾಗೆ ಆರ್ಥಿಕ ಲಾಭ. ಸಾಂಸಾರಿಕ ಜೀವನದಲ್ಲಿ ಸ್ವಲ್ಪ ವಿರಸ ತೋರುವ ಸಾಧ್ಯತೆ.ಕೈಗೆತ್ತಿಕೊಂಡ ಕಾರ್ಯಗಳಲ್ಲಿ ಯಶಸ್ಸು.
ಅದೃಷ್ಟ ಸಂಖ್ಯೆ-5

ತುಲಾ:–
ವ್ಯಾಪಾರ ವ್ಯವಹಾರಗಳು ಲಾಭಕರ. ಅವಿವಾಹಿತರಿಗೆ ಪ್ರಯತ್ನಬಲ ಅಗತ್ಯವಿದೆ‌. ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಕಂಡು ಬರುವುದು. ಮನೆಯ ವ್ಯವಹಾರಗಳಲ್ಲಿ ತೊಂದರೆಗಳು ದೂರವಾಗಿ ನೆಮ್ಮದಿ ಮೂಡಲಿದೆ. ಶ್ರಮವಹಿಸಿ ಮಾಡುವ ಕೆಲಸಗಳಿಗೆ ವಿಘ್ನ ಬರುವ ಸಾಧ್ಯತೆ ಇದೆ.
ಅದೃಷ್ಟ ಸಂಖ್ಯೆ-2

ವೃಶ್ಚಿಕ :-
ಆರ್ಥಿಕವಾಗಿ ತುಸು ನೆಮ್ಮದಿ ತಂದರೂ ಖರ್ಚು ಮಿತಿ ಇರಲಿ.ಕೆಲಸ ಕಾರ್ಯಗಳನ್ನು ನಿರ್ವಹಿಸಿ ಉತ್ತಮ ಫಲ ಪಡೆಯಲಿದ್ದೀರಿ. ವೃತ್ತಿರಂಗದಲ್ಲಿ ಅನಾವಶ್ಯಕವಾಗಿ ನಿಷ್ಠುರತೆ. ವ್ಯಾಪಾರ-ವ್ಯವಹಾರಗಳು ನಿಮ್ಮ ಮನಸ್ಸಿನಂತೆ ಆಗುವುದು. ಹಿರಿಯರೊಡನೆ ವಾದ ವಿವಾದ.
ಅದೃಷ್ಟ ಸಂಖ್ಯೆ-6

RELATED ARTICLES  ಬಿಜೆಪಿಯವರದ್ದು ಮತಕ್ಕಾಗಿ ದಿಕ್ಕು ತಪ್ಪಿಸುವ ಚಾಳಿ : ಭಾಸ್ಕರ ಪಟಗಾರ 

ಧನಸ್ಸು:–
ವೃತ್ತಿರಂಗದಲ್ಲಿ ಹಂತ ಹಂತವಾಗಿ ನೆಮ್ಮದಿ.ಹೊಸ ವ್ಯವಹಾರವನ್ನು ಪ್ರಾರಂಭಿಸಲು ಚಿಂತನೆ. ದೇವತಾ ದರ್ಶನ ಭಾಗ್ಯಕ್ಕಾಗಿ ಖರ್ಚು. ಗುರು ಹಿರಿಯರ ಸಲಹೆ ಪಡೆಯಿರಿ.ಆರೋಗ್ಯ ಉತ್ತಮವಾಗಲಿದೆ.
ಅದೃಷ್ಟ ಸಂಖ್ಯೆ-4

ಮಕರ :-
ಭವಿಷ್ಯದ ಬಗ್ಗೆ ಚಿಂತಿಸದೆ, ಅವಕಾಶಗಳನ್ನು ಸದುಪಯೋಗಿಸಿರಿ.ಮಕ್ಕಳ ನೆಮ್ಮದಿಗಾಗಿ ಬೊಂಬೆಗಳು ಅಥವಾ ಕರಕುಶಲ ವಸ್ತುಗಳ ಖರೀದಿ. ನಿಮ್ಮ ಕ್ರಿಯಾಶೀಲತೆ, ಪ್ರಯತ್ನಬಲಕ್ಕೆ ಅಭಿವೃದ್ಧಿ ತರಲಿದೆ.
ಅದೃಷ್ಟ ಸಂಖ್ಯೆ-8

ಕುಂಭ:-
ವ್ಯಾಪಾರ, ವ್ಯವಹಾರಗಳಲ್ಲಿ ಉನ್ನತಿ.ವಾಹನ ಖರೀದಿ ಮಾಡಲಿದ್ದೀರಿ. ಪ್ರಯಾಣದಲ್ಲಿ ಗಣ್ಯ ವ್ಯಕ್ತಿಗಳೊಂದಿಗೆ ಸಮಾಲೋಚನೆ. ಸಾಂಸಾರಿಕ ನೆಮ್ಮದಿ ಸಿಗಲಿದೆ. ನಡೆನುಡಿಯಲ್ಲಿ ಸೌಮ್ಯತೆ ಇರಲಿ.ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ಅದೃಷ್ಟ ಸಂಖ್ಯೆ-9

ಮೀನ:-
ಹಿರಿಯರ ಮಾತಿನಂತೆ ನಡೆದಲ್ಲಿ ಹೆಚ್ಚಿನ ಸಂಪಾದನೆ ಸಾಧ್ಯ. ಮನೆಯಲ್ಲಿ ಹಬ್ಬದ ವಾತಾವರಣ. ಆರ್ಥಿಕವಾಗಿ ಉತ್ತಮವಾಗಿದ್ದರೂ, ಕೋರ್ಟು ಕಚೇರಿಯ ಕೆಲಸಗಳು ಸರಾಗವಾಗಿ ನಡೆಯಲಿವೆ. ಖರ್ಚುವೆಚ್ಚಗಳಲ್ಲಿ ಮಿತಿ ಇರಲಿ. ಹಣಕಾಸಿನ ಸ್ಥಿತಿಯು ಉತ್ತಮ.ದೇವತಾ ಕೆಲಸಕಾರ್ಯಗಳಿಗೆ ಸಂಚಾರ.
ಅದೃಷ್ಟ ಸಂಖ್ಯೆ-3