ಕುಮಟಾ : ಸಾರ್ವಜನಿಕ ಶಿಕ್ಷಣ ಇಲಾಖೆ ಉತ್ತರ ಕನ್ನಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕುಮಟಾ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಲನಗದ್ದೆಯವರ ಸಹಯೋಗದಲ್ಲಿ ನಡೆದ ಕುಮಟಾ ತಾಲೂಕಾ ಮಟ್ಟದ 14 ವರ್ಷ ವಯೋಮಿತಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಇಲಾಖಾ ಕ್ರೀಡಾಕೂಟದಲ್ಲಿ ಕೊಂಕಣ ಎಜ್ಯುಕೇಶನ ಟ್ರಸ್ಟ ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು ಅವರಿಗೆ ಇಂದು ಶಾಲಾ ಆವಾರದಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಕುಮಾರಿ ಅನನ್ಯಾ ಕಾಮತ 200ಮೀ,400ಮೀ ಓಟದಲ್ಲಿ ಪ್ರಥಮ,ಕುಮಾರಿ ನಯನಾ ಹೆಗಡೆ 200ಮೀ ಓಟದಲ್ಲಿ ದ್ವಿತೀಯ 100ಮೀ ಓಟದಲ್ಲಿ ಪ್ರಥಮ, ಗಗನ ನಾಯ್ಕ 100ಮೀ ಓಟದಲ್ಲಿ ಪ್ರಥಮ 200 ಮೀ ಓಟದಲ್ಲಿ ದ್ವಿತೀಯ, ಸೋನಾಲಿ ಶೇಟ್ ಚಕ್ರ ಎಸೆತದಲ್ಲಿ ದ್ವಿತೀಯ ಹಾಗೂ ಬಾಲಕೀಯರ 4*100ಮೀ ರೀಲೆ ಅನನ್ಯಾ ಕಾಮತ್,ನಯನಾ ಹೆಗಡೆ,ಸೌಮ್ಯಾ ಪಟಗಾರ,ಗಾಯತ್ರಿ ಗುನಗ, ಓಟದಲ್ಲಿ ಪ್ರಥಮ
ಹಾಗೂ ಬಾಲಕರ ರೀಲೆಯಲ್ಲಿ ಗಗನ ನಾಯ್ಕ, ಶ್ರೇಯಸ್ ಕಿಣಿ,ಪ್ರೀತಮ ನಾಯ್ಕ ,ಸುಗಮ ನಾಯ್ಕ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಇವರನ್ನು ಶಾಲಾ ಮುಖ್ಯಶಿಕ್ಷಕರು ಶ್ರೀಮತಿ ಸುಜಾತಾ ನಾಯ್ಕ, ಶಾಲೆಯಲ್ಲಿ ಅಭಿನಂದಿಸಿ ಶುಭ ಹಾರೈಸಿದರು. ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.ತರಬೇತುದಾರರಾದ ಶ್ರೀಮತಿ ಸುಮಂಗಲಾ ನಾಯ್ಕ ಈಶ್ವರ ಗೌಡ, ಜಯರಾಜ ಶೇರುಗಾರ, ನಾಗರಾಜ ಭಂಡಾರಿಯವರಿಗೆ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.