ಹೊನ್ನಾವರ:ಡಾ.ಎಂ.ಪಿ.ಕರ್ಕಿ ಇನಸ್ಟಿಟ್ಯೂಟ್ ಆಪ್ ಎಕ್ಸಲೆನ್ಸ್ ಎಂಡ್ ರೀಸರ್ಚ ಇದರ ಅಶ್ರಯದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ನಡೆಸುವ ಸಿಎ ಫೌಂಡೇಶನ್ ಕೋರ್ಸನ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಮಾಜಿ ಶಾಸಕ ಡಾ.ಎಂ.ಪಿ.ಕರ್ಕಿ ದೀಪ ಬೆಳಗಿಸಿ ಸಿಎ ಫೌಂಡೇಶನ್ ಕೋರ್ಸ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಂಪಿಇ ಸೊಸೈಟಿಯ ಉಪಾಧ್ಯಕ್ಷ ಕೃಷ್ಣಮೂರ್ತಿ ಭಟ್ಟ”ಸರಿಯಾದ ತರಬೇತಿ ಸಿಗದೆ ಜಿಲ್ಲೆಯ ಹಲವು ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಲಭ್ಯವಿರುವ ಉದ್ಯೋಗಾವಕಾಶದಿಂದ ವಂಚಿತರಾಗಿದ್ದು ಈ ಕೊರತೆಯನ್ನು ನೀಗಿಸಲು ವಿವಿಧ ಕೋರ್ಸಗಳಿಗೆ ಗುಣಮಟ್ಟದ ತರಬೇತಿ ಹಮ್ಮಿಕೊಂಡಿದ್ದೇವೆ’ ಎಂದು ತಿಳಿಸಿದರು.
“ಹೆಚ್ಚು ಹಣ ನೀಡಿದರೆ ಮಾತ್ರ ಉತ್ತಮ ಶಿಕ್ಷಣ ದೊರಕುತ್ತದೆ ಎನ್ನುವ ತಪ್ಪು ಗ್ರಹಿಕೆಯಿಂದ ವಿದ್ಯಾರ್ಥಿಗಳು ಹಾಗೂ ಪಾಲಕರು ಹೊರಬರಬೇಕು’ ಎಂದು ಅವರು ಸಲಹೆ ನೀಡಿದರು.
ಎಂಪಿಇ ಸೊಸೈಟಿಯ ಸದಸ್ಯ ಪ್ರೊ.ಜಿ.ಪಿ.ಹೆಗಡೆ ಮಾತನಾಡಿ,”ಸ್ವ-ಸಾಮಥ್ರ್ಯದಲ್ಲಿ ನಂಬುಗೆಯಿಟ್ಟು ಆತ್ಮವಿಶ್ವಾಸದೊಂದಿಗೆ ಮುನ್ನಡೆದರೆ ಬದುಕಿನಲ್ಲಿ ಉನ್ನತ ಸ್ಥಾನಕ್ಕೇರಬಹುದು’ ಎಂದು ಹೇಳಿದರು.
ಸಿಎ ಪದವೀಧರ ಶಶಾಂಕ ವಿ.ಹೆಗಡೆ ಮಾತನಾಡಿ,”ಸಿಎ ಪರೀಕ್ಷೆ ಪಾಸಾಗಲು ಸಾಮಾನ್ಯ ಬುದ್ಧಿಮತ್ತೆಯುಳ್ಳ ವಿದ್ಯಾರ್ಥಿಗಳಿಂದ ಸಾಧ್ಯವಿಲ್ಲವೆಂಬುದು ತಪ್ಪು ಕಲ್ಪನೆ.ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಮುಖ್ಯವಾಗಿ ಪ್ರಯತ್ನ ಹಾಗೂ ತಾಳ್ಮೆ ಇರಬೇಕು ಎಂದು ತಮ್ಮ ಅನುಭವವನ್ನು ವಿವರಿಸಿದರು.
ಡಾ.ವಿ.ಎಂ.ಭಂಡಾರಿ ಕೋರ್ಸ ಕುರಿತು ಮಾಹಿತಿ ನೀಡಿದರು.ಎಸ್ಡಿಎಂ ಪದವಿ ಕಾಲೇಜಿನ ಪ್ರಾಚಾರ್ಯೆ ಡಾ.ವಿಜಯಲಕ್ಷ್ಮೀ ನಾಯ್ಕ,ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ಎಚ್.ಭಟ್ಟ ಉಪಸ್ಥಿತರಿದ್ದರು.
ಉಪನ್ಯಾಸಕ ಪ್ರಶಾಂತ ಮೂಡಲಮನೆ ನಿರೂಪಿಸಿದರು.ಇನಸ್ಟಿಟ್ಯೂಟ್ನ ನಿರ್ದೇಶಕ ಡಾ.ಶಿವರಾಮ ಶಾಸ್ತ್ರಿ ವಂದಿಸಿದರು.