ಶಿರಸಿ: ದಿ ತೋಟಗಾರ್ಸ್ ರೂರಲ್ ಕೋ-ಆಪರೇಟಿವ್ ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟಿ ಲಿ,ಶಿರಸಿ(ಟಿಆರ್‌ಸಿ) ಇದರ 105ನೇಯ ವಾರ್ಷಿಕ ಸರ್ವ ಸಾಧಾರಣ ಸಭೆಯು ಇಂದು ಸಂಘದ ಕಟ್ಟಡದಲ್ಲಿ ನಡೆಯಿತು. ವಿಶೇಷ ಆಹ್ವಾನಿತರಾಗಿ ಟಿಎಸ್‍ಎಸ್‍ನ ಅಧ್ಯಕ್ಷರಾದ ಶಾಂತಾರಾಮ ಹೆಗಡೆ ಆಗಮಿಸಿದ್ದರು.

ಸಂಘವು ವರದಿ ವರ್ಷದಲ್ಲಿ 93.92 ಲಕ್ಷ ರೂ. ನಿಕ್ಕೀ ಲಾಭಗಳಿಸಿದ್ದು, ಸದಸ್ಯರಿಗೆ ಅವರ ಶೇರಿನ ಮೇಲೆ ಶೇ.7 ಡಿವಿಡೆಂಡ್ ಘೋಷಿಸಿತು. ಸಂಘದಲ್ಲಿ ಉತ್ತಮವಾಗಿ ವ್ಯವಹರಿಸಿದ 15 ಹಿರಿಯ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಮೂಲಕ ಬೆಳೆ ವಿಕ್ರಿ ಮಾಡಿದ ಸದಸ್ಯರಿಗೆ ಕಾರ್ಪೆಟ್(ಜಮಖಾನ)ಕೊಡುವ ಕುರಿತು ತೀರ್ಮಾನ ಕೈಗೊoಡಿತು .ಸಭೆಯನ್ನುದ್ದೇಶಿಸಿ ಸಂಘದ ನಿರ್ದೇಶಕರಾದ ಜಿ.ವಿ.ಜೋಶಿ ಕಾಗೇರಿ ಮಾತನಾಡಿದರು. ನಿರ್ದೇಶಕರಾದ ಶಿವಾನಂದ ಭಟ್ ನಿಡಗೋಡ ಸನ್ಮಾನ ಪತ್ರ ವಾಚಿಸಿದರು.

RELATED ARTICLES  ಕುಮಟಾ : ವ್ಯಕ್ತಿ ನಾಪತ್ತೆ : ದೂರು ದಾಖಲು

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ವಹಿಸಿದ್ದರು. ಸಂಘದ ಉಪಾಧ್ಯಕ್ಷರಾದ ಲೋಕೇಶ ಹೆಗಡೆ ಹುಲೇಮಳಗಿ ಹಾಗೂ ಎಲ್ಲ ನಿರ್ದೇಶಕರು ಹಾಗೂ ಕೆಡಿಸಿಸಿ ಉಪಾಧ್ಯಕ್ಷ ಭಾಸ್ಕರ ಹೆಗಡೆ, ಕಾಗೇರಿ, ಲೆಕ್ಕ ಪರಿಶೋಧಕರಾದ ಆರ್.ಎನ್.ಹೆಗಡೆ ಯಲ್ಲಾಪುರ ಉಪಸ್ಥಿತರಿದ್ದರು.ಸಹಸ್ರ ಸಂಖ್ಯೆಯಲ್ಲಿ ಸದಸ್ಯರು ಸಭೆಗೆ ಹಾಜರಾಗಿ ಸಭೆಯ ಕಾರ್ಯ ಕಲಾಪದಲ್ಲಿ ಪಾಲ್ಗೊಂಡರು.

RELATED ARTICLES  ಗುಡಿಗಾರಗಲ್ಲಿ‌ ಶಾಲೆಯಲ್ಲಿ ಗಮನ ಸೆಳೆದ ಮಕ್ಕಳ ವಿಜ್ಞಾನ ವಸ್ತುಪ್ರದರ್ಶನ

ನಿರ್ದೇಶಕರಾದ ವಿ.ಜಿ.ಹೆಗಡೆ ಸೋಮ್ನಳ್ಳಿ ವಂದನಾರ್ಪಣೆ ಮಾಡಿದರು. ಪ್ರಭಾರಿ ಮುಖ್ಯ ಕಾರ್ಯನಿರ್ವಾಹಕರಾದ ಎಂ.ಟಿ.ಮಡಿವಾಳ ಹಾಗೂ ಸಂಘದ ಸಿಬ್ಬಂದಿ ಜಿ.ಜಿ.ಹೆಗಡೆ ಕುರುವಣಿಗೆ ಕಾರ್ಯಕ್ರಮ ನಿರ್ವಹಿಸಿದರು.