ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಅಮೆರಿಕಾ ಮೂಲಕದ ಅಮೆಜಾನ್, ತನ್ನ ಪ್ರತಿ ಸ್ಪರ್ಧಿ ವಾಲ್‌ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್‌ಗೆ ಸೆಡ್ಡು ಹೊಡೆಯುವ ಸಲುವಾಗಿ ಹೊಸದೊಂದು ಆಫರ್ ಅನ್ನು ನೀಡಲು ಮುಂದಾಗಿದೆ. ಇದರಲ್ಲಿ ಬಳಕೆದಾರು ಈಗ ಮೊಬೈಲ್ ಖರೀದಿಸಿ, ನಂತರದಲ್ಲಿ ಹಣವನ್ನು ಪಾವತಿ ಮಾಡುವ ಅವಕಾಶವನ್ನು ಮಾಡಿಕೊಡಲು ಮುಂದಾಗಿದೆ. ಇದು ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿಕೊಡಲಿದೆ ಎನ್ನಲಾಗಿದೆ.
ಈಗಾಗಲೇ ಮಾರುಕಟ್ಟೆಗೆ ಅಮೆಜಾನ್ ಪೇ ಸೇವೆಯನ್ನು ಲಾಂಚ್ ಮಾಡಿರುವ ಅಮೆಜಾನ್, ಈ ಸೇವೆಯ ಮೂಲಕವೇ EMI ಅನ್ನು ನೀಡಲು ಮುಂದಾಗಿದೆ. ಬಳಕೆದಾರರಿಗೆ ಆನ್‌ಲೈನ್ ಶಾಪಿಂಗ್ ಇನ್ನಷ್ಟು ಸುಲಭವನ್ನು ಮಾಡುವ ಸಲುವಾಗಿಯೇ ಈ ಸೇವೆಯನ್ನು ಲಾಂಚ್ ಮಾಡಿದ್ದು, ಮೊದಲಿಗೆ ಮೊಬೈಲ್ ಆಪ್ ಬಳಕೆದಾರರಿಗೆ ಮಾತ್ರವೇ ಈ ಸೇವೆಯನ್ನು ನೀಡುತ್ತಿದೆ. ಇದರಿಂದಾಗಿ ಆಮೆಜಾನ್‌ನಲ್ಲಿ ಮೊಬೈಲ್ ಮಾರಾಟ ಹೆಚ್ಚಾಗುವ ಸಾಧ್ಯತೆ ಅಧಿಕವಾಗಿದೆ.
ಇದೊಂದು ಇನ್‌ಸ್ಟೆಂಟ್ ಕ್ರೆಡಿಟ್ ಸೇವೆಯಾಗಿದ್ದು, ಇದರಲ್ಲಿ ಬಳಕೆದಾರರಿಗೆ ಕ್ರೆಡಿಟ್ ಕಾರ್ಡ್ ಮೂಲಕ EMI ಸೇವೆಯನ್ನು ನೀಡಲು ಮುಂದಾಗಿದೆ. ಇದಕ್ಕದಾಗಿ ಕ್ಯಾಪಿಟಲ್ ಎನ್ನುವ ಕಂಪನಿಯೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಇದು ಆಟೋ ಮೆಟಿಕ್ ಆಗಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.
ಅಮೆಜಾನ್ ಪೇ EMI ಸೇವೆಯನ್ನು ನೀಡಲು ಅಮೆಕಾನ್ HDFC, ICICI, ಕೆನೆರಾ ಬ್ಯಾಂಕ್, ಸಿಟಿ, ಕೊಟೆಕ್ ಸೇರಿದಂತೆ ಹಲವು ಬ್ಯಾಂಕ್‌ಗೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ ಎನ್ನಲಾಗಿದೆ. ಇದರಿಂದಾಗಿ ಈ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್‌ಗಳ ಬಳಕೆದಾರರಿಗೆ ಸಾಕಷ್ಟು ಸಹಾಯವಾಗಲಿದೆ.
ಅಮೆಜಾನ್ ಪೇ EMI ಆಯ್ಕೆಯಲ್ಲಿ ಬಳಕೆದಾರರಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಹಾಯವಾಗಲಿದೆ. ಮೂರು ತಿಂಗಳಿಂದ 12 ತಿಂಗಳ ವರೆಗೆ EMI ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ಇಂದು ಮೊಬೈಲ್ ಖರೀದಿಸಿ ಮುಂದೊಂದು ದಿನ ಹಣವನ್ನು ನಿಧಾನವಾಗಿ ಪಾವತಿ ಮಾಡಬಹುದಾಗಿದೆ.
ಅಮೆಜಾನ್ ಪೇ EMI ಸೇವೆಯನ್ನ ಪಡೆದುಕೊಳ್ಳಲು ಬಳಕೆದಾರರು ಮೊದಲಿಗೆ ಪ್ಯಾನ್ ಮತ್ತು ಆಧಾರ್ ಕಾರ್ಡ್ ವೆರಿಫಿಕೇಷನ್ ಮಾಡಬೇಕಾಗಿದೆ. ಇದಾದ ನಂತರದಲ್ಲಿ ಮೊಬೈಲ್‌ಗೆ OTP ಬರಲಿದೆ. ಅದನ್ನು ಎಂಟ್ರಿ ಮಾಡಿದ ನಂತರದಲ್ಲಿ ಆಧಾರ್ ಲಿಂಕ್ ಆದ ನಂತರದಲ್ಲಿ ಆಕೌಂಟ್ ಓಪನ್ ಆಗಲಿದೆ.
ಅಮೆಜಾನ್ ಪೇ EMI ಸೇವೆಯೂ ಬಳಕೆದಾರರಿಗೆ ಸಾಕಷ್ಟು ದೊಡ್ಡ ಮಾದರಿಯಲ್ಲಿ ಸಹಾಯವಾಗಲಿದ್ದು, ರೂ.8000ಕ್ಕಿಂತಲೂ ಅಧಿಕ ಖರೀದಿ ಮಾಡಿದ ನಂತರದಲ್ಲಿ ಅಮೆಜಾನ್ ಪೇ EMI ಲಾಭವನ್ನು ಪಡೆದುಕೊಳ್ಳಬಹುದಾಗಿದೆ.