ಮುಂಬೈ: ರೂಪಾಯಿ ಕುಸಿತವನ್ನು ತಡೆಯಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಗಲೇ ಒಪ್ಪಂದ ಮಾಡಿಕೊಂಡು ಈಗಲೇ ವಹಿವಾಟು ನಡೆಸುವುದು(ಸ್ಪಾಟ್ ಮಾರ್ಕೆಟ್) ಮತ್ತು ಈಗ ಒಪ್ಪಂದ ಮಾಡಿಕೊಂಡು ಮುಂದೆ ಮಾರಾಟ ಮಾಡುವುದು (ಫಾರ್ವರ್ಡ್ ಮಾರ್ಕೆಟ್) ನಲ್ಲಿ ಮಧ್ಯೆ ಪ್ರವೇಶಿಸಬೇಕೆಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಕೊರಾಪ್ ವರದಿ ತಿಳಿಸಿದೆ ಎನ್ನಲಾಗಿದೆ.

ವಿದೇಶಿ ಕರೆನ್ಸಿಗಳನ್ನು ಸ್ಪಾಟ್ ಮತ್ತು ಫಾರ್ವರ್ಡ್ ಮಾರುಕಟ್ಟೆಯಲ್ಲಿ ನೀಡಿರುವ ದರದಲ್ಲಿ ಮಾರಾಟ ಮಾಡುವುದು ಅಥವಾ ಖರೀದಿಸುವುದಾಗಿದೆ.

ಈ ವರದಿಯ ಪ್ರಕಾರ, ಜೂನ್ 2008ರಿಂದ ಮೇ 2009ರವರೆಗೆ ಭಾರತೀಯ ರೂಪಾಯಿ ಬೆಲೆ ಶೇಕಡಾ 13ರಷ್ಟು ಇಳಿಕೆಯಾದಾಗ, ಆಗ ವಿದೇಶಿ ವಿನಿಮಯ ಮೀಸಲು 312 ಶತಕೋಟಿ ಡಾಲರ್ ನಷ್ಟು ಇದ್ದರೂ ಕೂಡ ಆರ್ ಬಿಐ 43 ಶತಕೋಟಿ ಡಾಲರ್ ಗೆ ಮಾರಾಟ ಮಾಡಿತ್ತು.

RELATED ARTICLES  ಕುಮಟಾದಲ್ಲಿ ಟ್ರಾಮಾ ಸೆಂಟರ್ ನಿರ್ಮಾಣ:ಶಾಸಕ ದಿನಕರ ಶೆಟ್ಟಿ

1990ರ ದಶಕದಲ್ಲಿ ಒಟ್ಟು ವಿದೇಶಿ ವಿನಿಮಯ ಮೀಸಲು 40 ಶತಕೋಟಿ ಡಾಲರ್ ಗಿಂತ ಕಡಿಮೆಯಾಗಿದ್ದಾಗ ವಿದೇಶಿ ವಿನಿಮಯ ಮಾರುಕಟ್ಟೆಗೆ ಆರ್ ಬಿಐ ಮಧ್ಯ ಪ್ರವೇಶಿಸಿ ರೂಪಾಯಿ ಕುಸಿತವನ್ನು ತಡೆಗಟ್ಟಲು ಒಟ್ಟು ವಿದೇಶಿ ವಿನಿಮಯವನ್ನು ಶೇಕಡಾ 8ರಿಂದ 9ರಷ್ಟು ಮಾರಾಟ ಮಾಡಿತ್ತು.

RELATED ARTICLES  ಮತ್ತೆ ಕುಮಟಾ ಸಮೀಪ ಗ್ಯಾಸ್ ಟ್ಯಾಂಕರ್ ಪಲ್ಟಿ

ಪ್ರಸ್ತುತ ಇರುವ ಮಾರುಕಟ್ಟೆ ಪರಿಸ್ಥಿತಿಯನ್ನು ನೋಡುತ್ತಿದ್ದೇವೆ. ಆರ್ ಬಿಐ ಶೇಕಡಾ 10ರಷ್ಟು ಹೋಗಬಹುದಾದ ಸಾಧ್ಯತೆಯಿದ್ದು ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಹೆಚ್ಚುವರಿ 25 ಶತಕೋಟಿ ಡಾಲರ್ ನ್ನು ಮಾರಾಟ ಮಾಡಬಹುದಾಗಿದೆ ಎಂದು ಎಸ್ ಬಿಐ ತಿಳಿಸಿದೆ.

ರೂಪಾಯಿ ಡಾಲರ್ ಎದುರು ಬೆಲೆ ಸ್ಥಿರವಾಗಿ ಉಳಿಯಲು ಆರ್ ಬಿಐ ಮಧ್ಯವರ್ತಿಗಳ ಮೂಲಕ ಮಧ್ಯಪ್ರವೇಶಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.