ಶಿರಸಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ತಮ್ಮ ಕೈ ಚಳಕ ತೋರಿ ಮನೆಯಲ್ಲಿ ಕಳ್ಳತನ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.

ಶಿರಸಿಯ ನಾರಾಯಣ ಗುರು ನಗರದಲ್ಲಿ ತಡರಾತ್ರಿ ಕಳ್ಳರು ಕಳ್ಳತನ ನಡೆಸಿ ಪರಾರಿಯಾಗಿದ್ದರೆ.

RELATED ARTICLES  ಇಂದಿನ(ದಿ-21/01/2019) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ.

ದತ್ತಾ ದೇವಳಮಕ್ಕಿ ಎಂಬುವರಿಗೆ ಸೇರಿದ ಮನೆಯಲ್ಲಿ ಈ ಕಳ್ಳತನ ನಡೆದಿದೆ ಎಂದು ವರದಿಯಾಗಿದೆ.

ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿದ ಕಳ್ಳರು, ಚಿನ್ನ, ಬೆಳ್ಳಿ ನಗದು ಎಗರಿಸಿ ಪರಾರಿಯಾಗಿದ್ದಾರೆ.

ದೇವಳಮಕ್ಕಿ ಅವರ ಮೇಲಿನ ಮನೆಯಲ್ಲಿ ಬಾಡಿಗೆ ಇದ್ದ ವ್ಯಕ್ತಿಗಳು ಇಂದು ಬೆಳಗ್ಗೆ ನಾಯಿಗೆ ಅನ್ನ ಹಾಕಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆಯಂತೆ.

RELATED ARTICLES  ಅನಂತ ಕುಮಾರ್ ಹೆಗಡೆ ವಿರುದ್ಧ ಮತ್ತೆ ಛಾಟಿ ಬೀಸಿದ ಆನಂದ್ ಅಸ್ನೋಟಿಕರ್: ಹಿಂದಿನ‌ ಹೇಳಿಕೆ‌ ಸಮರ್ಥಿಸಿಕೊಂಡ ಮಾಜಿ ಸಚಿವ!

ಬೆಳಿಗ್ಗೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ತನಿಖೆಯ ನಂತರ ಪೂರ್ಣ ಮಾಹಿತಿ ಬರಲಿದೆ. ಆದರೆ ನಡೆದಿರುವ ಕಳ್ಳತನದಿಂದ ಸುತ್ತಲಿನ ಜನತೆ ಭಯಭೀತಗೊಂಡಿದ್ದಾರೆ