ಕುಮಟಾ ತಾಲೂಕಿನ ಹೊಲನಗದ್ದೆ ಶಾಲೆಯಲ್ಲಿ ಡೆಂಗ್ಯು ಮಾಸಾಚರಣೆಯ ನಿಮಿತ್ತ ಆರೋಗ್ಯ ಇಲಾಖೆಯವರಿಂದ ಮಾಹಿತಿ ಕಾರ್ಯಾಗಾರ ನಡೆಯಿತು. ಕಿರಿಯ ಆರೋಗ್ಯ ಮಹಿಳಾ ಕಾರ್ಯಕರ್ತೆ ಶ್ರೀಮತಿ ಜಯಲಕ್ಷ್ಮಿ ನಾಯಕ ಡೆಂಗ್ಯು ಜ್ವರದ ಕುರಿತು ವಿಸ್ತೃತ ಮಾಹಿತಿ ಒದಗಿಸಿದರು. ಕಿರಿಯ ಪುರುಷ ಆರೋಗ್ಯ ಕಾರ್ಯಕರ್ತ ಶ್ರೀ ವಿಜಯ ಕುಂದಗೋಳ ಸಹಕರಿಸಿದರು. ಶಾಲಾ ಮುಖ್ಯಾಧ್ಯಾಪಕ ಗಣಪತಿ ನಾಯ್ಕ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕುಮಟಾ ತಾಲೂಕ ಅಧ್ಯಕ್ಷ ರವೀಂದ್ರ ಭಟ್ಟ ಸೂರಿ, ಆಶಾ ಕಾರ್ಯಕರ್ತೆ ಯರು ಹಾಗೂ ಶಿಕ್ಷಕರು ಹಾಜರಿದ್ದರು.

RELATED ARTICLES  4 ಸುಸಜ್ಜಿತ ಆಂಬ್ಯುಲೆನ್ಸ್ ಲೋಕಾರ್ಪಣೆಗೊಳಿಸಿದ ಶಾಸಕಿ ರೂಪಾಲಿ ನಾಯ್ಕ