ಸಾಮಾನ್ಯವಾಗಿ ಕಡ್ಲೆಹಿಟ್ಟು ಅಥವಾ ಕಡಲೆಬೇಳೆಯಹಿಟ್ಟು, ಬೋಂಡಾ ಮೊದಲಾದ ಎಣ್ಣೆಯಲ್ಲಿ ಕರಿದು ಮಾಡುವ ಖಾದ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ. ಆದರೆ ಭಾರತದಲ್ಲಿ ಈ ಹಿಟ್ಟನ್ನು ಸೌಂದರ್ಯವರ್ಧಕ ಗುಣಗಳಿಂದಾಗಿ ಸೌಂದರ್ಯ ಪ್ರಸಾಧನದ ರೂಪದಲ್ಲಿಯೂ ಬಳಸಲಾಗುತ್ತಿದೆ.
ಇದಕ್ಕೂ ಹೊರತಾಗಿ ಕಡ್ಲೆಹಿಟ್ಟಿನಲ್ಲಿ ಕೆಲವೊಂದು ಹಲವಾರು ಆರೋಗ್ಯಕರ ಪ್ರಯೋಜನಗಳಿವೆ ಎಂದು ನಮಲ್ಲಿ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.
ಸಾಮಾನ್ಯವಾಗಿ ಕಡ್ಲೆಕಾಳುಗಳನ್ನು ಒಣಗಿದ್ದಂತೆಯೇ ಅಥವಾ ಹುರಿದು ಪುಡಿಮಾಡಿ ಈ ಹಿಟ್ಟನ್ನು ತಯಾರಿಸಲಾಗುತ್ತದೆ. ಕಡ್ಲೆಕಾಳು ಮತ್ತು ಕಡ್ಲೆಬೇಳೆ ಭಾರತೀಯ ಅಡುಗೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಹಾಗೂ ಹಲವಾರು ಖಾದ್ಯಗಳನ್ನು ತಯಾರಿಸಲಾಗುತ್ತದೆ…
ಕಡ್ಲೆಹಿಟ್ಟು ನಿಮ್ಮ ಆರೋಗ್ಯಕ್ಕೆ ಒಳ್ಳೆಯದೇ?:
ಬೇಸನ್ ಎಂದೇ ಹಿಂದಿಭಾಷೆಯಲ್ಲಿ ಕರೆಯಲ್ಪಡುವ ಈ ಹಿಟ್ಟಿನಲ್ಲಿ ಗೋಧಿಯಂತಹ ಯಾವುದೇ ಏಕದಳಧಾನ್ಯದ ಅಂಶರಹಿತವಾಗಿದ್ದು ಉತ್ತಮ ಪ್ರಮಾಣದ ಕರಗದ ನಾರು ಮತ್ತು ಇತರ ಪೋಷಕಾಂಶಗಳನ್ನು ಹೊಂದಿದೆ. ಸುಮಾರು 100 ಗ್ರಾಂ ಕಡ್ಲೆಹಿಟ್ಟಿನಲ್ಲಿ 11 ಗ್ರಾಂ ಕರಗದ ನಾರು, 22 ಗ್ರಾಂ ಪ್ರೋಟೀನ್,11 ಗ್ರಾಂ ಸಕ್ಕರೆ, 7 ಗ್ರಾಂ ಇತರ ಕೊಬ್ಬುಗಳು,58 ಗ್ರಾಂ ಒಟ್ಟು ಕಾರ್ಬೋಹೈಡ್ರೇಟುಗಳು, 45 ಮಿಲಿಗ್ರಾಂ ಕ್ಯಾಲ್ಸಿಯಂ, 166 ಮಿಲಿಗ್ರಾಂ ಮೆಗ್ನೀಶಿಯಂ, 846 ಮಿಲಿಗ್ರಾಂ ಪೊಟ್ಯಾಶಿಯಂ, 4.9 ಮಿಲಿಗ್ರಾಂ ಕಬ್ಬಿಣ, 41 IU ಪ್ರಮಾಣದಷ್ಟು ವಿಟಮಿನ್ ಎ ಇವೆ. ಅಲ್ಲದೇ ಪ್ರಮುಖ ಖನಿಜಗಳಾದ ಸೆಲೆನಿಯಂ, ತಾಮ್ರ, ಮ್ಯಾಂಗನೀಸ್, ಗಂಧಕ ಹಾಗೂ ಸತು ಸಹಾ ಉತ್ತಮ ಪ್ರಮಾಣದಲ್ಲಿವೆ. ಕಡ್ಲೆಹಿಟ್ಟಿನ ಆರೋಗ್ಯಕರ ಪ್ರಯೋಜನಗಳಾಗಿದೆ.
ಮಧುಮೇಹವನ್ನು ನಿಯಂತ್ರಿಸುತ್ತದೆ:
ಕಡ್ಲೆಹಿಟ್ಟು ಕಡಿಮೆ ಗ್ಲೈಸೆಮಿಕ್ ಗುಣಾಂಕವನ್ನು ಹೊಂದಿರುವ ಆಹಾರವಾಗಿದ್ದು ಇದರ ಸೇವನೆಯಿಂದ ರಕ್ತದಲ್ಲಿ ಸಕ್ಕರೆ ತೀರಾ ನಿಧಾನವಾಗಿ ಏರುತ್ತದೆ. ಜೀರ್ಣಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುವ ಕಾರಣ ರಕ್ತದಲ್ಲಿ ಥಟ್ಟನೇ ಸಕ್ಕರೆಯ ಮಟ್ಟ ಏರುವ (sudden sugar spike) ಸಾಧ್ಯತೆಗಳನ್ನು ಇಲ್ಲವಾಗಿಸುತ್ತದೆ.
ಆದ್ದರಿಂದ ಈ ಗುಣದಿಂದಾಗಿ ದೇಹದಲ್ಲಿ ಉತ್ಪತ್ತಿಯಾದ ಇನ್ಸುಲಿನ್ ಅನ್ನು ಪೂರ್ಣಪ್ರಮಾಣದಲ್ಲಿ ಬಳಸಲು ಸಾಧ್ಯವಾಗುತ್ತದೆ. ಮಧುಮೇಹಿಗಳಿಗೆ ಈ ಗುಣ ವರದಾನವಾಗಿದ್ದು ಮಧುಮೇಹವನ್ನು ನಿಯಂತ್ರಿಸಲು ಈ ಆಹಾರ ಅತ್ಯುತ್ತಮವಾಗಿದೆ. ಹಾಗಾಗಿ ಮಧುಮೇಹಿಗಳಿಗೆ ಚಪಾತಿ ಅಥವಾ ಪರೋಟವನ್ನು ತಯಾರಿಸುವಾಗ ಕೊಂಚ ಕಡ್ಲೆಹಿಟ್ಟನ್ನು ಬೆರೆಸುವುದು ಉತ್ತಮ.