ಶಿರಸಿ : ಟಿ.ಎಸ್.ಎಸ್.ಲಿ.,ಶಿರಸಿ ಸಂಘದ ಅಕ್ಕಿ ಗಿರಣಿ ವಿಭಾಗದ ಪಕ್ಕದಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳ ಮಾರಾಟ ಮಳಿಗೆಯ ನೂತನ ಕಟ್ಟಡವನ್ನು ಸಂಘದ ಅಧ್ಯಕ್ಷರಾದ ಶ್ರೀ ಶಾಂತಾರಾಮ ವಿ. ಹೆಗಡೆ ಶೀಗೇಹಳ್ಳಿ ಇವರು ಉದ್ಘಾಟಿಸಿದರು.

ನೂತನವಾಗಿ ನಿರ್ಮಿಸಲಾಗಿರುವ ಮಾರಾಟ ಮಳಿಗೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಟೈಲ್ಸ್, ಬಾತ್‍ರೂಮ್ ಫಿಟ್ಟಿಂಗ್ಸ್, ಸ್ಯಾನಿಟರಿಸ್, ಕಬ್ಬಿಣದ ಸಾಮಗ್ರಿಗಳು, ಬಣ್ಣ, ಸಿಮೆಂಟ್, ಬಾಗಿಲ ಚೌಕಟ್ಟು, ಇಲೆಕ್ಟ್ರಿಕಲ್ ಫಿಟ್ಟಿಂಗ್ಸ್, ಫೆನ್ಸಿಂಗ್ ಮಟಿರಿಯಲ್ಸ್, ಮುಂತಾದವುಗಳು ಸ್ಪರ್ಧಾತ್ಮಕ ದರದಲ್ಲಿ ದೊರೆಯಲಿದೆ. ಹಾಗೂ ಇದರ ಜೊತೆಯಲ್ಲಿ ಯಂತ್ರೋಪಕರಣಗಳ ದುರಸ್ತಿ ವಿಭಾಗವು ಕೂಡ ಇದೇ ಕಟ್ಟಡದಲ್ಲಿ ಪ್ರಾರಂಭವಾಗಿದ್ದು ಗ್ರಾಹಕರು ಹಾಗೂ ಸದಸ್ಯರು ಇದರ ಹೆಚ್ಚಿನ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.

RELATED ARTICLES  ಇಂದಿನ(ದಿ-14/12/2018) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ.

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರು, ಸಂಘದ ಪ್ರಧಾನ ವ್ಯವಸ್ಥಾಪಕರು, ಸದಸ್ಯರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಅದೇ ದಿನ ಸಂಘದ ಕೃಷಿ ಸುಪರ್ ಮಾರ್ಕೆಟ್ ವಿಭಾಗದಲ್ಲಿ ಟಿ.ಎಸ್.ಎಸ್. ಬ್ರಾಂಡ್‍ನಲ್ಲಿ “ಟಿ.ಎಸ್.ಎಸ್. ಕೃಷಿ ಮಿತ್ರ” (14:06:21) ಗೊಬ್ಬರವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.

RELATED ARTICLES  ದೇಶಪ್ರೇಮ ನಮ್ಮ ರಕ್ತದಲ್ಲಿ ಹರಿಯುತಿರಬೇಕು: ಸುಬ್ರಾಯ ವಾಳ್ಕೆ

ಈ ಗೊಬ್ಬರವು ಅಡಿಕೆ ಬೆಳೆಗೆ ಹೆಚ್ಚು ಪರಿಣಾಮಕಾರಿಯಾಗಲಿದ್ದು ಅಡಿಕೆ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಉಪಯೋಗಿಸುವ ಮೂಲಕವಾಗಿ ಇಳುವರಿ ಹೆಚ್ಚಿಸಿಕೊಳ್ಳಬಹುದಾಗಿದೆ ಈ ಗೊಬ್ಬರವು ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ದೊರಕಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದರು.