ಕುಮಟಾ:ತಾಲೂಕಿನಲ್ಲೇ ಅತೀ ವಿಜೃಂಭಣೆಯಿಂದ ನಡೆಯುವ ಕುಮಟಾ ತಾಲೂಕಿನ ಕೋಡಕಣಿಯ ಸಾರ್ವಜನಿಕ ಗಣೇಶೋತ್ಸವ ಸಮೀತಿ, ಹಾಗೂ ಊರ ನಾಗರಿಕರ ಸಹಕಾರದಿಂದ 31 ನೇ ವರ್ಷದ ಸಾರ್ವಜನಿಕ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

RELATED ARTICLES  ಶಿಕ್ಷಣದಿಂದ ಮಾತ್ರ ಸಮಾಜ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ- ದಿನಕರ ಶೆಟ್ಟಿ

ಅದ್ದೂರಿಯಿಂದ ನಡೆದ ವಿಸರ್ಜನಾ ಕಾರ್ಯಕ್ರಮದಲ್ಲಿ, ಡೊಳ್ಳುಕುಣಿತ,ಸ್ತಬ್ಧ ಚಿತ್ರ,ಛದ್ಮವೇಶ,D.J ಡಾನ್ಸ ಹಾಗೂ ವಯಕ್ತಿಕ ಛದ್ಮವೇಶದಾರಿಗಳು ಜನರನ್ನು ರಂಜಿಸಿದರು.ಕೋಡಕಣಿ ಗಣಪತಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ಅಘನಾಶನಿ ನದಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಲಾಯಿತು.

RELATED ARTICLES  2019 ರ ಹೊಸ ವರ್ಷದ ಆಚರಣೆ ಜೀವಹಾನಿ ತಡೆಗಟ್ಟಲು 108 ಸನ್ನದ್ಧ

ಸಾವಿರಾರು ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಗಣೇಶ ಮೂರ್ಥಿಯ ಧರ್ಶನ ಪಡೆದರು.ಪ್ರತೀ ವರ್ಷದಂತೆ ಈ ವರ್ಷವು ಛದ್ಮವೇಶ ಪಾತ್ರಗಳು ಒಂದಕ್ಕಿಂತ ಒಂದು ಅದ್ಬುತವಾಗಿದ್ದು ಜನರ ಮೆಚ್ಚುಗೆಗೆ ಪಾತ್ರವಾಯಿತು.ಸಾವಿರಾರು ಭಕ್ತಾದಿಗಳು ಶಾಂತರೀತಿಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.