ಹಲವಾರು ಶತಮಾನಗಳಿಂದಲೂ ಭಾರತದಲ್ಲಿ ಮೊಸರಾನ್ನ ಸೇವಿಸುತ್ತಾ ಬರಲಾಗುತ್ತಿದೆ. ಇದರ ಹಿಂದಿನ ಆರೋಗ್ಯದ ಗುಟ್ಟು ನಮ್ಮ ಹಿರಿಯರಿಗೆ ತಿಳಿದಿತ್ತು. ಪ್ರತಿನಿತ್ಯ ಅಥವಾ ವಾರದಲ್ಲಿ ನಾಲ್ಕೈದು ಸಲವಾದರೂ ಮೊಸರಾನ್ನ ಸೇವನೆ ಮಾಡಿದರೆ ಅದರಿಂದ ಆರೋಗ್ಯ ಲಾಭಗಳು ಸಿಗುವುದು. ಪ್ರತಿನಿತ್ಯ ಮೊಸರಾನ್ನ ಸೇವನೆ ಮಾಡಿದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆಯು ಸರಾಗವಾಗಿ ಕೆಲಸ ಮಾಡುವುದು ಮಾತ್ರವಲ್ಲದೆ ಸಂಪೂರ್ಣ ಆರೋಗ್ಯಕ್ಕೆ ಇದು ಒಳ್ಳೆಯದು. ದಕ್ಷಿಣ ಭಾರತೀಯರು ಹೆಚ್ಚಾಗಿ ಮೊಸರನ್ನ ಸೇವನೆ ಮಾಡುತ್ತಾರೆ. ಆದರೆ ಇದರ ಸೇವನೆ ಕೇವಲ ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಉತ್ತರ ಭಾರತದಲ್ಲಿ ಬೇಸಿಗೆಯಲ್ಲಿ ತಡೆಯಲಾರದಂತಹ ಉಷ್ಣಾಂಶವಿರುವ ಕಾರಣದಿಂದಾಗಿ ಅಲ್ಲಿನ ಜನರು ಹೆಚ್ಚಾಗಿ ಮೊಸರಾನ್ನ ಸೇವನೆ ಮಾಡುವರು. ಹೊಟ್ಟೆಯು ಸರಿಯಿಲ್ಲದೆ ಇರುವಾಗ ಮೊಸರನ್ನ ಸೇವನೆ ಮಾಡುವುದು ತುಂಬಾ ಪರಿಣಾಮಕಾರಿಯಾಗಿರುವುದು.

ಮೊಸರಾನ್ನದ ಆರೋಗ್ಯ ಲಾಭಗಳು ಮೊಸರಾನ್ನ ತಯಾರಿಸುವುದು ತುಂಬಾ ಸುಲಭ ಮಾತ್ರವಲ್ಲದೆ ಇದರಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ.

*ಇದು ಹೊಟ್ಟೆ ಉಬ್ಬರ ನಿವಾರಣೆ ಮಾಡುವ ಕಾರಣದಿಂದಾಗಿ ಹೊಟ್ಟೆಯ ಸಮಸ್ಯೆ ಅಥವಾ ಅಜೀರ್ಣ ಇರುವಾಗ ಇದು ನಿಮಗೆ ಅತ್ಯುತ್ತಮವಾದ ಔಷಧಿ. ಜೀರ್ಣಕ್ರಿಯೆ ಸರಿಪಡಿಸಲು ಮೊಸರಾನ್ನವು ಒಳ್ಳೆಯ ಮನೆಮದ್ದು.

*ಮೊಸರಾನ್ನವನ್ನು ತಂಪಾಗಿರುವಾಗಲೇ ಸೇವಿಸಬೇಕು. ಇದು ದೇಹಕ್ಕೆ ತಂಪನ್ನು ನೀಡಿ ದೇಹದೊಳಗಿನ ತಾಪಮಾನವನ್ನು ಕಾಪಾಡುವುದು. ನಿಮಗೆ ಜ್ವರವಿದ್ದರೆ ಆಗ ನೀವು ಮೊಸರಾನ್ನ ಸೇವಿಸುವುದು ಉತ್ತಮ. ಉಷ್ಣತೆ ಹೆಚ್ಚಾಗಿರುವ ದಿನದಲ್ಲಿ ನೀವು ಇದರ ಸೇವನೆ ಮಾಡಿದರೆ ಆಗ ನಿಮ್ಮ ದೇಹವು ಬೇಗನೆ ಬಿಸಿಯಾಗದಂತೆ ತಡೆಯುವುದು.

RELATED ARTICLES  ಈ ಎಲ್ಲ ಖಾಯಿಲೆಗಳಿಗೆ ಸುವರ್ಣ ಗಡ್ಡೆ ಸೇವನೆಯೇ ಮದ್ದು!

*ಮೊಸರಿನಲ್ಲಿ ಆ್ಯಂಟಿಆಕ್ಸಿಡೆಂಟ್, ಪ್ರೋಬಯಾಟಿಕ್ ಗಳು ಮತ್ತು ಒಳ್ಳೆಯ ಗುಣಮಟ್ಟದ ಕೊಬ್ಬು ಇದೆ. ಮೊಸರು ಸೇವನೆ ಮಾಡಿದರೆ ಅದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಬಹುದು. ಇದರಿಂದ ಮೊಸರನ್ನು ಒತ್ತಡ ನಿವಾರಕವೆಂದು ಕರೆಯಲಾಗುತ್ತದೆ. ಗಾಯವಾದಾಗ ಅಥವಾ ನೋವಾದಾಗ ಮೆದುಳು ಅದನ್ನು ಬೇಗನೆ ಅರಿಯಲು ನೆರವಾಗುವುದು.

ಹೊಟ್ಟೆಯುಬ್ಬರಿಕೆ:

ಹೊಟ್ಟೆಯುಬ್ಬರಿಕೆಯಾದರೆ ಇದಕ್ಕೆ ತಕ್ಷಣದ ಪರಿಹಾರವೆಂದರೆ ಮೊಸರನ್ನದ ಸೇವನೆ. ಅಜೀರ್ಣತೆ ಅಥವಾ ಹೊಟ್ಟೆ ಕೆಟ್ಟಿರುವ ಯಾವುದೇ ಸೂಚನೆ ಕಂಡು ಬಂದರೆ ಮೊದಲಾಗಿ ಮೊಸರನ್ನವನ್ನು ಸೇವಿಸಿಬಿಡಬೇಕು. ಅಲ್ಲದೇ ಮೊಸರನ್ನ ಜೀರ್ಣಿಸಿಕೊಳ್ಳಲು ಸುಲಭವಾಗಿರುವ ಕಾರಣ ಎಲ್ಲಾ ವಯಸ್ಸಿನವರೂ ಇದನ್ನು ಯಾವುದೇ ಅಳುಕಿಲ್ಲದೇ ಸೇವಿಸಬಹುದು. ಮೊಸರನ್ನ ತಣ್ಣಗಿರುವಾಗಲೇ ಸೇವಿಸಿ • ಮೊಸರನ್ನವನ್ನು, ತಣ್ಣಗಿದ್ದಂತೆಯೇ, ನಿತ್ಯವೂ ಸೇವಿಸಬೇಕೆಂದು ಆಹಾರತಜ್ಞರ ಅಭಿಪ್ರಾಯವಾಗಿದೆ. ಇದರಿಂದ ದೇಹವನ್ನು ಒಳಗಿನಿಂದ ತಪಾಗಿರಿಸಲು ಸಾಧ್ಯವಾಗುತ್ತದೆ ಹಾಗೂ ದೇಹದ ತಾಪಮಾನವನ್ನೂ ಆರೋಗ್ಯಕರ ಮಿತಿಗಳಲ್ಲಿರಿಸಬಹುದು. ವಿಶೇಷವಾಗಿ ಜ್ವರ ಆವರಿಸಿದಾಗ ಸೇವಿಸಲು ಮೊಸರನ್ನ ಅತ್ಯುತ್ತಮವಾದ ಆಹಾರವಾಗಿದೆ. ಅಲ್ಲದೇ, ಬೇಸಿಗೆಯ ದಿನಗಳಲ್ಲಿ, ಮೊಸರನ್ನದ ಸೇವನೆಯಿಂದ ದೇಹ ಅತಿ ಶೀಘ್ರವಾಗಿ ತಾಪವೇರದಂತೆ ನೋಡಿಕೊಳ್ಳುವ ಮೂಲಕ ಬಿಸಿಲ ಝಳವನ್ನು ಸಹಿಸಿಕೊಳ್ಳಲೂ ನೆರವಾಗುತ್ತದೆ.

RELATED ARTICLES  ವೀಳ್ಯದ ಎಲೆ ತಿಂದು ಆರೋಗ್ಯಕರ ಲಾಭ ನಿಮ್ಮದಾಗಿಸಿಕೊಳ್ಳಿ.!!

ಮೊಸರನ್ನ ತಯಾರಿಸುವುದು ಹೇಗೆ?

ಮೊಸರಾನ್ನ ತಯಾರಿಸುವುದು ತುಂಬಾ ಸರಳ. ಅನ್ನ ಮತ್ತು ಮೊಸರನ್ನು ಒಂದು ಪಾತ್ರೆಯಲ್ಲಿ ಮಿಶ್ರಣ ಮಾಡಿ. ಒಂದು ತವಾದಲ್ಲಿ ಸ್ವಲ್ಪ ಎಣ್ಣೆ, ಜೀರಿಗೆ, ಕರಿಬೇವಿನ ಎಲೆಗಳು ಮತ್ತು ಸಾಸಿವೆ ಹಾಕಿ. ಇದು ಬಿಸಿಯಾದ ಬಳಿಕ ಅದನ್ನು ಮೊಸರಾನ್ನ ಇರುವ ಪಾತ್ರಗೆ ಹಾಕಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ರುಚಿಗೆ ಬೇಕಾದಷ್ಟು ಉಪ್ಪು ಹಾಕಿ. ಈಗ ಮೊಸರನ್ನ ತಿನ್ನಲು ತಯಾರು. ತಯಾರಿಸಲು ಸುಲಭವಾಗಿರುವ ಕಾರಣದಿಂದ ಒಬ್ಬಂಟಿಯಾಗಿರುವವರು ಜ್ವರದಿಂದ ಬಳಲುತ್ತಿದ್ದರೆ ಇದನ್ನು ತಯಾರಿಸಿ ತಿನ್ನಿ. *ಇದು ಕೆಲವೇ ನಿಮಿಷಗಳಲ್ಲಿ ತಯಾರಾಗುವ ಕಾರಣದಿಂದ ಹೆಚ್ಚು ಶ್ರಮ ಮತ್ತು ಒತ್ತಡ ಬೇಕಾಗಲ್ಲ. ಹಸಿಮೆಣಸು, ಒಣದ್ರಾಕ್ಷಿ ಮತ್ತು ಗೋಡಂಬಿ ಹಾಕಿಕೊಂಡು ಇದನ್ನು ಇನ್ನಷ್ಟು ರುಚಿಕರವಾಗಿ ಮಾಡಬಹುದು. ಮೊಸರಾನ್ನಕ್ಕೆ ದಾಳಿಂಬೆ ಬೀಜಗಳು, ದ್ರಾಕ್ಷಿ, ಕ್ಯಾರೆಟ್ ಮತ್ತು ಹಸಿ ಮಾವಿನಕಾಯಿಯನ್ನು ತುರಿದು ಹಾಕಿ. * ಭೇದಿಯಿಂದ ಬಳಲುತ್ತಿರುವವರಿಗೆ ಮೊಸರನ್ನವು ತುಂಬಾ ಪರಿಣಾಮಕಾರಿ. ಮೆಂತೆಕಾಳಿನೊಂದಿಗೆ ಇದನ್ನು ಸೇವನೆ ಮಾಡಿದರೆ ಆಗ ಹೊಟ್ಟೆಗೆ ಸ್ವಲ್ಪ ಆರಾಮ ನೀಡುವುದು. ಇದು ಹೊಟ್ಟೆ ನೋವು ಕಡಿಮೆ ಮಾಡುವುದು.