ನವದೆಹಲಿ: ಕೇಂದ್ರ ಸರ್ಕಾರ ಪಿಪಿಎಫ್ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರದಲ್ಲಿ ಅಲ್ಪ ಏರಿಕೆ ಮಾಡಿದೆ ಎಂದು ತಿಳಿದುಬಂದಿದೆ.

ಇಂದು ಈ ಬಗ್ಗೆ ನಡೆದ ಸಭೆಯಲ್ಲಿ ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್), ರಾಷ್ಟ್ರೀಯ ಉಳಿತಾಯ ಪತ್ರ ( ಎನ್ಎಸ್ಸಿ) ಸೇರಿದಂತೆ ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರದಲ್ಲಿ ಶೇ 0.4ರಷ್ಟು ಏರಿಕೆ ಮಾಡಲಾಗಿದೆ.

ಐದು ವರ್ಷಗಳ ನಿಶ್ಚಿತ ಠೇವಣಿ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿದಂತೆ ಸಣ್ಣ ಉಳಿತಾಯ ಖಾತೆಗಳ ಬಡ್ಡಿ ದರವು ಶೇ 7.8, 8.7 ಮತ್ತು 7.3ಕ್ಕೆ ಏರಿಕೆಯಾಗಿದ್ದು, ಹಿರಿಯ ನಾಗರಿಕರ ಉಳಿತಾಯ ಠೇವಣಿಗೆ ತ್ರೈಮಾಸಿಕವಾಗಿ ಬಡ್ಡಿ ಪಾವತಿಯಾಗುತ್ತದೆ.

RELATED ARTICLES  ಕಿತ್ರೆಯ ದೇವಸ್ಥಾನದ ವರ್ಧಂತಿ ಮಹೋತ್ಸವದ ಅಂಗವಾಗಿ ನಡೆಯಲಿದೆ ಉಚಿತ ಬೃಹತ್ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ

ಸಣ್ಣ ಉಳಿತಾಯದ ಮೇಲಿನ ಬಡ್ಡಿ ದರವು ವಾರ್ಷಿಕವಾಗಿ ಮತ್ತೆ ಶೇ 4ಕ್ಕೆ ಮರಳಿದೆ. ಪಿಪಿಎಫ್ ಮತ್ತು ಎನ್ಎಸ್ಸಿ ವಾರ್ಷಿಕ ಬಡ್ಡಿ ದರ ಶೇ 7.6 ರಿಂದ ಶೇ 8ಕ್ಕೇ ಏರಿಕೆಯಾಗಿದೆ. ಕಿಸಾನ್ ವಿಕಾಸ ಪತ್ರಕ್ಕೆ7.7 ಬಡ್ಡಿ ಜತೆ ಮೆಚ್ಯೂರಿಟಿ ಅವಧಿಯನ್ನು 118 ತಿಂಗಳಿಂದ 112 ತಿಂಗಳುಗಳಿಗೆ ಇಳಿಸಲಾಗಿದೆ. ಸುಕನ್ಯಾ ಸಮೃದ್ಧಿ ಖಾತೆಗೆ ಹೆಚ್ಚಿನ ಬಡ್ಡಿದರ ಲಭ್ಯವಾಗಲಿದ್ದು, ಪ್ರಸಕ್ತ ಇರುವ ಬಡ್ಡಿದರಕ್ಕಿಂತ ಶೇ 0.4 ಹೆಚ್ಚು ದೊರೆಯಲಿದೆ. ಒಂದರಿಂದ ಮೂರು ವರ್ಷಗಳ ಅವಧಿಯ ಠೇವಣಿಗೆ ಶೇ 0.3 ರಷ್ಟು ಹೆಚ್ಚಿನ ಬಡ್ಡಿ ದರ ಸಿಗಲಿದೆ ಎಂದು ತಿಳಿದುಬಂದಿದೆ.

RELATED ARTICLES  ನಿಯಂತ್ರಣ ತಪ್ಪಿ ಪಲ್ಟಿಯಾದ ಲಾರಿ

ತ್ರೈಮಾಸಿಕ ಅವಧಿ ಆಧರಿಸಿ ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಪ್ರಕಟಿಸಲಾಗುತ್ತದೆ. 2018-19 ವಿತ್ತೀಯ ವರ್ಷದಲ್ಲಿ ಅಕ್ಟೋಬರ್1 ರಿಂದ ಡಿಸೆಂಬರ್ 31 ಮೂರನೇ ತ್ರೈಮಾಸಿಕವಾಗಿದೆ.