ಅಂಕೋಲಾ :ಎಲ್ಲೆಡೆ ವೈವಿಧ್ಯಮಯ ಗಣಪನ ಆರಾಧನೆ ನಡೆಯುತ್ತಿದೆ ಅದೇ ರೀತಿ ಇನ್ನೂ ಹಲವೆಡೆ ಗಣಪನ ವಿಸರ್ಜನೆ ನಂತರ ಗಣೇಶ ಚತುರ್ಥಿ ಸಂಪನ್ನವಾಗಿದೆ .
ಆದರೆ ಅಂಕೋಲಾ ದಲ್ಲಿರುವ ಈ ಗಣಪ ತನ್ನ ವೈಶಿಷ್ಟ್ಯತೆಗಳಿಂದ ಎಲ್ಲರನ್ನೂ ಆಕರ್ಷಿಸುತ್ತಿದ್ದಾನೆ . ಗಣೇಶ ಚತುರ್ಥಿಯಲ್ಲಿ ಗಣಪನ ಮೂರ್ತಿಯನ್ನು ಮಣ್ಣಿನಿಂದ ಮಾಡಿ ಅದಕ್ಕೆ ವಿವಿಧ ಬಣ್ಣಗಳನ್ನು ನೀಡುವುದರ ಮೂಲಕ ಗಣಪ ಆಕರ್ಷಕವಾಗಿ ಕಾಣುವಂತೆ ಮಾಡೋದು ಸಹಜ .
ಆದರೆ ಅಂಕೋಲಾದ ಸ್ಟೇಟ್ ಬ್ಯಾಂಕ್ ಎದುರುಗಡೆ ಇರುವ ಕೆಲಸಿ ಮನೆಯಲ್ಲಿ ಇಪ್ಪತ್ತೈದು ವರ್ಷಗಳಿಗಿಂತಲೂ ಹಿಂದಿನಿಂದ ಇಲ್ಲಿ ಗಣಪನ ಮೂರ್ತಿಯನ್ನು ಸ್ಥಾಪಿಸುತ್ತಾ ವರ್ಷದಿಂದ ವರ್ಷಕ್ಕೆ ಗಣಪತಿಯ ಗಾತ್ರವನ್ನು ಹೆಚ್ಚಿಸುತ್ತಾ ಬಂದಿದ್ದಾರೆ .
ಪ್ರತಿ ವರ್ಷ ಈ ಗಣಪನಿಗೆ ಚಿನ್ನದ ಆಭರಣಗಳನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಅಂದರೆ ಚಿನ್ನದ ಕಿರೀಟ, ಕೈ ಕಡಗ ,ಹಾರಗಳು,ಪ್ರಬಾಳೆ,ಪೀಠದ ಭಾಗಗಳು ಹಾಗೂ ಇನ್ನಿತರೆ ಸಲಕರಣೆಗಳು ಗಣಪನ ಮೈಮೇಲೆ ರಾರಾಜಿಸುತ್ತಿವೆ . ಹೀಗಾಗಿಯೇ ಈ ಗಣಪನನ್ನು ಚಿನ್ನದ ಗಣಪ ಅಂತಾನೇ ಗುರುತಿಸುತ್ತಾರೆ .
ಈ ಚಿನ್ನದ ಗಣಪನನ್ನು ನೋಡಲು ಅನೇಕ ಜನ ಆಗಮಿಸುತ್ತಾರೆ . ಅಂಕೋಲಾದ ಪಟ್ಟಣದ ನಡುವೆ ಇರುವ ಈ ಗಣಪನಿಗೆ ತಡಿಸಲಾದ ಆಭರಣಗಳ ರಕ್ಷಣೆಗೂ ಅಷ್ಟೇ ಕಾವಲನ್ನು ಒದಗಿಸಲಾಗಿದೆ .
ಪೊಲೀಸ್ ಇಲಾಖೆಯವರು ಚಿನ್ನಾಭರಣಗಳನ್ನು ರಕ್ಷಿಸುವ ಕಾಯಕದಲ್ಲಿ ನಿರತರಾಗಿದ್ದಾರೆ . ಹನ್ನೊಂದು ದಿನಗಳ ಕಾಲ ಆರಾಧಿಸಲ್ಪಡುವ ಈ ಗಣಪನನ್ನು ನೋಡುವುದೇ ಬಲು ಸೊಗಸು .