ಉಡುಪಿ: ಕೊಂಕಣ ರೈಲ್ವೆ ಮಾರ್ಗದಲ್ಲಿ ಕಾರವಾರ ಹಾಗೂ ತೋಕೂರು ನಡುವೆ ಸೆ.23ರ ರವಿವಾರದಂದು ಕೆಲ ಇಂಜಿನಿಯರಿಂಗ್ ಹಾಗೂ ವಿದ್ಯುದ್ದೀಕರಣದ ಕಾಮಗಾರಿಗಳು ನಡೆಯಲಿರುವ ಕಾರಣ, ಅಂದು ಈ ಮಾರ್ಗದಲ್ಲಿ ಸಂಚರಿಸುವ ಒಂದು ರೈಲಿನ ಸಂಚಾರವನ್ನು ರದ್ದುಗೊಳಿಸಿದ್ದು, ಇನ್ನೂ ಕೆಲವು ರೈಲುಗಳ ಸಂಚಾರ ಸಮಯದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಂಗಳೂರು ಸೆಂಟ್ರಲ್-ಮಡಗಾಂವ್- ಮಂಗಳೂರು ಸೆಂಟ್ರಲ್ ನಡುವೆ ಸಂಚರಿಸುವ ರೈಲು ನಂ.22636-22635 ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು 23ರಂದು ರದ್ದು ಪಡಿಸಲಾಗಿದೆ.

RELATED ARTICLES  ಸಂತ್ರಸ್ತ ಮಕ್ಕಳಿಗೆ ಉಚಿತ ಶಿಕ್ಷಣ: ಶ್ರೀರಾಮಚಂದ್ರಾಪುರ ಮಠ ಕೊಡುಗೆ

ರೈಲು ನಂ. 12620 ಮಂಗಳೂರು ಸೆಂಟ್ರಲ್-ಕುರ್ಲಾ ಟರ್ಮಿನಸ್ ಮತ್ಸಗಂಧ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ನಿಂದ 2ಗಂಟೆ 45 ನಿಮಿಷ ತಡವಾಗಿ ಅಂದರೆ ಅಪರಾಹ್ನ 3:15ಕ್ಕೆ ಹೊರಡಲಿದೆ.

ರೈಲು ನಂ.56641 ಮಡಗಾಂವ್- ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲು ಅಂಕೋಲ ರೈಲ್ವೆ ನಿಲ್ದಾಣದಲ್ಲಿ 60 ನಿಮಿಷ ನಿಲ್ಲಲಿದೆ. ರೈಲು ನಂ. 12617 ಎರ್ನಾಕುಲಂ-ನಿಜಾಮುದ್ದೀನ್ ‘ಮಂಗಳಾ ಲಕ್ಷದ್ವೀಪ’ ಎಕ್ಸ್‌ಪ್ರೆಸ್ ತೊಕೂರಿನಲ್ಲಿ 20 ನಿಮಿಷ ನಿಲ್ಲಲಿದೆ. ರೈಲು ನಂ.22634 ನಿಜಾಮುದ್ದೀನ್- ತ್ರಿವೆಂಡ್ರಮ್ ಎಕ್ಸ್‌ಪ್ರೆಸ್ ಕುಂದಾಪುರ ರೈಲು ನಿಲ್ದಾಣದಲ್ಲಿ 45 ನಿಮಿಷ ನಿಲ್ಲಲಿದೆ. ಹಾಗೂ ರೈಲು ನಂ.02198 ಜಬಲ್‌ಪುರ-ಕೊಯಮತ್ತೂರು ವಿಶೇಷ ರೈಲು ಅಂಕೋಲ ರೈಲು ನಿಲ್ದಾಣದಲ್ಲಿ 70 ನಿಮಿಷ ನಿಲ್ಲಲಿದೆ.

RELATED ARTICLES  ಶ್ರೀ ಯಶೋಧರ ನಾಯ್ಕ ಟ್ರಸ್ಟ್ ನಿಂದ ಸಂಯೋಜನೆಗೊಂಡಿತು ಚರ್ಚಾ ಸ್ಪರ್ಧೆ