ಬೆಂಗಳೂರು :ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮಧ್ಯಂತರ ಆದೇಶದ ಹೊರತಾಗಿಯೂ, ಉತ್ತರ ಕನ್ನಡದ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಗೋಕರ್ಣ ಮಹಾಬಲೇಶ್ವರ ದೇವಾಲಯದ ಆಡಳಿತ ನಿರ್ವಹಣೆಯನ್ನು ಕರ್ನಾಟಕ ಸರ್ಕಾರವು ವಶಪಡಿಸಿಕೊಂಡಿದೆ. ಸರ್ಕಾರದ ಈ ಕ್ರಮ ವನ್ನು ಮಹಾಸಭೆಯು ಖಂಡಿಸುತ್ತದೆ.

ರಾಜ್ಯ ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಶ್ರೀಮಠ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ್ದ ಸರ್ವೋಚ್ಚ ನ್ಯಾಯಾಲಯವು ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶವನ್ನು ಮುಂದುವರಿಸುವಂತೆ ಸೂಚಿಸಿ, ದೇವಾಲಯದ ಆಡಳಿತ ನಿರ್ವಹಣೆಯನ್ನು ಶ್ರೀಮಠವೇ ಮುಂದುವರಿಸುವಂತೆ ಮಧ್ಯಂತರ ಆದೇಶ ನೀಡಿದ್ದನ್ನು ಶ್ರೀಮಠದ ಸುತ್ತೋಲೆಯ ಮೂಲಕವೂ ಮತ್ತು ಮಾಧ್ಯಮಗಳ ಮೂಲಕವೂ ಮಹಾಸಭೆ ತಿಳಿದಿದೆ.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 16-03-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?

ಇದಲ್ಲದೇ ಇತಿಹಾಸಾನುಗುಣವಾಗಿಯೂ ಇದು ಶ್ರೀರಾಮಚಂದ್ರಾಪುರಮಠಕ್ಕೆ ಸೇರಿದ್ದಲ್ಲದೆ, ಕಳೆದ ಹತ್ತು ವರ್ಷಗಳಿಂದ ಶ್ರೀಮಠದ ಆಡಳಿತದಿಂದಾಗಿ ಗೋಕರ್ಣ ಮಹಾಬಲೇಶ್ವರದೇವಾಲಯ ಮತ್ತು ಪರಿಸರದಲ್ಲಿ ಅನುಪಮವಾದ ಸುಧಾರಣೆಯ ಬದಲಾವಣೆ ಆಗಿದ್ದು ಕಣ್ಣಿಗೆ ಕಾಣುವ ಸತ್ಯ. ಇದನ್ನು ಲಕ್ಷೋಪಲಕ್ಷ ಶಿವಭಕ್ತರು ಉಲ್ಲೇಖಿಸಿದ್ದಾರೆ. ಸಮಾಜದ, ಅರ್ಚಕರ, ಭಕ್ತರ, ಸಮಸ್ತ ಲೋಕದ ಹಿತದೃಷ್ಟಿಯಿಂದ ಇದು ಶ್ರೀರಾಮಚಂದ್ರಾಪುರಮಠದ ಆಡಳಿತಕ್ಕೆ ಒಳಪಡಬೇಕಾದುದೇ ನ್ಯಾಯ ಮತ್ತು ಸಮಂಜಸ ಎಂಬುದನ್ನು ಮಹಾಸಭೆಯು ಒತ್ತಿಹೇಳುತ್ತದೆ.

RELATED ARTICLES  ದಿನಾಂಕ 04/07/2019 ರ ದಿನ ಭವಿಷ್ಯ.

ಶ್ರೀಮಠಕ್ಕೆ ಆಡಳಿತ ವಹಿಸುವ ಮೊದಲು ಇದ್ದ ಕಳಪೆ ನಿರ್ವಹಣೆಯ ಕಹಿ ಅನುಭವ ಜಗತ್ತಿಗೆ ಗೊತ್ತಿದೆ. ಮಾದರಿ ಆಡಳಿತ ನೀಡಿದ ಮಠವೇ ಆ ಕಾರ್ಯ ಮುಂದುವರಿಸಲಿ ಎಂದು ಸುಪ್ರೀಮ್ ಕೋರ್ಟ್ ಹೇಳಿದ್ದು ಅತ್ಯಂತ ಸಮಂಜಸವಾಗಿದೆ ಎಂದು ಹವ್ಯಕ ಮಹಾಸಭಾದ ಅಧ್ಯಕ್ಷರಾದ ಡಾ. ಗಿರಿಧರ್ ಕಜೆ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.