ಹೊನ್ನಾವರ:ತಾಲೂಕಿನ ಹಳದೀಪುರದಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿ ಭರದಿಂದ ಸಾಗಿದೆ .ಹೊನ್ನಾವರ ಕುಮಟಾ ಮಾರ್ಗದ ಮಧ್ಯೆ ಹಳದಿಪುರದಲ್ಲಿ ಚತುಷ್ಪಥ ಕಾಮಗಾರಿಯ ತೆರವು ಕಾರ್ಯಾಚರಣೆ ಇಂದು ಪ್ರಾರಂಭಗೊಂಡಿದ್ದು ಅಧಿಕಾರಿಗಳ ಉಪಸ್ಥಿತಿಯಲ್ಲಿ ಚತುಷ್ಪಥ ಕಾಮಗಾರಿಗಾಗಿ ರಸ್ತೆಯ ಅಕ್ಕಪಕ್ಕದಲ್ಲಿರುವ ಮರಗಳನ್ನು ಕಟಾವು ಮಾಡಲಾಗುತ್ತಿದೆ .

ಆದರೆ ಹಳದೀಪುರದ ಕೆಲವು ಜನರಿಗೆ ಇಂದು ತೆರವು ಕಾರ್ಯಾಚರಣೆ ನಡೆಸುವ ಬಗ್ಗೆ ಯಾವುದೇ ಮುನ್ಸೂಚನೆ ನೀಡದ ಹಿನ್ನೆಲೆಯಲ್ಲಿ ಜನರು ಕಂಗಾಲಾಗಿದ್ದಾರೆ .

RELATED ARTICLES  ಸೋಲಾರ್ ಕೀಟನಾಶಕ ಯಂತ್ರ ಸಂಶೋಧನೆ ಮಾಡಿದ ರೈತ

ರಸ್ತೆಯಂಚಿನಲ್ಲಿರುವ ಅಂಗಡಿ ಮುಂಗಟ್ಟುಗಳು ಹಾಗೂ ಮನೆಯ ಕಾಂಪೌಂಡ್ಗಳನ್ನು ತೆರವುಗೊಳಿಸಲಾಗುತ್ತದೆ . ಹಿಟಾಚಿಗಳು ಹಾಗೂ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದಾರೆ.

ಹಳದಿಪುರದಿಂದ ಅಗ್ರಹಾರದ ವರೆಗಿನ ಸುಮಾರು ಎರಡು ಕಿಲೋಮೀಟರ್ ಅಂತರದಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು ಕೆಲವು ಅಂಗಡಿಕಾರರು ಸ್ವಂತ ಕಾರ್ಮಿಕರನ್ನು ಬಳಸಿಕೊಂಡು ಅಂಗಡಿಯನ್ನು ತೆರವುಗೊಳಿಸಿ ಕೊಡುತ್ತಿದ್ದಾರೆ.

RELATED ARTICLES  ಒಂದೆಡೆ ಪ್ರಚಾರ ಭರಾಟೆ, ಇನ್ನೊಂದೆಡೆ ಕಾಂಗ್ರೆಸ್ ಪಕ್ಷ ಸೇರ್ಪಡೆ: ಕುಮಟಾದಲ್ಲಿ ಬಲಗೊಳ್ಳುತ್ತಿದೆ ಕಾಂಗ್ರೆಸ್

ಕೆಲವು ಮನೆಯ ಕೆಲ ಭಾಗಗಳು ಚತುಷ್ಪಥ ಹೆದ್ದಾರಿಗೆ ಒಳಗಾಗುವುದರಿಂದ ಮನೆಯ ಅಂಚುಗಳನ್ನು ಕೆಡವಲಾಗಿದ್ದು ಜನತೆ ಮುಂದೇನು ಗತಿ ಎಂಬ ಪ್ರಶ್ನೆ ಕೇಳುತ್ತಿದ್ದಾರೆ?

ಅದೇನೇ ಇದ್ದರೂ ಚತುಷ್ಪಥ ಕಾಮಗಾರಿಯ ಕಾರ್ಯಾಚರಣೆ ಭರದಿಂದ ಸಾಗಿದ್ದು ಜನತೆ ಸ್ಪಂದಿಸಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ ಎನ್ನುವುದು ಅಲ್ಲಿರುವ ಸಾರ್ವಜನಿಕರ ಅಭಿಪ್ರಾಯವಾಗಿತ್ತು .