ಶಿರಸಿ: ಗಣೇಶ ಚತುರ್ಥಿಯ ಸಂತಸವನ್ನು ಹೆಚ್ಚಿಸುವುದೇ ವೈವಿಧ್ಯಮಯ ಗಣಪನ ಮೂರ್ತಿಗಳು. ವಿವಿಧ ಆಸನಗಳಲ್ಲಿ ವಿವಿಧ ರೂಪದಲ್ಲಿ ಕಾಣಿಸಿಕೊಳ್ಳುವ ಗಣಪನ ಮೂರ್ತಿಯನ್ನು ಕಣ್ತುಂಬಿಕೊಳ್ಳುವುದೇ ಕಣ್ಣಿಗೆ ಹಬ್ಬ .

ಇಂತಹ ಗಣಪನ ಮೂರ್ತಿ ತಯಾರಿಕೆಯ ಹಿಂದೆ ಕಲಾಕಾರನ ಎಷ್ಟೋ ದಿನದ ಶ್ರಮ ಅಡಗಿರುತ್ತದೆ .ಚೌತಿಯ ಸಂದರ್ಭದಲ್ಲಿ ಗಣಪನನ್ನು ನೋಡಿ ಕಣ್ತುಂಬಿಕೊಳ್ಳುವ ಜನ ಅದರ ಹಿಂದಿನ ಪರಿಶ್ರಮವನ್ನು ಮರೆತು ಬಿಡುತ್ತಾರೆ .

ಆದರೆ ಪ್ರತಿ ವರ್ಷ ಶಿರಸಿಯಲ್ಲಿ ವೈವಿಧ್ಯಮಯ ಗಣಪನನ್ನು ನೋಡಿ ಸಂತಸ ಪಡುವುದಷ್ಟೇ ಅಲ್ಲ
ಶಿರಸಿಯ ಫೋಟೋಗ್ರಾಫರ್ಸ್ ಮತ್ತು ವಿಡಿಯೊಗ್ರಾಫರ್ಸ್ ಅಸೋಸಿಯೇಶನ್ ನಿಂದ ಕಳೆದ ಹಲವು ವರ್ಷಗಳಿಂದ ಶ್ರೀ ಗಣೇಶೋತ್ಸವದ ಸಂದರ್ಭದಲ್ಲಿ ಅತ್ಯುತ್ತಮ ಮಂಗಲ ಮೂರ್ತಿಗೆ ವಿಶೇಷ ಬಹುಮಾನವನ್ನು ನೀಡುತ್ತಾ ಬಂದಿದ್ದಾರೆ .

ಅದರಂತೆ ಈ ವರ್ಷ ಶಿರಸಿ ತಾಲ್ಲೂಕಿನಲ್ಲಿ ಆಚರಿಸುವ ಸಾರ್ವಜನಿಕ ಗಣೇಶೋತ್ಸವದಲ್ಲಿ ಪ್ರತಿಷ್ಠಾಪಿಸಲಾದ ಶ್ರೀ ಮಾರಿಕಾಂಬಾ ಯುವಕ ಮಂಡಳಿ ಮಾರಿಗುಡಿ ಶಿರಸಿಯ ಗಣೇಶ ಮೂರ್ತಿ ಪ್ರಥಮ ಬಹುಮಾನ ಪಡೆದು ಅಚ್ಚರಿ ಮೂಡಿಸಿದೆ .

RELATED ARTICLES  ಶಾಸಕಿ ಶಾರದಾ ಶೆಟ್ಟಿಯವರ ಮುತುವರ್ಜಿಯಿಂದ ಕುಮಟಾ ಘಟಕಕ್ಕೆ ನಾಲ್ಕು ಹೊಸ ಬಸ್.

ಪ್ರತಿ ವರ್ಷ ಶಿರಸಿಯ ಶ್ರೀ ಗಜಾನನೋತ್ಸವ ಸಮಿತಿ ಜೂ ಸರ್ಕಲ್ ನ ಗಣಪನೇ ಪ್ರಥಮ ಬಹುಮಾನ ಪಡೆದುಕೊಳ್ಳುತ್ತಿತ್ತು ಆದರೆ ಈ ವರ್ಷ ಮಾರಿಕಾಂಬ ಯುವಕ ಮಂಡಳಿಯಲ್ಲಿ ಪ್ರತಿಷ್ಠಾಪಿಸಲಾದ ಗಣಪ ಪ್ರಥಮ ಬಹುಮಾನ ಪಡೆದಿದ್ದಾನೆ .

ಈ ಗಣಪನ ಪ್ರತಿಮೆಯನ್ನು ತಯಾರಿಸಿದವರು ಶ್ರೀ ನಾಗರಾಜ್ ಗುನಗ ಸಂಕೊಳ್ಳಿ . ಪಾರಂಪರಿಕ ಗಣಪನ ಮೂರ್ತಿ ತಯಾರಿಕಾ ಕುಟುಂಬದಲ್ಲಿ ಜನಿಸಿದ ಇವರು ಅತ್ಯಂತ ವೈವಿಧ್ಯಮಯವಾಗಿ ಹಾಗೂ ಅರ್ಥಪೂರ್ಣವಾಗಿ ಗಣಪನ ಮೂರ್ತಿಯನ್ನು ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸಿಕೊಂಡು ಬಂದಿದ್ದಾರೆ .

ಶಿರಸಿ, ಸಿದ್ದಾಪುರ, ಹೊನ್ನಾವರ ,ಕುಮಟಾ ಹಾಗೂ ತಾಲ್ಲೂಕಿನ ಅಕ್ಕಪಕ್ಕದಲ್ಲಿ ಅನೇಕ ಗಣಪನ ಮೂರ್ತಿಯನ್ನು ಇವರು ತಯಾರಿಸುತ್ತಾರೆ .ಇವಿಷ್ಟೇ ಅಲ್ಲದೇ ಇವರ ಕೈಗಳಿಂದ ಅರಳಿದ ಅನೇಕ ಅನೇಕ ಗಣಪನ ಮೂರ್ತಿಗಳು ಬಹಳ ವೈವಿಧ್ಯಮಯವಾಗಿ ಕಂಗೊಳಿಸಿದೆ.
IMG 20180922 WA0009
ಪ್ರಥಮ ಬಹುಮಾನವನ್ನು ಪಡೆದ ನಿಟ್ಟಿನಲ್ಲಿ ಶ್ರೀ ಮಾರಿಕಾಂಬ ಯುವಕ ಮಂಡಳದಿಂದ ನಾಗರಾಜ ಗುನಗಾ ಸಂಕೊಳ್ಳಿ ಅವರಿಗೆ ಸನ್ಮಾನವನ್ನು ಮಾಡಲಾಗಿದೆ .ಶಿರಸಿ ಮಾರಿಕಾಂಬಾ ಯುವಕ ಮಂಡಳಿಯ ಅಧ್ಯಕ್ಷರಾದ ರಮಾಕಾಂತ್ ನಾಯ್ಕ, ಕಾರ್ಯದರ್ಶಿ ಸಂತೋಷ್ ಶಿರ್ಸಿಕರ್, ಖಜಾಂಚಿ ಕಮಲಾಕರ್ ಹಾಗೂ ಗೌರವಾಧ್ಯಕ್ಷರಾದ ಗಣಪತಿ ನಾಯ್ಕ ನಾಗರಾಜ ಇವರನ್ನು ಸನ್ಮಾನಿಸಿ ಗೌರವಿಸಿದ್ದಾರೆ .

RELATED ARTICLES  ಜೈನಾಬಿ ಸಾಬ್ ರಿಗೆ ಕೈತ್ತಪಿತು ಹೊನ್ನಾವರ ಪ.ಪಂ. ಅಧ್ಯಕ್ಷ ಸ್ಥಾನ! ಫೈಲ್ ಗೆ ಸಹಿ ಮಾಡದಿದ್ದುದೇ ಮುಳುವಾಯ್ತಾ?

ಗಣಪನ ಮೂರ್ತಿ ತಯಾರಿಕೆಯಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಶ್ರೀ ನಾಗರಾಜ್ ಗುನಗ ಇವರಿಗೆ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಎಲ್ಲರೂ ಹಾರೈಸೋಣ.