ಭವಿಷ್ಯ ಪುರಾಣ 102ನೇ ಅಧ್ಯಾಯದಲ್ಲಿ ನಕ್ಷತ್ರಗಳ ಆರಾಧನೆಯನ್ನು ಹೇಗೆ ಆಚರಿಸಬೇಕೆಂದು ವಿವರವಾಗಿ ತಿಳಿಸಿದ್ದಾರೆ. ವ್ಯಕ್ತಿಗಳ ಜನ್ಮಕಾಲದಲ್ಲಿಯ ನಕ್ಷತ್ರವನ್ನು ತಿಳಿದು ಆಚರಿಸಿದರೆ. ದೋಷಗಳು ಪರಿಹಾರವಾಗಿ, ಶುಭಫಲವನ್ನೇ ನೀಡುತ್ತವೆ. ನಿಯಮಗಳನ್ನು ತಿಳಿದು ಆಚರಿಸಬೇಕು.
1. ಅಶ್ವಿನಿ ನಕ್ಷತ್ರದ ಅಧಿದೇವತೆ, ಅಶ್ವಿನಿ ಕುಮಾರರಾಗಿದ್ದು, ಅಶ್ವಿನಿ ನಕ್ಷತ್ರದ ದಿವಸ ಅಶ್ವಿನಿ ಕುಮಾರರನ್ನು ಪೂಜಿಸಿದರೆ, ಆರೋಗ್ಯ ವೃದ್ದಿಸುತ್ತದೆ. ದೀರ್ಘಾಯಸ್ಸು ಉಂಟಾಗುತ್ತದೆ.
2. ಭರಣಿ ನಕ್ಷತ್ರದ ಅಧಿದೇವತೆ ಯಮನಾಗಿದ್ದು, ಭರಣಿ ನಕ್ಷತ್ರದ ದಿವಸ ಯಮನನ್ನು ನೀಲಿ ಬಣ್ಣದ ಹೂವುಗಳಿಂದ ಪೂಜಿಸಿದರೆ, ಅಕಾಲಿಕ ಮೃತ್ಯುವಿನಿಂದ ಪಾರಾಗಬಹುದು.
3.ಕೃತಿಕೆ ನಕ್ಷತ್ರದ ಅಧಿದೇವತೆ ಅಗ್ನಿಯಾಗಿದ್ದು, ಕೃತಿಕ ನಕ್ಷತ್ರದ ದಿವಸ ಅಗ್ನಿ ದೇವತೆಯನ್ನು ಕೆಂಪು ಹೂವುಗಳಿಂದ ಪೂಜಿಸಿದರೆ, ಅಪೇಕ್ಷಿಸಿದ ಕಾರ್ಯಗಳು ಫಲಿಸುತ್ತದೆ.
4.ರೋಹಿಣಿ ನಕ್ಷತ್ರದ ಅಧಿದೇವತೆ ಬ್ರಹ್ಮನಾಗಿದ್ದು, ರೋಹಿಣಿ ನಕ್ಷತ್ರದ ದಿವಸ ಬ್ರಹ್ಮನನ್ನು ಪೂಜಿಸಿದರೆ, ಕೆಲಸ ಕಾರ್ಯಗಳು ಸುಗಮವಾಗಿ ಅಭಿವೃದ್ದಿ ಹೊಂದುತ್ತದೆ.
5.ಮೃಗಶಿರ ನಕ್ಷತ್ರದ ಅಧಿದೇವತೆ ಚಂದ್ರನಾಗಿದ್ದು, ಮೃಗಶಿರ ನಕ್ಷತ್ರದ ದಿವಸ ಚಂದ್ರನನ್ನು ಪೂಜಿಸಿದರೆ, ಜ್ಞಾನ ಮತ್ತು ಆರೋಗ್ಯ ವೃದ್ದಿಯಾಗುತ್ತದೆ.
6.ಆರಿದ್ರ ನಕ್ಷತ್ರದ ಅಧಿದೇವತೆ ಶಿವನಾಗಿದ್ದು, ಆರಿದ್ರಾ ನಕ್ಷತ್ರದ ದಿವಸ ಶಿವನನ್ನು ತಾವರೆ ಹೂವುಗಳಿಂದ ಪೂಜಿಸಿದರೆ, ಸ್ಪರ್ಧೆಗಳಲ್ಲಿ ಜಯ ಉಂಟಾಗುತ್ತದೆ.
7.ಪುನರ್ವಸು ನಕ್ಷತ್ರದ ಅಧಿದೇವತೆ ಅದಿತಿ (ಕಾಷ್ಯಪ ಮಹರ್ಷಿಯ ಪತ್ನಿ – ದೇವತೆ ತಾಯಿ) ಯಾಗಿದ್ದು, ಪುನರ್ವಸು ನಕ್ಷತ್ರದ ದಿವಸ ಅದಿತಿಯನ್ನು ಪೂಜಿಸಿದರೆ, ತಾಯಿಯ ಮತ್ತು ಹಸು ಕರುಗಳ ರಕ್ಷಣೆ ಉಂಟಾಗುತ್ತದೆ ಸಂತಾನಾಪೇಕ್ಷಿಗಳು ಸಹಾ ಪೂಜೆ ಮಾಡಿದರೆ ಸಂತಾನ ಪ್ರಾಪ್ತಿಯಾಗುತ್ತದೆ.
8.ಪುಷ್ಯ ನಕ್ಷತ್ರದ ಅಧಿದೇವತೆ ಬೃಹಸ್ಪತಿಯಾಗಿದ್ದು, ಪುಷ್ಯ ನಕ್ಷತ್ರದ ದಿವಸ ಬೃಹಸ್ಪತಿಯನ್ನು (ಗುರು) ಪೂಜಿಸಿದರೆ ಹೆಚ್ಚಿನ ವ್ಯವಹಾರಿಕ ಜ್ಞಾನ, ಜಾಣ್ಮೆ ಅಭಿವೃದ್ದಿ ಉಂಟಾಗುತ್ತದೆ.
9.ಆಶ್ಲೇಷ ನಕ್ಷತ್ರದ ಅಧಿದೇವತೆ ನಾಗನಾಗಿದ್ದು, ಆಶ್ಲೇಷ ನಕ್ಷತ್ರದ ದಿವಸ ನಾಗ (ಸರ್ಪ) ನನ್ನು ಪೂಜಿಸಿದರೆ, ನಾಗದೋಷ ನಿವಾರಣೆಯಾಗುತ್ತದೆ.
10.ಮಖ ನಕ್ಷತ್ರದ ಅಧಿದೇವತೆ ಪಿತೃ ದೇವತೆಯಾಗಿದ್ದು, ಮಖ ನಕ್ಷತ್ರದ ದಿವಸ ಪಿತೃದೇವತೆಯನ್ನು ಪೂಜಿಸಿದರೆ ಧನ, ಸಂತಾನ, ಹಸುಕರುಗಳು ವೃದ್ದಿಯಾಗುತ್ತದೆ.
11.ಪೂರ್ವಪಲ್ಗುಣಿ ನಕ್ಷತ್ರದ ಅಧಿದೇವತೆ ಪುಶ ಮಹರ್ಷಿಯಾಗಿದ್ದು, ಪೂರ್ವಪಲ್ಗುಣಿ ನಕ್ಷತ್ರದ ದಿವಸ ಪುಶ ಮಹರ್ಷಿಯನ್ನು ಪೂಜಿಸಿದರೆ, ಅಪೇಕ್ಷಣಿಯ ವಧು/ವರ ಸಿಗುತ್ತಾರೆ. ಧನ ವೃದ್ದಿ ಹಾಗು ಚಟುವಟಿಕೆ ಉಳ್ಳವರಾಗುತ್ತಾರೆ.
12.ಉತ್ತರಾಪಲ್ಗುಣಿ ನಕ್ಷತ್ರದ ಅಧಿದೇವತೆ ಆರ್ಯಮ ದೇವತೆಯಾಗಿದ್ದು, ಉತ್ತರಾಪಲ್ಗುಣಿ ನಕ್ಷತ್ರದ ದಿವಸ ಆರ್ಯಮ ದೇವತೆಯನ್ನು ಪೂಜಿಸಿದರೆ, ಈ ದೇವತೆ ವಿವಾಹ, ಕರಾರುಗಳ ಪೋಷಕ ಹಾಗೂ ಶೌರ್ಯ ಮತ್ತು ದೀನರ ರಕ್ಷಣೆ ಉಂಟಾಗುತ್ತದೆ.
13.ಹಸ್ತ ನಕ್ಷತ್ರದ ಅಧಿದೇವತೆ ಸೂರ್ಯನಾಗಿದ್ದು, ಹಸ್ತ ನಕ್ಷತ್ರದ ದಿವಸ ಸೂರ್ಯನನ್ನು ಗಂಧ ಹಾಗೂ ಪುಪ್ಪಗಳಿಂದ ಪೂಜಿಸಿದರೆ, ಧನ, ಅಭಿವೃದ್ದಿಯಾಗುತ್ತದೆ ನೆಮ್ಮದಿ ಉಂಟಾಗುತ್ತದೆ.
14.ಚಿತ್ತಾ ನಕ್ಷತ್ರದ ಅಧಿದೇವತೆ ತ್ವಷ್ಟ ದೇವತೆಯಾಗಿದ್ದು, ಚಿತ್ತಾ ನಕ್ಷತ್ರದ ದಿವಸ ತ್ವಷ್ಟ ದೇವತೆಯನ್ನು ಪೂಜಿಸಿದರೆ, ಆರೋಗ್ಯ, ಜ್ಞಾನ, ಆಹಾರ ಧಾನ್ಯ ಅಭಿವೃದ್ದಿ ಉಂಟಾಗುತ್ತದೆ.
15.ಸ್ವಾತಿ ನಕ್ಷತ್ರದ ಅಧಿಪತಿ ವಾಯುದೇವನಾಗಿದ್ದು, ಸ್ವಾತಿ ನಕ್ಷತ್ರದ ದಿವಸ ವಾಯುದೇವನನ್ನು ಪೂಜಿಸಿದರೆ, ದೈವಿಕ ಶಕ್ಷಿಯನ್ನು ನೀಡುತ್ತಾನೆ.
16.ವಿಶಾಖ ನಕ್ಷತ್ರದ ಅಧಿದೇವತೆ ಇಂದ್ರಾಗ್ನಿಯಾಗಿದ್ದು, ವಿಶಾಖನಕ್ಷತ್ರದ ದಿವಸ ಇಂದ್ರಾಗ್ನಿಯನ್ನು ಕೆಂಪು ಹೂವುಗಳಿಂದಪೂಜಿಸಿದರೆ ಧನ ಮತ್ತು ಇಷ್ಟಾರ್ಥಗಳು ಈಡೇರುತ್ತವೆ.
17.ಅನುರಾಧ ನಕ್ಷತ್ರ ಅಧಿದೇವತೆ ಮಿತ್ರದೇವನಾಗಿದ್ದು, ಅನುರಾಧ ನಕ್ಷತ್ರ ದಿವಸ ಮಿತ್ರದೇವನನ್ನು ಪೂಜಿಸಿದರೆ, ಲಕ್ಷ್ಮಿ ಒಲಿಯುತ್ತಾಳೆ, ಧೀರ್ಘಾಯುವಾಗುತ್ತಾರೆ.
18.ಜೇಷ್ಟ ನಕ್ಷತ್ರದ ಅಧಿದೇವತೆ ಇಂದ್ರನಾಗಿದ್ದು, ಜೇಷ್ಟ ನಕ್ಷತ್ರದ ದಿವಸ ಇಂದ್ರನನ್ನು ಪೂಜಿಸಿದರೆ ಪೌರುಷವಂತ, ಧನವಂತ, ಧಾರ್ಮಿಕ ಸ್ವಭಾವ ಉಂಟಾಗುತ್ತದೆ.
19.ಮೂಲ ನಕ್ಷತ್ರದ ಅಧಿದೇವತೆ ಶಿನಿರುತಿಷಿ ದೇವತೆಯಾಗಿದ್ದು, ಮೂಲ ನಕ್ಷತ್ರದ ದಿವಸ ನಿರುತಿ ದೇವತೆಯನ್ನು ಪೂಜಿಸಿದರೆ, ನರಕಯಾತನೆಯಿಂದ ಮುಕ್ತನಾಗುತ್ತಾನೆ. ದೋಷಗಳು ಪರಿಹಾರವಾಗುತ್ತದೆ.
20.ಪೂರ್ವಾಷಾಡ ನಕ್ಷತ್ರದ ಅಧಿದೇವತೆ ಜಲದೇವತೆಯಾಗಿದ್ದು, ಪೂರ್ವಾಷಾಡ ನಕ್ಷತ್ರದ ದಿವಸ ಜಲದೇವತೆ ಅಥವಾ ಗಂಗಾ ಮಾತೆಯನ್ನು ಪೂಜಿಸಿದರೆ, ಮಾನಸಿಕ ಹಾಗೂ ದೈಹಿಕ ಒತ್ತಡಗಳು ನಿವಾರಣೆಯಾಗುತ್ತದೆ.
21.ಉತ್ತರಾಷಾಡ ನಕ್ಷತ್ರದ ಅಧಿದೇವತೆ ವಿಶ್ವದೇವನಾಗಿದ್ದು, ಉತ್ತರಾಷಾಡ ನಕ್ಷತ್ರದ ದಿವಸ ವಿಶ್ವ ದೇವನನ್ನು ಹೂವುಗಳಿಂದ ಪೂಜಿಸಿದರೆ ಎಲ್ಲಾ ಕೆಲಸ ಕಾರ್ಯಗಳು ಕೈಗೂಡುತ್ತದೆ.
22.ಶ್ರವಣ ನಕ್ಷತ್ರದ ಅಧಿದೇವತೆ ವಿಷ್ಣುವಾಗಿದ್ದು, ಶ್ರವಣ ನಕ್ಷತ್ರದ ದಿವಸ ವಿಷ್ಣುವನ್ನು ಹಳದಿ ಮತ್ತು ನೀಲಿ ಹೂವುಗಳಿಂದ ಪೂಜಿಸಿದರೆ, ಧನ ವೃದ್ದಿ, ಸ್ಪರ್ಧೆಗಳಲ್ಲಿ ಜಯಶಾಲಿಗಳಾಗುತ್ತಾರೆ.
23.ಧನಿಷ್ಟ ನಕ್ಷತ್ರದ ಅಧಿದೇವತೆ ವಸುದೇವತೆಯಾಗಿದ್ದು, ಧನಿಷ್ಟ ನಕ್ಷತ್ರದ ದಿವಸ ವಸುದೇವತೆಯನ್ನು ಗಂಧ, ಪುಪ್ಪಗಳಿಂದ ಪೂಜಿಸಿದರೆ, ಎಲ್ಲಾ ರೀತಿಯ ಭಯ ನಿವಾರಣೆಯಾಗುತ್ತದೆ.
24.ಶತಭೀಷ ನಕ್ಷತ್ರದ ಅಧಿದೇವತೆ ವರುಣ ದೇವತೆಯಾಗಿದ್ದು, ಶತಬೀಷ್ ನಕ್ಷತ್ರದಿವಸ ವರುಣ ದೇವತೆಯನ್ನು ಪೂಜಿಸಿದರೆ, ಎಲ್ಲಾ ರೀತಿಯ ತೊಂದರೆಗಳು ನಿವಾರಣೆಯಾಗಿ ಶಕ್ತಿ, ಧನ, ವೃದ್ದಿಯಾಗುತ್ತದೆ.
25.ಪೂರ್ವಾಬಾದ್ರ ನಕ್ಷತ್ರದ ಅಧಿದೇವತೆ ಅಜನ್ಮ (ರುದ್ರನ ಇನ್ನೊಂದು ಹೆಸರು) ನಾಗಿದ್ದು, ಪೂರ್ವಾಬಾದ್ರ ನಕ್ಷತ್ರದ ದಿವಸ ಅಜನ್ಮನನ್ನು ಪೂಜಿಸಿದರೆ, ಶ್ರದ್ದಾವಂತ, ಧರ್ಮನಿಷ್ಟನಾಗುತ್ತಾನೆ.
26.ಉತ್ತರಾಬಾದ್ರ ನಕ್ಷತ್ರದ ಅಧಿದೇವತೆ ಅಹಿರ್ಬುದ್ನ (ರುದ್ರ ನ ಮತ್ತೊಂದು ಹೆಸರು) ನಾಗಿದ್ದು, ಉತ್ತರಾಬಾದ್ರ ನಕ್ಷತ್ರದಿವಸ ಅಹಿರ್ಬುದ್ನ ದೇವತೆಯನ್ನು ಪೂಜಿಸಿದರೆ, ದೇವತಾಶಾಸ್ತ್ತ್ರ ನಿಪುಣನಾಗುತ್ತಾನೆ.
27.ರೇವತಿ ನಕ್ಷತ್ರದ ಅಧಿದೇವತೆ ಪೂಷ ದೇವತೆ (ಸೂರ್ಯನ ಇನ್ನೊಂದು ಹೆಸರು) ಯಾಗಿದ್ದು, ರೇವತಿ ನಕ್ಷತ್ರದ ದಿವಸ ಪೂಷ ದೇವತೆಯನ್ನು, ಬಿಳಿ ಹೂವುಗಳಿಂದ ಪೂಜಿಸಿದರೆ, ಶುಭ ಉಂಟಾಗುತ್ತದೆ. ಸಾಹಸವಂತರಾಗುತ್ತಾರೆ. ದೋಷಗಳು ನಿವಾರಣೆಯಾಗುತ್ತದೆ. ಶುಭ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತವೆ.

RELATED ARTICLES  ಬಸ್ ಸಮಯ ಬದಲಾವಣೆಗೆ ವಿರೋಧ : ಬಸ್ ತಡೆದು ಪ್ರತಿಭಟನೆ