ಕುಮಟಾ : ಇಲ್ಲಿನ ತಾಲೂಕಾ ಪಂಚಾಯತ ಆವರಣದಲ್ಲಿ ಸ್ಥಳೀಯ ಶಾಸಕ ದಿನಕರ ಶೆಟ್ಟಿ ಯವರ ಅಧಿಕೃತ ಕಛೇರಿಯು ಇಂದು ಬೆಳಿಗ್ಗೆ ಪೂಜಾ ಕಾರ್ಯದೊಂದಿಗೆ ಶುಭಾರಂಭ ಗೊಂಡಿತು.

ಶಾಸಕರ ಕಛೇರಿಯ ಶುಭಾರಂಭದಿಂದ ತಾಲೂಕಿನ ಜನತೆಗೆ ಮಾನ್ಯಶಾಸಕರ ಬಳಿ ತಮ್ಮಲ್ಲಿನ ಸಮಸ್ಯೆಗಳನ್ನು ನಿವೇದಿಸಿಕೊಳ್ಳಲು ಇನ್ನಷ್ಟು ಅನುಕೂಲವಾಯಿತೆಂದು ಈ ಸಂದರ್ಭದಲ್ಲಿ ಪಾಲ್ಗೊಂಡವರೆಲ್ಲ ಸಿಹಿ ಹಂಚಿಕೊಳ್ಳುತ್ತ ಸಂತಸ ವ್ಯಕ್ತಪಡಿಸುತ್ತಿರುವುದು ಕಂಡುಬಂದಿತು.

RELATED ARTICLES  ಹಿರೇಗುತ್ತಿ ಹೈಸ್ಕೂಲಿನಲ್ಲಿ ಸಂಭ್ರಮದ ೭೪ನೇ ಗಣರಾಜ್ಯೋತ್ಸವ ಆಚರಣೆ

ಶಾಸಕ ದಿನಕರ ಶೆಟ್ಟಿಯವರು ಈ ಸಂದರ್ಭದಲ್ಲಿ ಮಾತನಾಡಿ ಜನರ ಸಮಸ್ಯೆ ಆಲಿಸಲು ಹಾಗೂ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಗಮನ ಹರಿಸಿ ಜನ ಸಂಪರ್ಕಕ್ಕೆ ಅನುಕೂಲವಾಗುವಂತೆ‌ ಕಛೇರಿ ಸಜ್ಜುಗೊಳಿಸಲಾಗಿದೆ. ಹಿಂದಿನ ನನ್ನ ಅವಧಿಯಲ್ಲಿಯೂ ಇಲ್ಲಿಯೇ ಕಛೇರಿ ನಿರ್ಮಿಸಿ ಜನತೆಯ ಸೇವೆ ಮಾಡಿದ್ದೆ ಈ ಸಂದರ್ಭದಲ್ಲಿ ಅದನ್ನು ಸ್ಮರಿಸುತ್ತೇನೆ ಎಂದರು.

RELATED ARTICLES  ಬರ್ಬರ ಹತ್ಯೆಯ ಪ್ರಮುಖ ಆರೋಪಿ ಅರೆಸ್ಟ್..!

ಎಲ್ಲ ಅಧಿಕಾರಿಗಳು ಹಾಗೂ ಜನಸಾಮಾನ್ಯರ ಸಹಕಾರ ಹಾಗೂ ಇನ್ನಿತರೇ ಜನ ಪ್ರತಿನಿಧಿಗಳ ಸಹಾಯದಿಂದ ಜನ ಸೇವೆ ಮಾಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಸಂತೋಷ ನಾಯ್ಕ, ಬಿಜೆಪಿ ಪ್ರಮುಖರಾದ ವಿನೋದ ಪ್ರಭು ,ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾ.ಪಂ ಅಧ್ಯಕ್ಷರು ಹಾಗೂ ಸಾರ್ವಜನಿಕರು ಹಾಜರಿದ್ದರು.

ವರದಿ : ಜಯದೇವ ಬಳಗಂಡಿ ಕುಮಟಾ.