ಶಿರಸಿ:- ಹೋಟೆಲ್ ಉದ್ಯಮಿಯಾಗಿ ಲಕ್ಸುರಿ ಬಾಬು ಎಂದೇ ಹೆಸರು ಪಡೆದಿದ್ದ ಶಿರಸಿಯ ಅಬ್ದುಲ್ ರಹೀಮ್ ಶೇಖ್ (ಲಕ್ಸುರಿ ಬಾಬು) ಇವರು ಅನಾರೋಗ್ಯದ ಕಾರಣದಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ ಎಂದು ವರದಿಯಾಗಿದೆ.

RELATED ARTICLES  ಅಲ್ಫಾ ವೈನ್‍ಶಾಪ್‍ನಲ್ಲಿದ್ದ ಮದ್ಯವನ್ನು ಕಳವು ಮಾಡಿದ ಐವರು ಆರೋಪಿಗಳನ್ನು ಬಂಧಿಸಿದ ಪೋಲೀಸರು

ಮೃತರು ಕಾಂಗ್ರೆಸ್ ಪಕ್ಷದ ಕಟ್ಟಾ ಕಾರ್ಯಕರ್ತರಾಗಿದ್ದರು. ಲಕ್ಸುರಿ ಬಾಬು ಎಂದೇ ಹೆಸರು ಪಡೆದಿದ್ದ ಇವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹೊಟೆಲ್ ಉದ್ಯಮಿಯಾಗಿ ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದರು.

ನಗರದ ಕೆರೆಗುಂಡಿ ರಸ್ತೆಯ ನಿವಾಸಿಯಾಗಿದ್ದ ಅವರು ಪತ್ನಿ,ಒರ್ವ ಪುತ್ರಿ,ಮೂವರು ಪುತ್ರರು ಹಾಗು ಬಂಧು ಬಳಗದವರನ್ನು ಬಿಟ್ಟು ಅಗಲಿದ್ದಾರೆ.

RELATED ARTICLES  ವಿದ್ಯುತ್ ಗ್ರಾಹಕರ ಜಾಗೃತಿ ಮತ್ತು ಸುರಕ್ಷತಾ ಕಾರ್ಯಕ್ರಮ

ಮೃತರ ಅಂತ್ಯ ಸಂಸ್ಕಾರವನ್ನು ನೂರಾರು ಬಂಧು ಬಾಂದವರ ನಡುವೆ ಶಿರಸಿಯಲ್ಲಿ ನೆರವೇರಿಸಲಾಯಿತೆಂದು ಕುಟುಂಬ ಮೂಲದವರು ತಿಳಿಸಿದ್ದಾರೆ.