ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ 2017-18ನೇ ಸಾಲಿನಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ನೀಡಿದ ಹಾಗೂ ಹಾಲು ಪೂರೈಸಿದ ಎಲ್ಲ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ
ಸಂಘದ ಉಪಕೇಂದ್ರವಾದ ಮುಠ್ಠಳ್ಳಿಯಲ್ಲಿ ಅತಿ ಹೆಚ್ಚು ಹಾಲು ನೀಡಿದ ಗೋಪಾಲಕೃಷ್ಣ ದೇವರು ಹೆಗಡೆ ಊರತೋಟ, ಗಣೇಶ ರಾಘವ ಹೆಗಡೆ ಊರತೋಟ ಹಾಗೂ ಮಂಜುನಾಥ ಗಣಪ ನಾಯ್ಕ ಹುಬ್ಬಗೈ ಅವರಿಗೆ ಹಾಗೂ ಹಾರ್ಸಿಕಟ್ಟಾ ಮುಖ್ಯ ಕೇಂದ್ರದಲ್ಲಿ ಅತಿ ಹೆಚ್ಚು ಹಾಲು ನೀಡಿದ ಚಂದ್ರಶೇಖರ ತಿಮ್ಮಪ್ಪ ಹೆಗಡೆ ಕಂಚಿಮನೆ, ಶ್ರೀಧರ ಎಂ.ಭಟ್ಟ ಮಾಣಿಕ್ನಮನೆ ಹಾಗೂ ವೆಂಕಟ್ರಮಣ ರಾಮಕೃಷ್ಣ ಹೆಗಡೆ ಕಂಚಿಮನೆ ಅವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಯಿತು.
ಹಾಲು ಪೂರೈಕೆ ಪ್ರೋತ್ಸಾಹಿಸಯವ ದೃಷ್ಟಿಯಿಂದ ಈ ಕಾರ್ಯ ಕೈಗೊಂಡಿದ್ದು ಈ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
ಹಾರ್ಸಿಕಟ್ಟಾ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ ಶ್ರೀಧರ ಎಂ.ಭಟ್ಟ ಮಾಣಿಕ್ನಮನೆ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಕಾರ್ಯದರ್ಶಿ ರಮೇಶ ಹೆಗಡೆ ಹಾರ್ಸಿಮನೆ ಸಂಘದ ವಾರ್ಷಿಕ ವರದಿ ವಿವರಿಸಿದರು. ಇದೇ ಸಂದರ್ಭದಲ್ಲಿ ಸಂಘದ ಅಭಿವೃದ್ಧಿ ಕುರಿತು ಸದಸ್ಯರು ಚರ್ಚೆ ನಡೆಸಿದರು.