ಜಿಮ್​ ಟ್ರೇನರ್ ಮಾರುತಿ ಗೌಡನನ್ನು ಅಪಹರಿಸಿ, ಹಲ್ಲೆ ಮಾಡಿರುವ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಅವರನ್ನು ಹೈಗ್ರೌಂಡ್​ ಪೊಲೀಸರು ಬಂಧಿಸಿದ್ದಾರೆ.

ನಿನ್ನೆ ರಾತ್ರಿ ವಸಂತನಗರದ ಅಂಬೇಡ್ಕರ್​ ಭವನದಲ್ಲಿ ಬಾಡಿ ಬಿಲ್ಡಿಂಗ್​ ಸ್ಪರ್ಧೆ ನೋಡಲು ಬಂದಿದ್ದ ನಟ ದುನಿಯಾ ವಿಜಯ್​ ಈ ಹಲ್ಲೆ ನಡೆಸಿದ್ದಾರೆ. ಜಿಮ್​ ಟ್ರೇನರ್​ ಆಗಿದ್ದ ಪಾನಿಪುರಿ ಕಿಟ್ಟಿ ಜೊತೆಗೆ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಆತನ ಸಂಬಂಧಿ ಮಾರುತಿ ಗೌಡನನ್ನು ಅಪಹರಿಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸುವ ಮೂಲಕ ಮತ್ತೊಮ್ಮೆ ತನ್ನ ಗೂಂಡಾಗಿರಿಯನ್ನು ತೋರಿದ್ದಾರೆ.

ನಿನ್ನೆ ಸಂಜೆ ಮಿಸ್ಟರ್​ ಬೆಂಗಳೂರು ಸ್ಪರ್ಧೆ ನೋಡಲು ಅಂಬೇಡ್ಕರ್​ ಭವನಕ್ಕೆ ಬಂದಿದ್ದ ದುನಿಯಾ ವಿಜಯ್​ ತನ್ನ ಹಳೆಯ ಜಿಮ್ ಟ್ರೇನರ್​ ಆಗಿದ್ದ ಪಾನಿಪುರಿ ಕಿಟ್ಟಿಯ ಜೊತೆಗೆ ಮಾತಿಗೆ ಮಾತು ಬೆಳೆಸಿದ್ದಾರೆ. ಈ ವೇಳೆ ಪಾನಿಪುರಿ ಕಿಟ್ಟಿಯ ಸಂಬಂಧಿಯಾದ ಮಾರುತಿಯನ್ನು ಕಾರಿನಲ್ಲಿ ಕೂರಿಸಿಕೊಂಡು ದುನಿಯಾ ವಿಜಯ್​ ಸಹಚರರು ಕರೆದುಕೊಂಡು ಹೋಗಿದ್ದಾರೆ. ರಾತ್ರಿಯೆಲ್ಲ ಕಾರಿನಲ್ಲೇ ಬೆಂಗಳೂರು ಸುತ್ತಿಸಿರುವ ದುನಿಯಾ ವಿಜಯ್​, ಮಣಿ ಮತ್ತು ಪ್ರಸಾದ್​ ಮತ್ತಿತರರು ಕಾರಿನಲ್ಲೇ ಮಾರುತಿ ಮೇಲೆ ಹಲ್ಲೆ ನಡೆಸಿದ್ದಾರೆ.

RELATED ARTICLES  ಕಳ್ಳತನಕ್ಕೆ ಇಳಿದವರು ಮಹಿಳೆಗೆ ಬೆದರಿಸಿ ಹಣ ಕಿತ್ತರು ನೋಡಿ ಈ ವೀಡಿಯೋ

ನಟರಾದ ಯಶ್ , ಪ್ರೇಮ್ , ಅಜಯ್ ರಾವ್ ಗೆ ಜಿಮ್​ ಟ್ರೇನರ್​ ಆಗಿರುವ ಮಾರುತಿ ಗೌಡ ಆಗಿರೋ ಹಲ್ಲೆಗೊಳಗಾದ ಮಾರುತಿಯನ್ನು ಅಪಹರಿಸಿರುವ ಬಗ್ಗೆ ದುನಿಯಾ ವಿಜಯ್​ ವಿರುದ್ಧ ಹೈಗ್ರೌಂಡ್​ ಪೊಲೀಸ್​ ಠಾಣೆಯಲ್ಲಿ ಪಾನಿಪುರಿ ಕಿಟ್ಟಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ 11.30ರ ಸುಮಾರಿಗೆ ದುನಿಯಾ ವಿಜಯ್​ನನ್ನು ಸಂಪರ್ಕ ಮಾಡಿದ್ದ ಹೈಗ್ರೌಂಡ್​ ಪೊಲೀಸರ ಆದೇಶದ ಮೇರೆಗೆ ಮಾರುತಿ ಗೌಡನ ಜೊತೆಗೆ ಅರ್ಧ ಗಂಟೆಯೊಳಗೆ ಪೊಲೀಸ್​ ಠಾಣೆಗೆ ಹಾಜರಾಗಿದ್ದಾರೆ.

ಪೊಲೀಸ್ ಠಾಣೆ ಬಳಿಯೂ ದರ್ಪ ತೋರಿದ ದುನಿಯಾ ವಿಜಯ್ ಅವ್ಯಾಚ ಶಬ್ದಗಳಿಂದ ಮತ್ತೆ ಪಾನಿಪುರಿ ಕಿಟ್ಟಿ ಹಾಗೂ ಹುಡುಗರ ಮೇಲೆ ರೇಗಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಬಳಿ ದುನಿಯಾ ವಿಜಿ ಮತ್ತು ಪಾನಿಪುರಿ ಕಿಟ್ಟಿ ಹುಡುಗರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ದುನಿಯಾ ವಿಜಯ್​ ಅವರ ರೇಂಜ್​ ರೋವರ್​ ಕಾರಿಗೆ ಹೊಡೆದು ಪಾನಿಪುರಿ ಕಿಟ್ಟಿ ಕಡೆಯ ಹುಡುಗರು ಆಕ್ರೋಶ ಹೊರಹಾಕಿದ್ದಾರೆ. ಇದರಿಂದಾಗಿ ಪೊಲೀಸ್​ ಠಾಣೆಯ ಬಳಿ ಬಿಗುವಿನ ವಾತಾವರಣ ನಿರ್ಮಾಣವಾದ್ದರಿಂದ ಪರಿಸ್ಥಿತಿಯನ್ನು ನಿಯಂತ್ರಿಸಲು ಕೆಎಸ್​ಆರ್​ಪಿ ತುಕಡಿ ನಿಯೋಜನೆ ಮಾಡಬೇಕಾಯಿತು. ಬಳಿಕ, ದುನಿಯಾ ವಿಜಯ್​ಗೆ ಎಸಿಪಿ ರವಿಶಂಕರ್​ ಖಡಕ್​ ಎಚ್ಚರಿಕೆ ನೀಡಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಅಪಹರಣ, ಮಾರಣಾಂತಿಕ ಹಲ್ಲೆ, ಕೊಲೆ ಬೆದರಿಕೆ ಆರೋಪದಡಿ ದುನಿಯಾ ವಿಜಯ್​ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

RELATED ARTICLES  ಏರುತ್ತಿದೆ ಮೀನಿನ ಬೆಲೆ : ಮೀನು ಪ್ರಿಯರಿಗೆ ಬಿಗ್ ಶಾಕ್

ಈ ಮೊದಲು ಕೂಡ ಹಲವು ಬಾರಿ ನಟ ದುನಿಯಾ ವಿಜಯ್​ ಮೇಲೆ ಕೇಸ್​ಗಳು ದಾಖಲಾಗಿದ್ದವು. 2018ರ ಮೇ 31ರಂದು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ ಆರೋಪದ ಮೇರೆಗೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. 2013ರ ಜನವರಿ 18ರಂದು ಪತ್ನ ನಾಗರತ್ನಾಗೆ ಜೀವ ಬೆದರಿಕೆಯೊಡ್ಡಿದ್ದ ಆರೋಪದಲ್ಲಿ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿಜಯ್​ ಅವರ ಸಂಬಂಧಿ ಶಿವಶಂಕರಗೌಡ ಎಂಬಾತನ ಮೇಲೆ ಹಲ್ಲೆ ನಡೆಸಿದ್ದ ಆರೋಪದಲ್ಲೂ ದೂರು ದಾಖಲಿಸಿಕೊಳ್ಳಲಾಗಿತ್ತು. 2013ರ ಜನವರಿ 17ರಲ್ಲಿ ಕೌಟುಂಬಿಕ ನ್ಯಾಯಲಯದಲ್ಲಿ ವಿಜಯ್​ ಪತ್ನಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು.