ಹಳಿಯಾಳ:ದಿನಾಂಕ 18/09/2018 ರಂದು ಜೊಯೀಡಾದ ರಾಮನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದ 17 ವರ್ಷ ವಯೋಮಿತಿಯೊಳಗಿನ ಬಾಲಕರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಸರಕಾರಿ ಪ್ರೌಢಶಾಲೆ ಸಾಂಬ್ರಾಣಿ, ತಾ: ಹಳಿಯಾಳ ಪ್ರಥಮ ಸ್ಥಾನವನ್ನು ಪಡೆದು ವಿಭಾಗೀಯ ಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿದೆ. ಬಾಲಕರ ಬಾಲ್ ಬ್ಯಾಡ್ಮಿಂಟನ್ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

RELATED ARTICLES  ಚಿಂತನ ರಂಗ ಅಧ್ಯಯನ  ಕೇಂದ್ರದಿಂದ ವಿಶ್ವ ರಂಗಭೂಮಿ ದಿನಾಚರಣೆ.

ತಂಡಗಳಿಗೆ ಉತ್ತಮ ತರಬೇತಿ ನೀಡಿ ಸಾಧನೆಗೆ ಕಾರಣರಾದ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ರಾಘವೇಂದ್ರ ಗೌಡರನ್ನು, ತಂಡದ ವ್ಯವಸ್ಥಾಪಕ ಶಿಕ್ಷಕರಾದ ಶ್ರೀ ಚಂದನ್ ಬಾಳಿಗಾರನ್ನು ಹಾಗೂ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನು ಗ್ರಾಮ ಪಂಚಾಯತ ಸಾಂಬ್ರಾಣಿಯ ಅಧ್ಯಕ್ಷರಾದ ಶ್ರೀಯುತ ಇಂದಿರಾಕಾಂತ ಕಾಮಕರ ಅವರು, ಶಾಲಾ ಎಸ್ ಡಿ ಎಮ್ ಸಿ ಯ ಅಧ್ಯಕ್ಷರು ಹಾಗು ಎಲ್ಲಾ ಸದಸ್ಯರು, ಶಾಲಾ ಮುಖ್ಯಾಧ್ಯಾಪಕರು, ಸಹಶಿಕ್ಷಕರು ಹಾಗು ಶಿಕ್ಷಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿ, ಹರ್ಷ ವ್ಯಕ್ತಪಡಿಸಿರುತ್ತಾರೆ. ವಿಭಾಗೀಯ ಮಟ್ಟದಲ್ಲೂ ಉತ್ತಮ ಸಾಧನೆ ಮಾಡಲೆಂದು ಹಾರೈಸಿರುತ್ತಾರೆ.

RELATED ARTICLES  ಭಟ್ಕಳಕ್ಕೆ ಸಾಗಿಸುತ್ತಿದ್ದ ಜಾನುವಾರು ವಶ ಪಡಿಸಿಕೊಂಡ ಪೋಲೀಸರು.