ಮೈಸೂರು : ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಕಾರು ಸ್ಕಿಡ್​ ಆದ ಕಾರಣ ಮೈಸೂರು ಬಳಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್​, ನಟರಾದ ದೇವರಾಜ್​, ಪ್ರಜ್ವಲ್​ ದೇವರಾಜ್​ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ.

ಮೂವರು ನಟರು ಒಂದೇ ಕಾರಿನಲ್ಲಿ ಮೈಸೂರು ಪ್ರವಾಸ ಕೈಗೊಂಡಿದ್ದರು. ನಿನ್ನೆ ಮೃಗಾಲಯದಲ್ಲಿ ಪ್ರಾಣಿಗಳನ್ನು ದತ್ತು ಪಡೆದುಕೊಂಡು, ಅರಮನೆಯಲ್ಲಿ ಮಾವುತರೊಂದಿಗೆ ಪಂಕ್ತಿಭೋಜನದಲ್ಲೂ ಪಾಲ್ಗೊಂಡಿದ್ದ ನಟರು ಬೆಂಗಳೂರಿಗೆ ವಾಪಾಸ್​ ಬರುವಾಗ ಇಂದು ಮುಂಜಾನೆ 3.35ರ ವೇಳೆಗೆ ಈ ಅವಘಡ ಸಂಭವಿಸಿದೆ. ಇವರ ಜೊತೆಗೆ ಕಾರಿನಲ್ಲಿದ್ದ ದರ್ಶನ್​ ಅವರ ಗೆಳೆಯ ಆಂಟೋನಿಗೂ ಗಂಭೀರ ಗಾಯಗಳಾಗಿವೆ.

RELATED ARTICLES  ಎಸ್‌ಟಿ, ಎಸ್ ಸಿ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಲಾಗಿದೆ ಎಂದು ಆರೋಪಿಸಿ ದಲಿತ ಸಂಘಟನೆಗಳು ನೀಡಿದ್ದ ಕರೆ, ಇದೀಗ ಹಿಂಸಾಚಾರದತ್ತ ತಿರುವು.!

ಚಾಲಕನ ನಿಯಂತ್ರಣ ತಪ್ಪಿದ ಕಾರು ಮೈಸೂರು ಹಿನಕಲ್​ ರಿಂಗ್​ ರಸ್ತೆಯ ಬಳಿ ಅಪಘಾತಕ್ಕೀಡಾಗಿದೆ. ನಟ ದರ್ಶನ್​ ಬಲಗೈಗೆ ಗಂಭೀರವಾದ ಪೆಟ್ಟಾಗಿದ್ದು, ಹಿರಿಯ ನಟ ದೇವರಾಜ್​ ಎದೆಯ ಭಾಗಕ್ಕೆ, ಪ್ರಜ್ವಲ್​ ದೇವರಾಜ್​ ಅವರ ಕುತ್ತಿಗೆಗೆ ಗಾಯಗಳಾಗಿವೆ. ಇವರೆಲ್ಲರನ್ನೂ ಮೈಸೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

RELATED ARTICLES  ಸಂಪನ್ನಗೊಂಡಿತು ಮಹಾ ಮಜ್ಜನ: ಇನ್ನು 2030 ಕ್ಕಾಗಿ ಮತ್ತೆ ಕಾಯಬೇಕು!

ದರ್ಶನ್​ ಅವರ ಕೈಗೆ ಭಾರೀ ಪೆಟ್ಟಾಗಿರುವುದರಿಂದ ತುರ್ತು ಆಪರೇಷನ್​ ನಡೆಸಲು ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ವೈದ್ಯರು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ದರ್ಶನ್​ ಅವರ ಹೆಂಡತಿ ವಿಜಯಲಕ್ಷ್ಮೀ ಮತ್ತು ಮಗ ಮೈಸೂರಿಗೆ ಆಗಮಿಸಿದ್ದಾರೆ. ಆಪರೇಷನ್​ ಮಾಡಬೇಕೆಂದು ವೈದ್ಯರು ಹೇಳಿರುವುದರಿಂದ ವಿಜಯಲಕ್ಷ್ಮೀ ಅವರು ತಮ್ಮ ಕುಟುಂಬದವರೊಂದಿಗೆ ಮಾತನಾಡುತ್ತಿದ್ದಾರೆ.