ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸೋಮವಾರ ರಾತ್ರಿ ಭಾರೀ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಇದರಿಂದಾಗಿ ಸಾರ್ವಜನಿಕರು ಪರದಾಡಬೇಕಾದ ಪರಿಸ್ಥಿತಿ ಉಂಟಾಗಿದೆ.

ಗುಡುಗು ಮಿಂಚಿನ ಅಬ್ಬರದಿಂದ ರಾತ್ರಿ ವೇಳೆಗೆ ಆರಂಭವಾದ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಮೈಸೂರು ರಸ್ತೆ , ನಾಯಂಡಹಳ್ಳಿಯಲ್ಲಿ ಭಾರಿ ಮಳೆ ಸುರಿದ ಪರಿಣಾಮ ಕಾರೊಂದು ಕೊಚ್ಚಿ ಹೋದ ಬಗ್ಗೆ ವರದಿಯಾಗಿದೆ.
ಮಲ್ಲೇಶ್ವರಂ, ಮತ್ತಿಕೆರೆ,ಬನ್ನೇರುಘಟ್ಟ ರಸ್ತೆಯ ಮೆಗಾ ಸಿಟಿ ಪ್ರದೇಶದಲ್ಲಿ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಅಲ್ಲದೇ ಹೆಬ್ಬಾಳದಲ್ಲಿಯೂ ಸಹ ನೀರಿನಿಂದ ತುಂಬಿಹೋಗಿದೆ ಎಂದು ತಿಳಿದುಬಂದಿದೆ.

RELATED ARTICLES  ದೇವರ ಮುಂದೆ ಪ್ರಾರಂಭವಾಗಿದೆಯಾ ರಮಾನಾಥ ರೈ ಲಾಬಿ?

ಮಳೆಯು ಇಂದೂ ಕೂಡ ಮುಂದುವರಿಯುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದ್ದು ಇದರಿಂದಾಗಿ ನಗರದ ಜನತೆಯಲ್ಲಿ ಆತಂಕ ಮನೆ ಮಾಡಿದೆ.ಧಾರಾಕಾರ ಮಳೆಯಿಂದಾಗಿ ಬೆಂಗಳೂರಿನ ಜನತೆ ಪರದಾಡು ಸ್ಥಿತಿ ಸೃಷ್ಟಿಯಾಗಿದೆ.

RELATED ARTICLES  ಜಿಲ್ಲೆಯಲ್ಲಿ ನಾಳೆ ಎಲ್ಲೆಲ್ಲಿ ಎಷ್ಟು ವ್ಯಾಕ್ಸಿನ್ ಲಭ್ಯ..!