ದಿನಾಂಕ :25-09-2018 ರಂದು ಶ್ರೀ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ,ಕವಲಕ್ಕಿ ಇಲ್ಲಿ ಹಡಿನಬಾಳ ವಲಯಮಟ್ಟದ ಪ್ರತಿಭಾ ಕಾರಂಜಿಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಅನುದಾನಿತ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಜಿ. ಎಚ್ ನಾಯ್ಕ ಉಧ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ,ಕವಲಕ್ಕಿಯ ಅಧ್ಯಕ್ಷರಾದ ಶ್ರೀ ಉಮೇಶ ಹೆಗಡೆಯವರು ವಹಿಸಿದ್ದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿಗಳಾದ ಶ್ರೀಯುತ ಆಯ್ ಆರ್ ಭಟ್ ಮತ್ತು ಶ್ರೀ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ,ಕವಲಕ್ಕಿಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ವೈಲೆಟ್ ಫರ್ನಾಂಡಿಸ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

RELATED ARTICLES  ಮಹಿಳೆಯ ಹಕ್ಕುಗಳನ್ನು ಎತ್ತಿ ಹಿಡಿದ ಹೆಮ್ಮೆ ನಮ್ಮ ಸಂವಿಧಾನಕ್ಕಿದೆ – ಡಾ.ಎಚ್.ಎಸ್ ಅನುಪಮಾ

ಉದ್ಘಾಟಕರಾದ ಶ್ರೀ ಜಿ. ಎಚ್ ನಾಯ್ಕ ಮಾತನಾಡಿ ಆತ್ಮವಿಶ್ವಾಸವೇ ಮಕ್ಕಳ ಗೆಲುವಿಗೆ ಸಹಕಾರಿ ಎಂದು ಅಭಿಪ್ರಾಯಪಟ್ಟರು ಹಾಗೂ ಶ್ರೀ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ,ಕವಲಕ್ಕಿಯ ಅಧ್ಯಕ್ಷರಾದ ಶ್ರೀಯುತ ಉಮೇಶ ಹೆಗಡೆಯವರು ಶಾಲೆಯ ಅಭಿವೃದ್ಧಿಗೋಸ್ಕರ ಪಡುವ ಶ್ರಮವನ್ನು ಶ್ಲಾಘಿಸಿದರು. ಕಾರ್ಯಕ್ರಮದ ಅಥಿತಿಗಳಾದ ಶ್ರೀ ಆಯ್ ಆರ್ ಭಟ್ರವರು ಮಾತನಾಡಿ ಮಕ್ಕಳ ಪ್ರತಿಭೆಯು ಹೊರಹೊಮ್ಮಲು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಸೂಕ್ತ ಎಂಬ ಸಂದೇಶ ನೀಡಿದರು.ಕಾರ್ಯಕ್ರಮದ ಅಧ್ಯಕ್ಷರಾದ ಉಮೇಶ ಹೆಗಡೆಯವರು ಮಾತನಾಡಿ ವಿಧ್ಯಾರ್ಥಿಗಳು ಬಹುಮಾನವನ್ನು ಅಪೇಕ್ಷಿಸದೆ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಬೇಕೆಂದು ಕರೆಕೊಟ್ಟರು ಹಾಗೂ ಮುಂದಿನ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು.
IMG 20180925 115928
ಕಾರ್ಯಕ್ರಮನ್ನು ಶ್ರೀ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಹಶಿಕ್ಷಕಿಯಾದ ಕುಮಾರಿ ಸಂಗೀತಾ ಶೆಟ್ಟಿ ನಿರೂಪಿಸಿದರು. ಮುಖ್ಯ ಅಧ್ಯಾಪಕಿಯಾದ ಶ್ರೀಮತಿ ವೈಲೆಟ್ ಫರ್ನಾಂಡಿಸ್ ರವರು ಸ್ವಾಗತಿಸಿದರು. ಹಾಗೂ ಸಹಶಿಕ್ಷಕಿಯಾದ ಶ್ರೀಮತಿ ಸಹನಾ ಶೇಖ್ ವಂದಿಸಿದರು.

RELATED ARTICLES  ಮಣ್ಣಿನಲ್ಲಿ‌ ಹೂತಿಡಲಾಗಿತ್ತು ಗೋವಾ ಸಾರಾಯಿ: ಅಂಕೋಲಾದಲ್ಲಿ ಕಾರ್ಯಾಚರಣೆಯಲ್ಲಿ ಬಯಲಾಯ್ತು ಪ್ರಕರಣ