ಸರ್ಕಾರಿ ಶಾಲಾ ಮಕ್ಕಳು ಇಷ್ಟು ದಿನ ಬಿಸಿಯೂಟ ಮತ್ತು ಹಾಲು ಸೇವಿಸುತ್ತಿದ್ದರು, ಆದರೆ ಇನ್ನು ಮುಂದೆ ಹಾಗಲ್ಲ ,ಹಾಲಿನ ಜತೆಗೆ ಜೇನುತುಪ್ಪವನ್ನು ಕೂಡ ಸವಿಯಲಿದ್ದಾರೆ.
ಪೌಷ್ಟಿಕಾಂಶಯುಕ್ತ ಜೇನುತುಪ್ಪ ನೀಡಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಪೌಷ್ಟಿಕಾಂಶ ಯುಕ್ತ ಹಾಲು ಸೇವಿಸುತ್ತಿರುವ ಮಕ್ಕಳು ಇನ್ಮುಂದೆ ಜೇನುತುಪ್ಪದ ಸಿಹಿಯನ್ನು ಅನುಭವಿಸಲಿದ್ದಾರೆ.
ಜೇನಿನಲ್ಲಿ ಬ್ಯಾಕ್ಟೀರಿಯಾಗಳನ್ನು ತಡೆಗಟ್ಟುವ ಶಕ್ತಿ ಇದೆ. ಆ್ಯಂಟಿ ಬಯೋಟಿಕ್ ಗುಣಗಳನ್ನು ಹೊಂದಿದೆ.
ಕೆಮ್ಮು, ಗಂಟಲು ಕೆರೆತ, ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಗುಣ ವಿದೆ. ಜೇನು ಸೇವನೆಯಿಂದ ವಿದ್ಯಾರ್ಥಿಗಳಲ್ಲಿ ಜೀರ್ಣಕ್ರಿಯೆ ಸಮರ್ಪಕವಾಗಿ ನಡೆಯಲು ಸಹಕಾರಿಯಾಗಲಿದೆ. ಕೊಬ್ಬಿನಂತಹ ಅಂಶಗಳು ಕರಗಲಿವೆ. ಜೇನಿನಲ್ಲಿ
ಪೌಷ್ಟಿಕಾಂಶಗಳು, ಶರ್ಕರ ಪಿಷ್ಟಗಳು, ನಾರು, ಸೋಡಿಯಂ, ಪೊಟ್ಯಾಸಿಯಂ, ವಿಟಮಿನ್ ಸಿ, ವಿಟಮಿನ್ ಬಿ ೬, ಕಬ್ಬಿಣ, ಮೆಗ್ನೀ ಷಿಯಂ, ರಂಜಕ, ಸತು, ಕ್ಯಾಲ್ಸಿಯಂ ಅಂಶಗಳಿವೆ.
ಹೌದೂ, ರಾಜ್ಯ ಸರ್ಕಾರ ಹೊಸ ಯೋಜನೆಗೆ ಕೈಹಾಕಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಅಧಿಸೂಚನೆ ನೀಡಿದೆ.
ಮಕ್ಕಳಿಗೆ ಉತ್ತಮ ಪೌಷ್ಠಿಕಾಂಶ ಉಳ್ಳ ಆಹಾರ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಈಗಾಗಲೇ ಎಲ್ಲಾ ರಾಜ್ಯಗಳಿಗೂ ಅಧಿಸೂಚನೆ ನೀಡಿದೆ ಎಂದು ವರದಿಯಾಗಿದೆ.