ಹೈದ್ರಾಬಾದ್: ಬುಧವಾರ ಅತ್ತಾಪುರದಲ್ಲಿ ನಡುರಸ್ತೆಯಲ್ಲೇ, ಹಾಡಹಗಲೇ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ಇಂದು ಬೆಳಗ್ಗೆ ನಡೆದಿದೆ.
ವಾಹನ ಸವಾರರ ಮತ್ತು ನೂರಾರು ಸಾರ್ವಜನಿಕರು ಎದುರಿನಲ್ಲಿಯೇ ಈ ಭೀಕರ ಹತ್ಯೆ ನಡೆದಿದೆ. ಈ ದುಷಕೃತ್ಯ ತಡೆಯಲು ಸಾರ್ವಜನಿಕರು ಪ್ರಯತ್ನಿಸಿದರೂ, ಆದರೆ ಪ್ರಾಣಭಯದಿಂದ ಹಿಂದೆ ಸರಿದರು.
ನಾಲ್ವರು ದುಷ್ಕರ್ಮಿಗಳು ಕೃತ್ಯ ಎಸಗಿದ್ದು, ಒಬ್ಟಾತ ನೆಲಕ್ಕೆ ಬಿದ್ದಾತನನ್ನು ಮನಬಂದಂತೆ ಕೊಚ್ಚಿ ಅಟ್ಟಹಾಸ ಮೆರೆದಿದ್ದಾನೆ.
ಈ ಹತ್ಯೆಯ ದೃಶ್ಯ ಸಿಸಿಟಿವಿ ದಾಖಲಾಗಿದೆ. ಮಚ್ಚಿನಿಂದ ಸತತವಾಗಿ ಕೊಚ್ಚಿ ವ್ತಕ್ತಿಯ ಪ್ರಾಣ ತೆಗೆಯಲಾಗಿದೆ.
ಹತ್ಯೆಗೀಡಾದ ವ್ಯಕ್ತಿ ರಮೇಶ್ ಎಂದು ತಿಳಿದು ಬಂದಿದ್ದು, ಈತ ಶಂಶಾಬಾದ್ನಲ್ಲಿ ನಡೆದ ಮಹೇಶ್ ಗೌಡ್ ಎಂಬಾತನ ಕೊಲೆ ಪ್ರಕರಣದ ಆರೋಪಿ ಎಂದು ತಿಳಿದು ಬಂದಿದೆ. ಮಹೇಶ್ ಗೌಡ್ ಸಂಬಂಧಿಕರು ದ್ವೇಷದಲ್ಲಿ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಟ್ರಾಫಿಕ್ ಪೊಲೀಸ್ ಸೇರಿದಂತೆ ಹಲವರುಹತ್ಯೆ ನಡೆದ ಸ್ಥಳದಲ್ಲಿ ಮೂಕ ಪ್ರೇಕ್ಷಕರಾದರು. ಕೆಲವರು ಬೆಚ್ಚಿ ಬಿದ್ದು ಸ್ಥಳದಿಂದ ಓಡಿದರು ಎನ್ನಲಾಗಿದೆ.