ಕುಮಟಾ: ಹಿಂದು ಹೈಸ್ಕೂಲ್ ಕಾರವಾರದಲ್ಲಿ ನಡೆದ ಜಿಲ್ಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಗೆದ್ದು ವಿಭಾಗಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ. ಶ್ರೀರಶ್ಮೀ ಭಟ್ಟ, ಸೌಂದರ್ಯ ಡಿ.ನಾಯ್ಕ, ತನುಜಾ ಗೌಡ, ಪಲ್ಲವಿ ಹರಿಕಾಂತ ಮತ್ತು ಸ್ನೇಹಾ ಡಿ. ಶೇಟ್ ತಂಡದ ಸದಸ್ಯರಾಗಿ ಗೆಲುವಿನ ಪ್ರದರ್ಶನ ನೀಡಿದ್ದಾರೆ.
ಜಿಲ್ಲೆಯಿಂದ ಸತತ ಮೂರನೇ ಬಾರಿ ಈ ಸಾಧನೆ ಗಳಿಸುತ್ತಾ ಬಂದಿರುವ ಶಾಲೆಗೆ ಹಾಗೂ ವಿದ್ಯಾರ್ಥಿನಿಯರ ತಂಡಕ್ಕೆ ದೈಹಿಕ ಶಿಕ್ಷಕ ಲಕ್ಷ್ಮಣ ಅಂಬಿಗ ಮತ್ತು ಮಾರ್ಗದರ್ಶಿ ಶಿಕ್ಷಕ ಪ್ರದೀಪ ನಾಯ್ಕ ಅವರಿಗೆ ಮುಖ್ಯಾಧ್ಯಾಪಕ ಎನ್.ಆರ್.ಗಜು, ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ವಸುದೇವ ಪ್ರಭು, ಕ್ಷೇತ್ರಶಿಕ್ಷಣಾಧಿಕಾರಿ ಎ.ಜಿ.ಮುಲ್ಲಾ ಅಭಿನಂದಿಸಿದ್ದಾರೆ.