ಚೆನ್ನೈ: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಟೆಂಪಲ್ ರನ್ ಮುಂದುವರೆದಿದ್ದು, ಈ ನಡುವೆ ರಾಜ್ಯ ತಮಿಳುನಾಡಿನ ದೇವಾಲಯಕ್ಕೆ ಭೇಟಿ ಪೂಜೆ ಸಲ್ಲಿಸಿದ್ದಾರೆ.

ಇದೇ ವೇಳೆ ತಮಿಳುನಾಡಿನ ತೂತುಕುಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸರ್ಕಾರ ಬೀಳಲಿದೆ ಎನ್ನುವುದು ಕೇವಲ ವದಂತಿ, ಅಂತಹ ಯಾವುದೇ ಸಾಧ್ಯತೆ ಇಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎನ್ನಲಾಗಿದೆ.

RELATED ARTICLES  ರಾಜ್ಯದಲ್ಲೂ ಬೀಸುತ್ತಿದೆಯೇ ಈಶಾನ್ಯ ಮಾರುತ?

ಕುಮಾರಸ್ವಾಮಿಯವರುಕಾವೇರಿ ನೀರಿನ ವಿಚಾರದ ಕುರಿತಾಗಿ ಮಾತನಾಡಲು ನಿರಾಕರಿಸಿದ್ದು, ಆಪರೇಷನ್ ಕಮಲ ಯಾವುದೇ ಕಾರಣಕ್ಕೂ ನಡೆಯುವುದಿಲ್ಲ ಎಂದು ತಿಳಿಸಿದ್ದಾರೆ.