ಮಂಗಳೂರು: ಗುರುವಾರದಂದು ಬಟ್ಟೆ ಅಂಗಡಿಯೊಂದರಲ್ಲಿ ಆಕಸ್ಮಿಕ ಬೆಂಕಿಯುಂಟಾಗಿ ಹೊತ್ತಿ ಉರಿದ ಪರಿಣಾಮ ಲಕ್ಷಾಂತರ ರೂ. ನಷ್ಟ ಉಂಟಾದ ಘಟನೆ ಮಂಗಳೂರುನಲ್ಲಿ ನಡೆದಿದೆ.

ನಗರದ ಜಿಎಚ್ಎಸ್ ರಸ್ತೆಯ ಜನತಾ ಬಝಾರ್ ಬಳಿಯಲ್ಲಿನ ‘ಸೆಲೆಕ್ಷನ್ ಸೆಂಟರ್’ ಬಟ್ಟೆ ಮಳಿಗೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಪರಿಸರವಿಡೀ ಹಬ್ಬಿದೆ.

RELATED ARTICLES  ಕ್ರೇಜಿ ಸ್ಟಾರ್ ರವಿಚಂದ್ರನ್ ಗೆ ಮಾತೃ ವಿಯೋಗ.

ಅಗ್ನಿಶಾಮಕ ದಳದ ಸಿಬ್ಬಂದಿಗಳು ತಕ್ಷಣವೇ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದ ಶಂಕಿಸಲಾಗಿದ್ದು, ಘಟನೆಯಿಂದಾಗಿ ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗಿದೆ ಎಂದು ತಿಳಿದುಬಂದಿದೆ.

RELATED ARTICLES  ಕವಿ ಚೆನ್ನವೀರ ಕಣವಿಗೆ 'ಸಿದ್ದಗಂಗಾ ಶ್ರೀ' ಪ್ರಶಸ್ತಿ