ಮುಂಬೈ:ಅಸುಸ್ ಕಂಪೆನಿ ಇದೀಗ ಹೊಸ ಲ್ಯಾಪ್ ಟಾಪ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನೋಡಲು ಅದ್ಭುತವಾಗಿ ಕೆಲಸ ಮಾಡುವ, ಸುಂದರವಾಗಿರುವ ಈ ಮೊಬೈಲ್ ವಿಂಡೋಸ್ 10 ತಂತ್ರಾಂಶ ಒಳಗೊಂಡಿದೆ.
ಹೊಸ ಪೀಳಿಗೆಯ ಇಂಟೆಲ್ ಕೋರ್ ಐ5 ಪ್ರೊಸೆಸರ್ ಅನ್ನು ಇದು ಒಳಗೊಂಡಿದೆ. 4 ಜಿಬಿ ರ್ಯಾಮ್ , 16 ಜಿಬಿ ಇಂಟೆಲ್ ಅಪ್ಟೇನ್ ಸೇರಿ ಒಟ್ಟು 20 ಜಿಬಿಗಳಷ್ಟು ಸಿಸ್ಟಂ ಮೆಮೊರಿ ಇರುತ್ತೆ. ಇದರಿಂದ ನಾಜೂಕಾಗಿ ಹಾಗೂ ವೇಗವಾಗಿ ಸಿಸ್ಟಮ್ ಕಾರ್ಯ ನಿರ್ವಹಿಸುವುದು ಸಾಧ್ಯವಾಗುತ್ತದೆ.
ಸ್ಟೋರೇಜ್ 1 ಟಿಬಿಯಷ್ಟು ಸೌಲಭ್ಯ ಹೊಂದಿರುವುದು ಇದರ ಹೆಚ್ಚುಗಾರಿಕೆ. ನಿತ್ಯ ಬಳಕೆಗೆ ಹಾಗೂ ಮನರಂಜನೆಗೆ ಪೂರಕವಾದ ಗ್ರಾಫಿಕ್ ಕಾರ್ಡ್ ಇದರಲ್ಲಿರುತ್ತದೆ. ಫಿಂಗರ್ ಪ್ರಿಂಟ್ ಸೆನ್ಸಾರ್ ಸೌಲಭ್ಯವೂ ಇದರಲ್ಲಿದೆ.
7.8 ಎಂಎಂನ ನ್ಯಾನೋ ಎಡ್ಜ್ ಫುಲ್ ಎಚ್ಡಿ ಡಿಸ್ಪ್ಲೇ ಹೊಂದಿದೆ. ತೆಳುವಾದ, ಹಗುರವಾದ ಈ ಲ್ಯಾಪ್ ಟಾಪ್ ಅನ್ನು ತೂಕ ಕೇವಲ 1.7 ಕೆಜಿಗಳು. ಜೊತೆಗೆ 19.4ಎಂಎಂ ಗುಣಮಟ್ಟ ಹೊಂದಿದೆ.
ಇದರ ಬೆಲೆ: 45,990 ರೂಪಾಯಿ ಆಗಿದೆ ಎಂದು ತಿಳಿಸಿದೆ.