ಬೆಂಗಳೂರು: ನಟ ವಿನೋದ್ ರಾಜ್ ಗೆ ಸೇರಿದ ಒಂದು ಲಕ್ಷ ಹಣ ಹಾಡ ಹಗಲೇ ದರೋಡೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ, ಇಂಡಸ್ ಇಂಡ್ ಬ್ಯಾಂಕ್ ಮುಂಭಾಗದಲ್ಲಿ ನಡೆದಿದೆ.

ತಮ್ಮ ತೋಟದ ಕೂಲಿಯಾಳುಗಳಿಗೆ ಸಂಬಳ ನೀಡಲು, ವಿನೋದ್ ರಾಜ್ ಅವರು ಇಂದು ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡು ವಾಪಸ್ಸು ಹೋಗುವ ವೇಳೆಯಲ್ಲಿಈ ಕಳ್ಳತನ ಎಸಗಿದ್ದಾರೆ.

RELATED ARTICLES  ಕ್ವಿಂಟಾಲ್ ಗೂ ಅಧಿಕ ತೂಕದ ಚಾಕಲೇಟ್ ಬೀದಿಗೆ ಎಸೆದರು

ವಿನೋದ್ ರಾಜ್ ಅವರ ಬಳಿಗೆ ಬಂದ ಕಳ್ಳರು ಸರ್ ನಿಮ್ಮ ಟೈರ್ ಪಂಚರ್ ಆಗಿದೆ ಎಂದು, ನಟ ವಿನೋದ್ ರಾಜ್ ಗಮನ ಬೇರೆಡೆ ಸೆಳೆದು, ಈ ವೇಳೆಯಲ್ಲಿ ಕಾರಿನಲ್ಲಿದ್ದ ಒಂದು ಲಕ್ಷ ಹಣವನ್ನು ಕ್ಷಣಾರ್ಧದಲ್ಲಿ ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

RELATED ARTICLES  ಗಡಿಯಲ್ಲಿ ಪಾಕ್ ಅಪ್ರಚೋದಿತ ಗುಂಡಿನ ದಾಳಿ, ಕ್ಯಾಪ್ಟನ್ ಸೇರಿ 4 ಯೋಧರು ಹುತಾತ್ಮ

ಇದರಿಂದ ನಟ ವಿನೋದ್ ರಾಜ್ ಭಯಕ್ಕೆ ಒಳಗಾಗಿದ್ದು, ನೆಲಮಂಗಲ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೋಲಿಸರು ಕಳ್ಳರಿಗಾಗಿ ಹುಡುಕಾಟ ಶುರುಮಾಡಿದ್ದಾರೆ ಎಂದು ತಿಳಿದುಬಂದಿದೆ.