ಹೊನ್ನಾವರ: ನಾಲಾಸೋಪಾರಾ ಸ್ಫೋಟಕ ಪ್ರಕರಣ ಮತ್ತು ದಾಭೋಲಕರ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಒಂದು ತಿಂಗಳಿನಲ್ಲಿ 9 ಹಿಂದುತ್ವನಿಷ್ಠರನ್ನು ಬಂಧಿಸಲಾಗಿದೆ. ಇವರಲ್ಲಿ ಯಾರೂ ಸನಾತನ ಸಂಸ್ಥೆಯ ಸಾಧಕರಲ್ಲ, ಆದಾಗ್ಯೂ` ಸನಾತನ ಸಂಸ್ಥೆಯನ್ನು ನಿಷೇಧಿಸಬೇಕು’, ಎನ್ನುವ ತಳಬುಡವಿಲ್ಲದ ಮತ್ತು ಉತ್ಪ್ರೇಕ್ಷೆಯ ಬೇಡಿಕೆಯನ್ನು ಕೆಲವು ರಾಜಕೀಯ ಪಕ್ಷಗಳು, ಸಂಘಟನೆಗಳು, ತಥಾಕಥಿತ ಪುರೋಗಾಮಿಗಳು, ಮುಸಲ್ಮಾನ ಮುಖಂಡರು ಮುಂತಾದವರು ಮಾಡುತ್ತಿದ್ದಾರೆ. ಕೆಲವು ಪ್ರಸಾರ ಮಾಧ್ಯಮಗಳು ಬಿಸಿಬಿಸಿ ಮತ್ತು ದಿಕ್ಕು ತಪ್ಪಿಸುವ ಸುದ್ದಿಗಳನ್ನು ಪ್ರಸಾರ ಮಾಡಿ ` ಹಿಂದೂ ಭಯೋತ್ಪಾದಕತೆ’ಯ ಡಂಗುರ ಸಾರುತ್ತಿದ್ದಾರೆ; ಆದರೆ ಇನ್ನೊಂದೆಡೆ ಕೋರೆಗಾಂವ- ಭೀಮಾ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ನಕ್ಸಲವಾದಿಗಳ ಸಮರ್ಥಕರನ್ನು ಜಾಣತನದಿಂದ ಹಿಂದಿಟ್ಟುಕೊಂಡು ರಕ್ಷಿಸುತ್ತಿರುವುದು ಇಬ್ಬಗೆಯ ನೀತಿಯಾಗಿದೆ. ಹಿಂದೂಗಳ ಮೇಲಿನ ಅಪರಾಧಗಳು ಸಿದ್ಧವಾಗದೇ ಇರುವಾಗಲೂ ಸಹ ಅವರನ್ನು `ಹಿಂದೂ ಆತಂಕವಾದಿಗಳು’ ಎಂದು ಹೇಳುವವರ ಮತ್ತು ನಕ್ಸಲವಾದಿಗಳ ಸಮರ್ಥಕರನ್ನು `ವಿಚಾರವಂತರು’, `ಸಾಮಾಜಿಕ ಕಾರ್ಯಕರ್ತರು’, `ಮಾನವಾಧಿಕಾರ ಕಾರ್ಯಕರ್ತರು’ ಎಂದು ಉದಾತ್ತೀಕರಣ ಮಾಡುವವರ ನಿಜವಾದ ಮುಖ ಬಹಿರಂಗವಾಗಿದೆ. ಹಿಂದೂಗಳೇ, ನಿಮಗೆ ಯಾರೊಂದಿಗೆ ಹೋಗುವುದಿದೆ ಎನ್ನುವದನ್ನು ನಿರ್ಧರಿಸಲು ಇದೇ ಸರಿಯಾದ ಸಮಯವಾಗಿದೆ. ಧರ್ಮಪರಾಯಣ ಸತ್ಯನಿಷ್ಠ ಸನಾತನ ಸಂಸ್ಥೆಯ ಪರವಾಗಿ ಬರುವುದೋ ಅಥವಾ ಧರ್ಮ ನಿರಪೇಕ್ಷತೆ ಮತ್ತು ಪುರೋಗಾಮಿತ್ವದ ಬುರಖಾ ಹಾಕಿಕೊಂಡು ನಕ್ಸಲವಾದಿಗಳನ್ನು ಸಮರ್ಥಿಸುವುದೋ? ಎಂದು ಪ್ರಶ್ನಿಸುತ್ತಾ` ಧರ್ಮದ ರಕ್ಷಣೆ ಮಾಡುವವರನ್ನೇ ಧರ್ಮ ಅರ್ಥಾತ್ ಈಶ್ವರನು ರಕ್ಷಿಸುತ್ತಾನೆ’, ಎಂದು ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಚಂದ್ರಶೇಖರ ಮೇಸ್ತ ಇವರು ಈ ಸಂದರ್ಭದಲ್ಲಿ ಪ್ರತಿಪಾದಿಸಿದರು.
ನಾಲಾಸೋಪಾರಾ ಸ್ಫೋಟಕ ಪ್ರಕರಣದಲ್ಲಿ ಬಂಧಿಸಲ್ಪಟ್ಟ ನಿಷ್ಪಕ್ಷ ಹಿಂದುತ್ವವಾದಿಗಳ ಸಮರ್ಥನೆಗಾಗಿ ಮತ್ತು ಸನಾತನ ಸಂಸ್ಥೆಯ ಮೇಲೆ ಆಗುತ್ತಿರುವ ಅನ್ಯಾಯದ ಬೇಡಿಕೆಯ ವಿರುದ್ಧ ರಾಷ್ಟ್ರೀಯ ಹಿಂದೂ ಪ್ರತಿಭಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಎಮ್.ಡಿ.ನಾಯ್ಕ, ಶ್ರೀ ಅನೀಲ ನಾಯ್ಕ, ಸೌ ನವೀತಾ ಕಾಮತ, ಸೌ ರತ್ನಾ ಭಟ್, ಸೌ ಪಾರ್ವತಿ ಭಟ್, ಸೌ ಜಯಲಕ್ಷೀ ಕಲ್ಗಲ್ ಇತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ `ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ ಮತ್ತು ಇತರೆ ಸಮಾನ ವಿಚಾರವುಳ್ಳ ಹಿಂದುತ್ವವಾದಿ ಸಂಘಟನೆಗಳನ್ನು ಗುರಿ ಮಾಡುವ ಷಡ್ಯಂತ್ರ್ಯದ ತನಿಖೆ ನಡೆಸಿ ವಿವರವಾಗಿ ವಿಚಾರಣೆ ಮಾಡಬೇಕು’ ಎನ್ನುವ ಬೇಡಿಕೆಯನ್ನು ಸಲ್ಲಿಸಲಾಯಿತು.
ಈ ಪ್ರತಿಭಟನೆಯಲ್ಲಿ ನಕ್ಸಲವಾದಿಗಳ ಸಮರ್ಥಕರನ್ನು ವಿಚಾರವಂತರು, ಸಾಮಾಜಿಕ ಕಾರ್ಯಕರ್ತರು ಇತ್ಯಾದಿ ಹೇಳುವವರನ್ನು ನಿಷೇಧಿಸಲಾಯಿತು. ಎಲ್ಗಾರ ಪರಿಷತ್ತಿನ ಆಯೋಜಕರು ಮತ್ತು ಸಿ.ಪಿ.ಆಯ್. (ಮಾವೋವಾದಿ) ಈ ನಿಷೇಧಿತ ಸಂಘಟನೆಯ ಸಕ್ರಿಯ ಸದಸ್ಯರಾಗಿರುವ ಸುರೇಂದ್ರ ಗಡಲಿಂಗ, ಶೋಮಾ ಸೇನ, ಮಹೇಶ ರಾವೂತ, ರೋನಾ ವಿಲ್ಸನ್ ಮತ್ತು ಸುಧೀನ ಢವಳೆ ಇವರನ್ನು ಪುಣೆ ಪೊಲೀಸರು ಬಂಧಿಸಿದರು. ಅವರ ತನಿಖೆಯ ಸಂದರ್ಭದಲ್ಲಿ ` ರಾಜೀವ ಗಾಂಧಿಯವರ ಹತ್ಯೆಯಂತೆಯೇ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹತ್ಯೆ ನಡೆಸಲು ಸಂಚು ರೂಪಿಸುವುದು’, `ಸರಕಾರ ಉರುಳಿಸಿ ಯುದ್ಧ ಘೊಷಿಸುವುದು ಇತ್ಯಾದಿ ಅತ್ಯಂತ ಗಂಭೀರ ಮತ್ತು ಅಪಾಯಕಾರಿ ವಿಷಯಗಳು ಬಹಿರಂಗಗೊಂಡವು ಮತ್ತುನಕ್ಸಲವಾದಿಗಳ `ಥಿಂಕ ಟ್ಯಾಂಕ’ ಎಂದು ತಿಳಿಯುವ ವರವರಾ ರಾವ್, ಅರುಣ ಫೆರೀರಾ, ಗೌತಮ ನವಲಖಾ, ವರ್ಣನ ಗೋನ್ಸಾಲವೀಸ ಮತ್ತು ವಕೀಲರಾಗಿರುವ ಸುಧಾ ಭಾರದ್ವಾಜರನ್ನು ಬಂಧಿಸಲಾಯಿತು. ಅವರ ಬಂಧನದ ಬಳಿಕ ಎಡರಂಗದವರು, ಕಾಂಗ್ರೆಸ್‍ನವರು, ತಥಾಕಥಿತ ವಿಚಾರವಂತರು ಮತ್ತು ತಮ್ಮನ್ನು ಸಾಮಾಜಿಕ ಕಾರ್ಯಕರ್ತರೆಂದು ಕರೆಸಿಕೊಳ್ಳುವ ಅನೇಕರು ಇದನ್ನು ನಿಷೇಧಿಸಿದರು. ದೇಶಾದ್ಯಂತ ಅನೇಕ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದರು. ಪತ್ರಿಕಾ ಪರಿಷತ್ತನ್ನು ತೆಗೆದುಕೊಂಡರು ಇಷ್ಟೇ ಅಲ್ಲದೇ, ಸರ್ವೋಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿ, ಅವರು ಬಂಧನಗೊಳ್ಳುವುದನ್ನು ತಪ್ಪಿಸ ಗೃಹಬಂಧನದಲ್ಲಿಡುವ ಆದೇಶ ಪಡೆದರು. ಕೆಲವು ರಾಜಕೀಯ ಮುಖಂಡರೂ ಕೂಡ ಗೃಹಬಂಧನದಲ್ಲಿರುವ ಈ ನಕ್ಸಲವಾದಿಗಳ ಮನೆಗೆ ಹೋಗಿ ಭೇಟಿಯಾದರು. ಹಿಂದೂಗಳಿಗೆ ಒಂದು ನ್ಯಾಯ ಮತ್ತು ನಕ್ಸಲವಾದಿಗಳ ಸಮರ್ಥಕರಿಗೆ ಮತ್ತೊಂದು ನ್ಯಾಯ ಹೀಗೇಕೆ? ದೇಶದ್ರೋಹಿ ನಕ್ಸಲವಾದಿಗಳ ಸಮರ್ಥನೆ ಮಾಡಿರುವ ಕಾರಣ ಇವರೆಲ್ಲರ ಮೇಲೆಯೂ ಕಠಿಣ ಕ್ರಮ ಜರುಗಿಸುವ ಕಾನೂನು ರಚಿಸಬೇಕು ಮತ್ತು `ನಗರವಾಸಿ ನಕ್ಸಲವಾದಿ’ಗಳೊಂದಿಗೆ ದೇಶಾದ್ಯಂತ ನೆಲೆಯೂರಿರುವ ನಕ್ಸಲವಾದಿಗಳನ್ನು ನಾಶಪಡಿಸಲು ಸೈನ್ಯ ಮತ್ತು ಪೊಲೀಸರಿಗೆ ಸರ್ವಾಧಿಕಾರವನ್ನು ನೀಡಬೇಕು ಎನ್ನುವ ಬೇಡಿಕೆಯನ್ನು ಸಹ ಮಾಡಲಾಯಿತು.