ಉ.ಕ : ಆನ್ಲೈನ್ ಔಷಧಿ ಮಾರಾಟ ವ್ಯವಸ್ಥೆ ಜಾರಿ ಖಂಡಿಸಿ ದೇಶದಾದ್ಯಂತ ಹಮ್ಮಿಕೊಂಡ ಔಷಧಿ ಮಾರಾಟ ಮಳಿಗೆ ಬಂದ್‌ಗೆ ಕರೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಔಷಧಿ ಅಂಗಡಿಗಳ ಬಾಗಿಲು ತೆರೆದಿಲ್ಲ. ಆಲ್ ಇಂಡಿಯಾ ಆರ್ಗನೈಸೇಷನ್ ಆಫ್ ಕೆಮಿಸ್ಟ್ ಆ್ಯಂಡ್ ಡ್ರಗ್ಗಿಸ್ಟ್ ಅಸೋಸಿಯೇಷನ್ ನೀಡಿರುವ ಭಾರತ್ ಬಂದ್‌ಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಂಬಲ ವ್ಯಕ್ತವಾಗಿದೆ ಎನ್ನಲಾಗಿದೆ. ಶಿರಸಿ ,ಸಿದ್ದಾಪುರ, ಯಲ್ಲಾಪುರ, ಕುಮಟಾ ,ಹೊನ್ನಾವರ, ಭಟ್ಕಳದಲ್ಲಿ ಔಷಧ ಅಂಗಡಿಗಳು ಮುಚ್ಚಿದ್ದವು ಕಂಡು ಬಂತು.
ಮುಂಜಾನೆಯಿಂದಲೇ ಔಷಧಿ ಅಂಗಡಿಗಳ ಬಾಗಿಲು ಮುಚ್ಚಿವೆ. ಜಿಲ್ಲಾದ್ಯಂತ 350ಕ್ಕೂ ಹೆಚ್ಚು ಔಷಧಿ ಅಂಗಡಿಗಳನ್ನ ಬಂದ್ ಮಾಡುವ ಮೂಲಕ ಬೆಂಬಲ ಸೂಚಿಸಲಾಗಿದೆ.
ಇನ್ನು ಜನೌಷಧಿ ಔಷಧ ಕೇಂದ್ರಗಳು ಹಾಗೂ ಸರ್ಕಾರಿ ಆಸ್ಪತ್ರೆಯ ಔಷಧಿ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ರೋಗಿಗಳಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರಿ ದಾಸ್ತಾನುಗಳಲ್ಲಿ ಹೆಚ್ಚಿನ ಔಷಧಿ ಸಂಗ್ರಹಣೆ ಮಾಡಲಾಗಿದೆ.
ರೋಗಿಗಳಿಗೆ ತೊಂದರೆ ಆಗದಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿ ವಿತರಣೆಗೆ ಸಿದ್ದತೆ ನಡೆದಿದೆ.