ಭಟ್ಕಳ : ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಭಾಷಾ ಸಂಘದ ಸಹಯೋಗದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಉಪನ್ಯಾಸ ನೀಡಿದ ವೈದ್ಯೆ ಡಾ. ಸವಿತಾ ಕಾಮತ್ ಮಾತನಾಡಿ ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದುದು. ಶಿಕ್ಷಕ ಮಕ್ಕಳೊಂದಿಗೆ ವ್ಯವಹರಿಸುವ ಮತ್ತು ಅವರನ್ನು ನಡೆಸಿಕೊಳ್ಳುವ ರೀತಿ ಅವರ ಮನಸಿನ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ಶಿಕ್ಷಕ ಮಕ್ಕಳನ್ನು ಮಮತೆಯಿಂದ ಕಂಡು ಅವರ ಪ್ರತಿಭೆ ಗುರುತಿಸಿ ಅರಳಿಸುವ ಕಾರ್ಯ ನಿರ್ವಹಿಸಿದಾಗ ವಿದ್ಯಾರ್ಥಿಗಳು ಜೀವನದುದ್ದಕ್ಕೂ ಅಂತಹ ಶಿಕ್ಷಕರನ್ನು ಸ್ಮರಿಸುತ್ತಾರೆ ಎಂದು ನುಡಿದರು.

RELATED ARTICLES  ಇಂದು ಮಧ್ಯರಾತ್ರಿಯಿಂದಲೇ ಇಳಿಯಲಿದೆ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಆರ್. ನರಸಿಂಹ ಮೂರ್ತಿ ಮಾತನಾಡಿ ಶಿಕ್ಷಕ ಸಾಮಾಜಿಕ ಪರಿವರ್ತಕ. ಶಿಕ್ಷಕ ವೃತ್ತಿಯಲ್ಲಿ ಬದ್ಧತೆಯಿಂದ ಕೆಲಸ ಮಾಡಿದಾಗ ಮಕ್ಕಳ ಮನಸನ್ನು ಗೆಲ್ಲಬಲ್ಲ. ಬದುಕನ್ನು ಬದಲಿಸಬಲ್ಲ ಎಂದರು. ಕಾರ್ಯಕ್ರವiದ ವೇದಿಕೆಯಲ್ಲಿ ಉಪಸ್ಥಿತರಿದ್ದ ಭಾಷಾ ಸಂಘದ ಅಧ್ಯಕ್ಷ ಗಂಗಾಧರ ನಾಯ್ಕ ಎಲ್ಲರನ್ನು ಸ್ವಾಗತಿಸಿ ಪ್ರಾಸ್ಥಾವಿಕ ನುಡಿಗಳನ್ನಾಡಿ ಇನ್ನೊಬ್ಬರ ಅನುಭವವೂ ಕಲಿಕೆಯೇ. ತರಗತಿಯ ಪಾಠದ ಜೊತೆಯಲ್ಲಿ ಅದರಾಚಿಗಿನ ಅನುಭವವೂ ದೊರಕಬೇಕೆಂಬ ಉದ್ದೇಶದಿಂದ ಭಾಷಾಸಂಘದ ಅಡಿಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
IMG 20180928 WA0043
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ನಾಗರಾಜ ಮಡಿವಾಳ, ಗಜಾನನ ಶಾಸ್ತ್ರೀ, ಸುಧಾ ಎಚ್.ಜೆ., ರಶ್ಮಿ ಏ.ಆರ್.ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿಗಳಾದ ದಿವ್ಯಾ ಸಂಗಡಿಗರು ಪ್ರಾಥಿಸಿದರೆ ಸುಬ್ರಮಣ್ಯ ಮೂರ್ತಿ ನಿರ್ವಹಿಸಿದರೆ ಪೂಜಾ ನಾಯ್ಕ ವಂದಿಸಿದರು.

RELATED ARTICLES  ಪರಿವರ್ತನಾ ಯಾತ್ರೆಯ ಪ್ರಚಾರಕ್ಕೆ ಕಾರನ್ನು ವಿಶೇಷವಾಗಿ ಮಾರ್ಪಡಿಸಿಕೊಂಡ ಸೂರಜ್ ನಾಯ್ಕ ಸೋನಿ.