ಭಟ್ಕಳ : ಯುವಾ ಬ್ರಿಗೇಡ್‌ ಮತ್ತು ಸಹೋದರಿ ನಿವೇದಿತಾ ಪ್ರತಿಷ್ಠಾನ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದ 125ನೇ ವರ್ಷಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ ದಿಗ್ವಿಜಯ ರಥಯಾತ್ರೆ ಅ.1 ಮತ್ತು 2ರಂದು ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಸಂಚರಿಸಲಿದೆ. ಈ ಸಂಬಂಧ ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಲಿದೆ. ಕಾರ್ಯಕರ್ತರು ಭರದಿಂದ ಕಾರ್ಯ ಚಟುವಟಿಕೆ ನಡೆಸುತ್ತಿದ್ದಾರೆ.

ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು 1883ರಲ್ಲಿ ಅಮೆರಿಕದ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಅಂದು ಅವರು ಹಿಂದೂ ಧರ್ಮವನ್ನು ಪ್ರತಿನಿಧಿಸಿ ಚಾರಿತ್ರಿಕ ಭಾಷಣ ಮಾಡಿ, ಜಗತ್ತಿನೆಲ್ಲೆಡೆ ಹಿಂದೂ ಧರ್ಮದ ಮಹತ್ವವನ್ನು ಸಾರಿದ್ದರು. ವಿವೇಕಾನಂದರ ಸಂದೇಶಗಳಿಂದ ಪ್ರಭಾವಿತರಾದ ಸಹೋದರಿ ನಿವೇದಿತಾ ಅವರು ಭಾರತಕ್ಕೆ ಬಂದು ಸೇವಾ ಕಾರ್ಯಗಳಲ್ಲಿ ತೊಡಗಿ ಕೊಂಡರು.

RELATED ARTICLES  ಬ್ಯಾಂಕಿಗೆ ಹೋಗಿ ಬರುತ್ತೇನೆಂದು ಬೈಕಿನಲ್ಲಿ ತೆರಳಿದ ವಿವಾಹಿತ ನಾಪತ್ತೆ: ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ

ವಿವೇಕಾನಂದರ ಚಾರಿತ್ರಿಕ ಭಾಷಣದ 125ನೇ ವರ್ಷಾಚರಣೆಯ ಜತೆಯಲ್ಲಿ ಸಹೋದರಿ ನಿವೇದಿತಾರನ್ನು ಕೂಡ ನೆನಪಿಸುವ ಕೆಲಸ ಮಾಡುವ ನಿಟ್ಟಿನಲ್ಲಿ ವಿಶೇಷವಾಗಿ ರಥಯಾತ್ರೆಯಲ್ಲಿ ವಿವೇಕಾನಂದರು, ಸಹೋದರಿ ನಿವೇದಿತಾ ಅವರ ಪ್ರತಿಮೆಗಳನ್ನು ಇರಿಸಲಾಗಿದೆ.

RELATED ARTICLES  ರಾಮಚಂದ್ರಾಪುರ ಮಠಕ್ಕೆ ಬ್ಲ್ಯಾಕ್‍ಮೇಲ್: ಆರೋಪ ಕೈಬಿಡುವಂತೆ ಕೋರಿದ್ದ ಅರ್ಜಿ ವಜಾ

ಅ.1ರಂದು ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಈ ಯಾತ್ರೆ ಆರಂಭಗೊಂಡು ಹೊನ್ನಾವರ, ಕುಮಟಾ ಭಾಗಗಳಲ್ಲಿ ಸಂಚರಿಸಲಿದೆ. ಅಲ್ಲಲ್ಲಿ ಸೈಕಲ್, ಬೈಕ್ ರ್ಯಾಲಿಗಳು, ಬೃಹತ್‌ ಮೆರವಣಿಗೆಗಳು ನಡೆಯಲಿದೆ.

ಚಕ್ರವರ್ತಿ ಸೂಲಿಬೆಲೆಯವರಿಂದ ದಿಕ್ಸೂಚಿ ಭಾಷಣ ಇರಲಿದೆ. ಅ.2ರಂದು ಶಿರಸಿಯಲ್ಲಿ ಕಾರ್ಯಕ್ರಮ‌ ಸಂಪನ್ನಗೊಳ್ಳಲಿದೆ.