ಕಾರವಾರ: ಕುಮಟಾ-ತಡಸ ರಸ್ತೆಯ ಅಗಲೀಕರಣದ ಸಂದರ್ಭದಲ್ಲಿ ಕುಮಟಾ ತಾಲೂಕಿನ ಅಳಕೋಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರ ಆಸ್ತಿ ಪಾಸ್ತಿ ರಕ್ಷಿಸುವಂತೆ ಅಳಕೋಡ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಆಗ್ರಹಿಸಿದ್ದಾರೆ.ಕುಮಟಾ-ತಡಸ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆರಿಸಲಾಗುತ್ತಿದೆ. ಈಗ ಇರುವ ರಸ್ತೆಯನ್ನೆ 11 ಮೀಟರ್ ಗಳಿಗೆ ಳಿಗೆ ಅಗಲೀಕರಣಗೊಳಿಸಲಾಗುತ್ತಿದೆ.

ಆದರೆ ಕತಗಾಲ ಬಳಿ ರಸ್ತೆ ಅತ್ಯಂತ ತಿರುವಿನಿಂದ ಕೂಡಿದ್ದು ಒಂದು ಕಡೆ ಸಾರ್ವಜನಿಕ ಬಸ್ ತಂದುದಾಣ, ಪೋಲಿಸ್ ಠಾಣೆ, ಅರಣ್ಯ ತನಿಖಾ ಠಾಣೆ ಹಾಗೂ ಅಂಗಡಿಗಳಿದೆ. ಇನ್ನೊಂದು ಕಡೆ ಲೋಕೋಪಯೋಗಿ ಇಲಾಖೆಗೆ ಸೇರಿದ ಖಾಲಿ ಜಾಗವಿದೆ. ಸುಮಾರು 18 ಹಳ್ಳಿಗಳ ಗ್ರಾಮಸ್ಥರಿಗೆ ಕತಗಾಲ ಕೇಂದ್ರ ಬಿಂದುವಾಗಿದೆ. ಇದು ಪ್ರತಿ ನಿತ್ಯ ಸಾವಿರಾರು ಗ್ರಾಮಸ್ಥರು ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಓಡಾಡುವ ಜನನಿಬಿಡ ಕೇಂದ್ರವಾಗಿದೆ. ಹಾಗೂ ಈಗೀನ ರಾಜ್ಯ ಹೆದ್ದಾರಿಯಲ್ಲಿ ದಿನ ನಿತ್ಯ ಸುಮಾರು ಸಾವಿರಾರು ವಾಹನಗಳ ಸಂಚಾರವಿದೆ.

RELATED ARTICLES  ಮೂರು ಕೃಷಿ ಕಾನೂನು ಹಿಂದಕ್ಕೆ ಪಡೆದ ಕೇಂದ್ರ ಸರಕಾರ : ಸಿಹಿ ಹಂಚಿ ಸಂಭ್ರಮಾಚರಣೆ.

ಹೀಗಾಗಿ ಹೆದ್ದಾರಿ ವಿಸ್ತರಣೆಯ ಸಂದರ್ಭದಲ್ಲಿ ಸಾರ್ವಜನಿಕರ ತಂಗುದಾಣವಿರುವ ಸ್ಥಳವನ್ನು ಬಳಸದೇ ಅದರ ಎದುರುಗಡೆ ಇರುವ ಲೋಕೋಪಯೋಗಿ ಇಲಾಖೆಯ ಖಾಲಿ ಸ್ಥಳವನ್ನು ಬಳಸಿಕೊಂಡರೇ ರಸ್ತೆಯನ್ನು ನೇರಗೊಳಿಸಲು ಸಹ ಸಾಧ್ಯವಿದೆ. ಈ ಮೂಲಕ ಅಪಘಾತ, ಅವಘಡಗಳನ್ನು ಸಹ ನಿಯಂತ್ರಿಸಬಹುದು ಎಂದು ಅವರು ಒತ್ತಾಯಿಸಿದ್ದಾರೆ.

RELATED ARTICLES  ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ಶಿಕ್ಷಕರಿಗೆ ಸನ್ಮಾನ

ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಅಳಕೋಡ ಗ್ರಾಪಂ ಅಧ್ಯಕ್ಷ ಕೃಷ್ಣಾನಂದ ವೆರ್ಣೇಕರ, ಉಪಾಧ್ಯಕ್ಷೆ ಲಲಿತಾ ಲೋಪಿಸ್, ಹಾಗೂ ಸದಸ್ಯರು ಮತ್ತು ಸಾರ್ವಜನಿಕರು ಇದ್ದರು.