ಭಟ್ಕಳ : ಸ್ವಚ್ಛ ಭಾರತ ಆಂದೋಲನದ ಪ್ರಮುಖ ಹಂತವಾಗಿ ಕಾಣಿಸಿಕೊಂಡಿರುವ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ ದೇಶದೆಲ್ಲೆಡೆ ಇಂದು
ಪ್ರಾರಂಭಗೊಂಡಿದ್ದು ಭಟ್ಕಳದಲ್ಲಿ ಶಾಸಕ ಸುನೀಲ್ ನಾಯ್ಕ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುವ ಮೂಲಕ ಎಲ್ಲರ ಗಮನ ಸೆಳೆದರು .

ಸ್ವಚ್ಛತೆಗೆ ಪ್ರಥಮ ಆದ್ಯತೆಯನ್ನು ನೀಡುವುದರ ಮೂಲಕ ದೇಶವನ್ನು ಸ್ವಚ್ಛ ಸುಂದರವಾಗಿಸುವ ಕನಸು ಹೊತ್ತ ಮೋದಿಜಿ ಅವರ ಕರೆಗೆ ದೇಶದ ಪ್ರತಿಯೊಬ್ಬರೂ ಸ್ಪಂದಿಸಬೇಕೆಂದು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು .

RELATED ARTICLES  ಕುಮಟಾ : ಖೇಲ್ ಕಬಡ್ಡಿ ಕ್ರೀಡಾಕೂಟಕ್ಕೆ ಚಾಲನೆ

ಭಟ್ಕಳ ವೃತ್ತದ ಆಸುಪಾಸಿನಲ್ಲಿ ಸ್ವತಃ ಶಾಸಕರೇ ಸ್ವಚ್ಛತೆಯಲ್ಲಿ ತೊಡಗಿಕೊಳ್ಳುವುದರ ಮೂಲಕ ಎಲ್ಲ ಸಾರ್ವಜನಿಕರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುವಂತೆ ಕರೆ ನೀಡಿದರು .

ಸ್ವತಃ ಶಾಸಕರೇ ಗುದ್ದಲಿ ಹಿಡಿದು ಕೆಲಸ ಮಾಡುವ ಮೂಲಕ ಹಾಗೂ ಕಸದ ಬುಟ್ಟಿಗಳನ್ನು ಹೊರುವ ಮೂಲಕ ಜನಸಾಮಾನ್ಯರಂತೆ ಕಾರ್ಯದಲ್ಲಿ ತೊಡಗಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾದರು .

RELATED ARTICLES  ನೆಹರೂನಗರ ಶಿಕ್ಷಕಿ ಶೈಲಾ ಗುನಗಿಗೆ ಜ್ಞಾನ ಜ್ಯೋತಿ ಪ್ರಶಸ್ತಿ

ಇಂದಿನಿಂದ ಹದಿನೈದು ದಿನಗಳ ಕಾಲ ಎಲ್ಲಾ ತಾಲ್ಲೂಕು ಆಡಳಿತದ ವತಿಯಿಂದ ಕೇಂದ್ರ ಸರ್ಕಾರದ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ ನಡೆಯಲಿದೆ.