ಭಟ್ಕಳ : ತಾಲೂಕಿನ ಪ್ರಸಿದ್ಧ ಪರಶುರಾಮ ಸ್ಪೋರ್ಟ್ಸ್ ಕ್ಲಬ್ ಇವರು ತಮ್ಮ ಹಳೆಯ ಕಬ್ಬಡ್ಡಿ ಆಟಗಾರ ಹಾಗೂ ಭಟ್ಕಳ ಮತ್ತು ಹೊನ್ನಾವರ ಶಾಸಕರಾದ ಸುನಿಲ್ ನಾಯ್ಕ ಅವರಿಗೆ ಸನ್ಮಾನ ಮಾಡಿದರು.

ಇಂದು ಮೂಡಭಟ್ಕಳ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ದಲ್ಲಿ ಪರಶುರಾಮ ಸ್ಪೋರ್ಟ್ಸ್ ಕ್ಲಬ್ ನೂರಾರು
ಸದಸ್ಯರು ಸೇರಿ ಭಟ್ಕಳ ಮತ್ತು ಹೊನ್ನಾವರ ಶಾಸಕರಾದ ಸುನಿಲ್ ನಾಯ್ಕ ಅವರಿಗೆ ಸನ್ಮಾನಿಸಿ ಗೌರವಿಸಿದರು.

RELATED ARTICLES  "ಗೋಕರ್ಣ ಗೌರವ" ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀ ಶ್ರೀ ಕುಮಾರ ಸ್ವಾಮೀಜಿ

ತಮ್ಮ ನೆಚ್ಚಿನ ಹಳೆ ಆಟಗಾರ ಜನಮೆಚ್ಚುಗೆ ಶಾಸಕರು ಆಗಿದ್ದು ಇದು ನಮ್ಮ ಹೆಮ್ಮೆಯ ವಿಷಯವಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ಸಂತೋಷ ವ್ಯಕ್ತಪಡಿಸಿದರು.

RELATED ARTICLES  ಗೋಕರ್ಣದಲ್ಲಿ ಶಿವಗಂಗಾ ವಿವಾಹ ನಿಶ್ಚಿತಾರ್ಥ ತಾಂಬೂಲೋತ್ಸವ ಸಂಪನ್ನ

ಶಾಸಕ ಸುನಿಲ್ ನಾಯ್ಕ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡರು. ಗೆಳೆಯರು ನೀಡಿದ ಈ ಸನ್ಮಾನವನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿ ಧನ್ಯವಾದ ಸಮರ್ಪಿಸಿದರು.