ಕುಮಟಾ : ತಾಲ್ಲೂಕಿನ ಹೆಗಡೆಯಲ್ಲಿ ಶಾಸಕರಿಗೆ ಅಭಿನಂದನೆ ಹಾಗೂ ಸಿಲಿಂಡರ್ ವಿತರಣೆ ಕಾರ್ಯಕ್ರಮ ರವಿವಾರ ನಡೆಯಿತು.
ಹೆಗಡೆಯಲ್ಲಿ ಜನಪ್ರಿಯ ಶಾಸಕ ದಿನಕರ ಶೆಟ್ಟಿ ಯವರಿಗೆ ನಾಗರೀಕ ಸನ್ಮಾನ ಹಾಗೂ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ 49 ಉಚಿತ ಸಿಲಿಂಡರ್ ಪರಿಕರ ವಿತರಣೆ ರವಿವಾರ ಶಾಂತಿಕಾಂಬಾ ಪ್ರೌಢಶಾಲೆ ಸಭಾಂಗಣದಲ್ಲಿ ರವಿವಾರ ನಡೆಯಿತು ಜೊತೆಗೆ 4 ಬಾರಿ ಕುಮಟಾ ಎಪಿಎಂಸಿ ಅಧ್ಯಕ್ಷರಾಗಿ ಎರಡು ಬಾರಿ ಕುಮಟಾ ಅರ್ಬನ್ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾದ ಹೆಗಡೆ ಊರಿನ ಪ್ರಮುಖರಾದ ರಾಮನಾಥ(ಧೀರೂ ) ಶಾನಭಾಗ ರವರನ್ನೂ ಕೂಡ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ ಮೋದಿಯವರು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಇಂದು ವಿತರಿಸಿದ ಉಚಿತ ಸಿಲಿಂಡರ್ ಮಹಿಳೆಯರಿಗಾಗಿ ಮಾಡಿದ ಯೋಜನೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಯಾರಿಗೆ ಬರಲಿಲ್ಲವೊ ಅವರಿಗೂ ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ ಎಂದರು.. ಇನ್ನು ನನ್ನನ್ನು ಸನ್ಮಾನಿಸಿದ್ದೀರಿ ನನಗೂ ಖುಷಿ ತಂದಿದೆ ಎಂದರು..
ಧೀರೂ ಶಾನಭಾಗ ಮಾತನಾಡಿ ನನಗೆ ಸನ್ಮಾನ ಶಾಸಕರ ಜೊತೆಯಲ್ಲೇ ಆಗಬೇಕು ಅಂತ ಇತ್ತೇನೊ ಇಂದು ಆಗಿದೆ ಸನ್ಮಾನ ಮಾಡಿಸಿಕೊಂಡು ಜೊತೆಗೆ ಅಭಿವೃದ್ಧಿ ಕಡೆಗೂ ಗಮನ ಹರಿಸಬೇಕು.. ಊರಿನಲ್ಲಿ ನೀರಿನ ಸಮಸ್ಯೆ, ಹೆಗಡೆ ಮುಖ್ಯ ರಸ್ತೆಯಲ್ಲಿ ರೈಲ್ವೆ ಗೇಟ್ ಸಮಸ್ಯೆ ಹೀಗೆ ಬಹಳ ಸಮಸ್ಯೆ ಇದೆ ಶಾಸಕರು ಅದರ ಬಗ್ಗೆ ಗಮನಹರಿಸಬೇಕು ನಾವೂ ಕೂಡ ಕೈ ಜೊಡಿಸುತ್ತೇವೆ ಎಂದರು.ಹೆಗಡೆ ಊರಿನ ನಾಡದೋಣಿಯವರು ಮನವಿ ಪತ್ರ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಹೆಗಡೆ ಗ್ರಾಮ ಪಂಚಾಯತ ಅಧ್ಯಕ್ಷ ಮಂಜುನಾಥ ಪಟಗಾರ ಇದೊಂದು ಉತ್ತಮ ಕಾರ್ಯಕ್ರಮ ಗ್ಯಾಸ್ ಸಿಲಿಂಡರ್ ವಿತರಣೆ ಮಾಡಲಾಗಿದೆ ಮಹಿಳೆಯರು ಸರಿಯಾಗಿ ಬಳಸಿ ಅದರ ಪ್ರಯೋಜನ ಪಡೆದುಕೊಳ್ಳಿ ಎಂದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷೆ ನಾಗವೇಣಿ ಹೆಗಡೆ, ಶಾಲೆಯ ಚೇರಮನ್ ಜಿ ಎಸ್ ಗುನಗ, ಎಮ್ ಜಿ ಭಟ್ಟ್, ಗೋವಿಂದ ಪಟಗಾರ, ಸದಸ್ಯ ಪಿ ಡಿ ನಾಯ್ಕ, ಬಿ ಡಿ ಪಟಗಾರ, ಸುಧಾ ಗೌಡ, ಸುರೇಶ ಪಟಗಾರ ಉಪಸ್ಥಿತರಿದ್ದರು.. ರವೀಂದ್ರ ಭಟ್ಟ ಸೂರಿ ನಿರೂಪಣೆ ಮಾಡಿದರು, ಪಿ ಡಿ ನಾಯ್ಕ ಸ್ವಾಗತಿಸಿದರು, ಸುಧಾ ಗೌಡ ವಂದಿಸಿದರು.
ಕಾರ್ಯಕ್ರಮದಲ್ಲಿ ವಿನೋದ ಪ್ರಭು, ಎನ್ ವಿ ನಾಯ್ಕ, ಕೆ ಎಮ್ ಮುಕ್ರಿ, ಉದಯ ಕಾಶಿಭಟ್ಟ್, ಮಾರಪ್ಪ ಪಟಗಾರ, ರಾಮಚಂದ್ರ ಪಟಗಾರ, ಗುಂಡು ಮಡಿವಾಳ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು…