ಕುಮಟಾ :ತಾಲೂಕಿನ ಕೊಡ್ಕಣಿ ಸಾರ್ವಜನಿಕ ಗಣೆಶೋತ್ಸವ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಟ್ಟು 43 ಫಲಾನುಭವಿಗಳಿಗೆ ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕರಾದ ಶ್ರೀ ದಿನಕರ್ ಕೆ ಶೆಟ್ಟಿ ಯವರು ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಉಚಿತ ಅಡಿಗೆ ಅನಿಲ ಸಿಲೆಂಡರ್ ಹಾಗೂ ಇತರ ಪರಿಕರಗಳನ್ನು ವಿತರಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶವನ್ನು ಹೊಗೆಮುಕ್ತ ಗ್ರಾಮವನ್ನಾಗಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಂದಾಗಿರುವುದು ಶ್ಲಾಘನೀಯ ಎಂದು ಶಾಸಕರು ಅಭಿವೃದ್ಧಿಪಟ್ಟರು.

ದೇಶದ ಮಹಿಳೆಯರ ಆರೋಗ್ಯವನ್ನು ಮನಗಂಡು ಪ್ರಧಾನಿ ಮೋದಿಯವರು ಉಚಿತ ಗ್ಯಾಂಸ್‌ ಸಂಪರ್ಕ ನೀಡುತ್ತಿರುವುದು ಉತ್ತಮ ಬೆಳವಣಿಗೆæ. ಗ್ಯಾಸ್‌ ಸಂಪರ್ಕದ ಜತೆಗೆ ವಿಮೆಯನ್ನು ಕೇಂದ್ರ ಸರಕಾರವೇ ಭರಿಸುತ್ತಿರುವುದು ದೇಶದ ಇತಿಹಾಸದಲ್ಲಿ ಪ್ರಥಮ. ಯಾವುದೇ ಪ್ರಧಾನಮಂತ್ರಿಗಳು ಮಾಡದ ಅಪರೂಪದ ಯೋಜನೆಯನ್ನು ನರೇಂದ್ರ ಮೋದಿಯರು ಮಾಡಿದ್ದಾರೆ ಎಂದು ಹೇಳಿದರು.

RELATED ARTICLES  ಯುವ ಪ್ರೇಮಿಗಳೊಂದಿಗೆ ಬಂದಿದ್ದ ವಿದೇಶಿಗ ವಸತಿಗೃಹದಲ್ಲಿಯೇ ಸಾವು.

ಅದೂ ಅಲ್ಲದೇ, ಪ್ರಸ್ತುತ ಬಡವರಿಗೆ ಉಚಿತ ವಿದ್ಯುತ್‌ ಯೋಜನೆಗೆ ಹಸಿರು ನಿಶಾನೆ ತೋರಿರುವುದು ಬಡವರ ಪರ ಕಾಳಜಿಯನ್ನು ತೋರಿಸುತ್ತದೆ ಎಂದರು.

ಎರಡು ವರ್ಷಗಳ ಹಿಂದೆ ಗಾಂಧಿ ಜಯಂತಿಯಂದು ಆರಂಭವಾದ ಸ್ವಚ್ಛಭಾರತ್‌ ಅಭಿಯಾನದಿಂದ ದೇಶದಾದ್ಯಂತ ಜಾಗೃತಿ ಮೂಡಿದೆ. ಮಹಿಳೆಯರ ಆರೋಗ್ಯ ಹಾಗೂ ಪರಿಸರ ಹಾನಿಯನ್ನು ತಡೆಗಟ್ಟುವ ದೃಷ್ಟಿಯಿಂದ ಪ್ರಧಾನಮಂತ್ರಿಗಳು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿರುವುದು ಅಚ್ಛೇದಿನ್‌ ಅಲ್ಲವೇ ಅಲ್ಲವೇ.

RELATED ARTICLES  ಲೋಕಕಲ್ಯಾಣಕ್ಕಾಗಿ ಆಡಳಿತವರ್ಗಕ್ಕೆ ಇಚ್ಛಾಶಕ್ತಿ ಅಗತ್ಯ: ರಾಘವೇಶ್ವರ ಶ್ರೀ

ಕೋಡ್ಕಣಿ ಭಾಗದ ಅತೀ ಬಡ ಜನರ ಅಭಿವೃದ್ಧಿಗೆ ಸದಾ ಅಗತ್ಯ ಕ್ರಮ‌ ಕೈಗೊಳ್ಳುವ ಮೂಲಕ ಅತ್ಯುತ್ತಮ ಮನಸ್ಸಿನ ಕೋಡ್ಕಣಿಯ ಜನತೆಗೆ ಸೇವೆ ಮಾಡುವುದಾಗಿ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕೊಡ್ಕಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮಿತ್ರಾ ನಾಯ್ಕ , ಶ್ರೀ ಸುನಿಲ್ ನಾಯ್ಕ, ಶ್ರೀ ಅಣ್ಣಪ್ಪ ನಾಯ್ಕ. ಶ್ರೀ ಮಾದೇವ ಪಟಗಾರ,ಶ್ರೀ ಉಲ್ಲಾಸ ಜಿ ನಾಯ್ಕ, ಶ್ರೀ ಪಿ.ಪಿ.ನಾಯ್ಕ, ಶ್ರೀ ಗೌರಿಶ್ ಗುನಗಾ ಹಾಗೂ ಊರ ಗ್ರಾಮಸ್ತರು ಉಪಸ್ಥಿತರಿದ್ದರು.