ಶಿರಸಿ: ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಲ್ಲಿ ಪ್ರಸಾರವಾಗುವ ನೇರ ಫೋನ್– ಇನ್ ಕಾರ್ಯಕ್ರಮದಲ್ಲಿ ಇಂದು ರಾತ್ರಿ 7.45ರಿಂದ 8.42ರ ವರೆಗೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರು ಭಾಗವಹಿಸಿ ಕೇಳುಗರ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಲಿದ್ದಾರೆ.
ಅನಂತಕುಮಾರ ಹೆಗಡೆಯವರು ಕೇಂದ್ರ ಸರಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆಯ ರಾಜ್ಯ ಸಚಿವರಾಗಿದ್ದು, ಅವರ ಖಾತೆಗೆ ಸಂಬಂಧಪಟ್ಟ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಆಕಾಶವಾಣಿ ಬೆಂಗಳೂರು ಕೇಂದ್ರದಿಂದ ಪ್ರಸಾರವಾಗುವ ಫೋನ್-ಇನ್ ಕಾರ್ಯಕ್ರಮವನ್ನು ರಾಜ್ಯದ ಎಲ್ಲ ಕೇಂದ್ರಗಳೂ ಸಹಪ್ರಸಾರ ಮಾಡಲಿವೆ.
ಪ್ರಶ್ನೆ ಕೇಳಲು (080) 22370477, 22370488 ಹಾಗೂ 22370499ಕ್ಕೆ ಸಂಪರ್ಕಿಸಬಹುದು. ಕರ್ನಾಟಕದ ಎಲ್ಲ ಬಾನುಲಿ ಕೇಂದ್ರಗಳಿಂದ ಏಕ ಕಾಲಕ್ಕೆ ಪ್ರಸಾರವಾಗುವ ಈ ಫೋನ್-ಇನ್ ಕಾರ್ಯಕ್ರಮವನ್ನು http://www.airbengaluru.com primary 612kz ನಲ್ಲಿ ಜಗತ್ತಿನಾದ್ಯಂತ ಕೇಳಬಹುದು.
ಕೌಶಲ್ಯಾಭಿವೃದ್ಧಿ ಖಾತೆಯ ಚಟುವಟಿಕೆಗಳು, ಯೋಜನೆಗಳು, ಕಾರ್ಯಶೈಲಿ, ಉದ್ಯೋಗ ಸೃಷ್ಟಿ ಮತ್ತು ಸಾರ್ವಜನಿಕ ಸಹಭಾಗಿತ್ವ ಮುಂತಾದ ವಿಷಯಗಳ ಕುರಿತು ಪ್ರಶ್ನೆ ಕೇಳಬಹುದು. ಪಕ್ಷ, ರಾಜಕೀಯದ ಪ್ರಶ್ನೆಗಳಿಗೆ ಇಲ್ಲಿ ಅವಕಾಶವಿಲ್ಲ.