ಇಂಡೋನೇಷ್ಯಾ: ಸುಲಾವೇಸಿಯಲ್ಲಿ ಶುಕ್ರವಾರ ಸಂಭವಿಸಿದ್ದ ಭೀಕರ ಸುನಾಮಿ -ಭೂಕಂಪದಲ್ಲಿ ಸಾವಿಗೀಡಾದವರ ಸಂಖ್ಯೆ ಸುಮಾರು 1200 ದಾಟಿದೆ ಎಂದು ತಿಳಿದುಬಂದಿದೆ.

ಕಳೆದ ಎರಡು ದಿನದ ಹಿಂದಷ್ಟೇ 400 ಸನಿಹದಲ್ಲಿದ್ದ ಸಾವಿನ ಸಂಖ್ಯೆ ರವಿವಾರಕ್ಕೆ ಮೂರು ಪಟ್ಟಾಗಿರುವುದು ಸುನಾಮಿಯ ಭೀಕರತೆಯನ್ನು ಬಿಚ್ಚಿಟ್ಟಿದೆ. ಅಲ್ಲದೇ ಇದರ ನಡುವೆಯೇ, ಇಂಡೋನೇಷ್ಯಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರರಾದ ಸುಟೊಪೊ ಪುವೊì ನುಗ್ರೊಹೊ ಅವರು, ಸಾವಿನ ಸಂಖ್ಯೆ ಇನ್ನಷ್ಟು ಏರುವ ಸಂಭವವಿದ್ದು, ಅನೇಕ ಶವಗಳನ್ನು ರವಿವಾರದಿಂದಲೇ ಸಾಮೂಹಿಕವಾಗಿ ಅಂತ್ಯಸಂಸ್ಕಾರ ನಡೆಸಲು ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.

RELATED ARTICLES  ಶಿಕಾರಿಪುರದಲ್ಲಿ ತೀವ್ರ ಸಂಚಲನ ಮೂಡಿಸಿದ ನರಬಲಿ ಪ್ರಕರಣ.!

ಮೋದಿ ಸಂತಾಪ: ಇಂಡೋನೇಷ್ಯಾದ ಈ ಭೀಕರ ಘಟನೆಗೆ ಮಿಡಿದಿರುವ ಪ್ರಧಾನಿ ನರೇಂದ್ರ ಮೋದಿ, ಘಟನೆಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು, ಭಾರತವು ಇಂಡೋನೇಷ್ಯಾಕ್ಕೆ ಬೇಕಾದ ಅಗತ್ಯ ಸಹಾಯವನ್ನು ನೀಡಲಿದೆ ಎಂದು ಘೋಷಿಸಿದ್ದಾರೆ.
ಎಂದು ತಿಳಿದುಬಂದಿದೆ.

RELATED ARTICLES  ಕೊರೋನಾ ಬಗ್ಗೆ ಜನತೆಯ ಅಸಡ್ಡೆ ಸರಿಯಲ್ಲ : ನಮ್ಮವರನ್ನು ರಕ್ಷಿಸುವ ಜವಾಬ್ದಾರಿ ನಮ್ಮದೇ ಅಲ್ಲವೇ?