ಹೊನ್ನಾವರ: ಸೇಂಟ್ ಥೊಮಸ್ ಪ್ರೌಢಶಾಲೆ ವಿದ್ಯಾರ್ಥಿಗಳು ಹೊನ್ನಾವರದ ಸೇಂಟ್ ಆಂಥೋನಿ ಪ್ರೌಢಶಾಲಾ ಮೈದಾನದಲ್ಲಿ ನಡೆದ ತಾಲೂಕಾ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಹೆಚ್ಚು ಸ್ಪರ್ಧೆಗಳಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕಾಜಲ್ ಭಟ್ 100 ಮೀ, 400 ಮೀ, ಹಾಗೂ ಹರ್ಡಲ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ವಿರಾಗೃಣ ಪ್ರಶಸ್ತಿಗೆ ಭಾಜನಳಾದರೆ ನವ್ಯ ಮೇಸ್ತ ನಡಿಗೆ ಯಲ್ಲಿ ದ್ವಿತೀಯ ಸ್ಥಾನ , ಶಿವಮಣ 400 ಮೀ ಪ್ರಥಮ ಸ್ಥಾನ ಪಡೆದರೆ ಹುಡುಗಿಯರ ರೀಲೆಯಲ್ಲಿ ಸ್ವಪ್ನ, ಆಶೀತಾ , ನಾಗವಿ ,ಕಾಜಲ್ ತಂಡ ಪ್ರಥಮ ಸ್ಥಾನ ಪಡೆದುದಲ್ಲದೇ ಖೋ-ಖೋ ಆಟದಲ್ಲೂ ಕೂಡಾ ಜಿಲ್ಲಾಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ. ಇವರ ಸಾಧನೆಗೆ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ. ರಾಮಚಂದ್ರ ನಾಯ್ಕ ಹಾಗೂ ಶ್ರೀಮತಿ ಎ.ಸಿ.ಅನ್ನಮ್ಮ ಇವರಿಗೂ ಶಾಲಾ ಮುಖ್ಯ ಶಿಕ್ಷಕರು, ಆಡಳಿತ ಮಂಡಳಿ ಅಭಿನಂದಿಸಿದೆ.

RELATED ARTICLES  ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ದ್ವೇಷ ಹುಟ್ಟಿಸುವ ಸಂದೇಶ ರವಾನೆ: ದೂರು ದಾಖಲು