ಕುಮಟಾ: ತಾಲೂಕಿನ ಹೆಗಡೆ ಅಂಬಿಗರ ಕೇರಿಯಲ್ಲಿ ಅಗ್ನಿ ಅವಗಡ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಮನೆ ಭಸ್ಮ ವಾದ ಘಟನೆ ಇದೀಗ ವರದಿಯಾಗಿದೆ.
ಹೆಗಡೆಯ ಮಾದೇವ ಅಂಬಿಗ ಎನ್ನುವರ ಮನೆಗೆ ಬೆಂಕಿ ತಗುಲದಿ ಪರಿಣಾಮ ಮನೆ ಸಂಪೂರ್ಣ ಭಸ್ಮ ವಾಗಿದೆ ಎನ್ನಲಾಗಿದೆ. ಅಕ್ಕ ಪಕ್ಕದವರ ಸಹಾಯದಿಂದ ಬೆಂಕಿ ನಂದಿಸಲಾಗಿದೆಯಂತೆ.
ಮನೆಯಲ್ಲಿ ಹೇಗೆ ಬೆಂಕಿ ಕಾಣಿಸಿಕೊಂಡಿದ್ದು ಎನ್ನುವುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ ಆದರೆ ಕುಮಟಾ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಕಿಗೆ ಆಹುತಿಯಾಗಿ ಮನೆ ಎಪ್ಪತ್ತೈದು ಪ್ರತಿಷತ ಸುಟ್ಟು ಹೋಗಿದ್ದು ಮನೆಯವರು ದಾರಿ ಕಾಣದೆ ಕಂಗಾಲಾಗಿದ್ದಾರೆ . ಮನೆಯಲ್ಲಿ ನಡೆದ ಅಪಘಾತವಾದರೂ ಸಹ ಯಾವುದೇ ರೀತಿಯ ಪ್ರಾಣಹಾನಿ ವರದಿಯಾಗಿಲ್ಲ .
ಮನೆ ಸಂಪೂರ್ಣ ಭಸ್ಮವಾದ ಕಾರಣ ಮನೆಯವರು ಮುಂದೇನು ಎಂದು ಚಿಂತಿಸುತ್ತಿದ್ದಾರೆ.ಆಡಳಿತ ವರ್ಗದವರು ಘಟನೆಯ ಸ್ಥಳದಲ್ಲಿ ಹಾಜರಿದ್ದು ಮಾಹಿತಿ ಕಲೆ ಹಾಕುತ್ತಿದ್ದಾರೆ . ಮನೆಯಲ್ಲಿ ಹೊತ್ತಿಸಿದ ಬೆಂಕಿಯೇ ಈ ಘಟನೆಗೆ ಕಾರಣವೋ ಅಥವಾ ವಿದ್ಯುತ್ ಅವಘಡವೋ ಎಂಬ ಬಗ್ಗೆ ಅಧಿಕೃತ ಮಾಹಿತಿ ಹೊರ ಬರಬೇಕಾಗಿದೆ.