ಕುಮಟಾ : ಸಾಮಾಜಿಕ ಸಂಬಂಧಗಳ ಸುಧಾರಣೆ,ಸಂಸ್ಕ್ರತಿ ಪರಂಪರೆಗಳ ರಕ್ಷಣೆ, ಪರಿಸರ ಸ್ವಚ್ಛತೆಯ ಅರಿವು, ಅಬಾಲವೃಧ್ದರಾದಿಯಾಗಿ, ಉಪಯುಕ್ತವಾಗುವ ಸಮಾಜಮುಖಿ ಕಾರ್ಯಕ್ರಮಗಳ ಮುಖಾಂತರ ಈಗಾಗಲೇ ಕುಮಟಾ ಪಟ್ಟಣದಲ್ಲಿ ಗುರುತಿಸಿಕೊಂಡಿರುವ ವಿವೇಕನಗರ ವಿಕಾಸ ಸಂಘವು ಭವಿಷ್ಯದ ದಿನಗಳಲ್ಲಿ ಕೂಡ ಹತ್ತು ಹಲವು ಸೃಜನಶೀಲ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅನುಕೂಲವಾಗುವಂತೆ ದಿನಾಂಕ 7 ಅಕ್ಟೋಬರ್ 2018 ರವಿವಾರ ಸಂಜೆ ೪ ಗಂಟೆಯಿಂದ ಸಂಘದ ಸೇವಾ ಚಟುವಟಿಕೆಗಳ ಸಹಾಯಾರ್ಥ ಹವ್ಯಕ ಸಭಾಭವನ ಮೂರೂರು ರಸ್ತೆ ಕುಮಟಾ ಇಲ್ಲಿ ‘ಭೀಷ್ಮ ವಿಜಯ ‘ ಎಂಬ ಪೌರಾಣಿಕ ಯಕ್ಷಗಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ.
ಹಿಮ್ಮೇಳದಲ್ಲಿರಲಿರುವ ಕಲಾವಿದರು
ಭಾಗವತರಾಗಿ ಶ್ರೀ ಕೇಶವ ಹೆಗಡೆ ಕೊಳಗಿ, ಶ್ರೀ ಸರ್ವೇಶ್ವರ ಹೆಗಡೆ ಮೂರೂರು. ಮದ್ದಳೆ ಶ್ರೀ ಶಂಕರ ಭಾಗ್ವತ ಯಲ್ಲಾಪುರ, ಚಂಡೆಯಲ್ಲಿ ಶ್ರೀ ಗಣೇಶ ಗಾಂವಕರ ಯಲ್ಲಾಪುರ ರವರು .
ಮುಮ್ಮೇಳದಲ್ಲಿ ಪಾತ್ರ ನಿರ್ವಹಿಸುವವರು,
ಶ್ರೀ ಅಶೋಕ ಭಟ್ ಉಜಿರೆ – ಭೀಷ್ಮ,
ಶ್ರೀ ವಿದ್ಯಾಧರ ಜಲವಳ್ಳಿ – ಸಾಲ್ವನಾಗಿ
ಶ್ರೀ ಉಮಾಕಾಂತ ಭಟ್ಟ ಕೆರೆಕೈ -ಪರುಶುರಾಮನಾಗಿ
ಪ್ರೊ. ಪ್ರದೀಪ ಸಾಮಗ ಬೆಂಗಳೂರು- ಅಂಬೆಯಾಗಿ ಹಾಗೂ ಶ್ರೀ ಮಹಾವೀರ ಜೈನ್, ರಾಘವ ಕಾಮನಮಕ್ಕಿ ಹಾಗೂ ಶ್ರೀ ಶ್ರೀಧರ ಹೆಗಡೆ ಚಪ್ಪರಮನೆ ಈ ಮುಂತಾದ ಕಲಾವಿದರು ಭಾಗವಹಿಸಲಿದ್ದಾರೆ.
ಈ ಯಕ್ಷಗಾನ ಆಖ್ಯಾನಕ್ಕೆ ಯಕ್ಷ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಸಂಘಟಕರು ಕೋರಿರುತ್ತಾರೆ.